ಜೆಎನ್‌ಎನ್‌ಸಿಇ : ಬೆಂಗಳೂರಿನಲ್ಲಿ ಹಿರಿಯ ವಿದ್ಯಾರ್ಥಿಗಳ ‘ನೆನಪಿನ ಅಂಗಳ – 2024’

1

ಶಿವಮೊಗ್ಗ : ದೇಶದ ಆರ್ಥಿಕತೆಯ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ವಿದ್ಯಾಸಂಸ್ಥೆಗಳು ನೀಡಬೇಕಿದೆ ಎಂದು ಬೆಂಗಳೂರು ಐಐಎಂ ನಿವತ್ತ ಪ್ರಾಧ್ಯಾಪಕ ಡಾ.ಆರ್. ವೈದ್ಯನಾಥನ್ ಹೇಳಿದರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಸಂಘದ ಬೆಂಗಳೂರಿನ ಸಮಿತಿಯ ಸಹಯೋಗದಲ್ಲಿ ಶನಿವಾರ ಬೆಂಗಳೂರಿನ ಆರ್.ವಿ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ‘ನೆನಪಿನ ಅಂಗಳ – ೨೦೨೪’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವದ ಪ್ರಮುಖ ಆರ್ಥಿಕತೆಯ ಪಾಲನ್ನು ಭಾರತ ಮತ್ತು ಚೀನ ಹಂಚಿಕೊಂಡಿದೆ. ಇಂತಹ ಬೃಹತ್ ಬೆಳವಣಿಗೆಗೆ ಭಾರತದ ಅದ್ಭುತ ಆರ್ಥಿಕ ಸ್ವರೂಪ ಕಾರಣವಾಗಿದೆ. ನಮ್ಮ ಯುವ ಸಮೂಹಕ್ಕೆ ದೇಶದ ಆರ್ಥಿಕ ಸ್ವರೂಪದ ಕುರಿತು eನ ನೀಡಬೇಕಿದೆ. ನಮ್ಮ ಆರ್ಥಿಕತೆಯು ಉದಯೋನ್ಮುಖ ಆರ್ಥಿಕತೆಯಲ್ಲ ಅದು ಮರುಕಳಿಸುವ ಆರ್ಥಿಕತೆಯಾಗಿದೆ. ಪ್ರತಿಯೊಬ್ಬ ಭಾರತೀಯ ಮಹಿಳೆಯರು ಶ್ರೇಷ್ಟ ಅರ್ಥಶಾಸ್ತ್ರಜ್ಞರು. ಉಳಿತಾಯ ಮತ್ತು ಹೂಡಿಕೆಯ ಕುರಿತಾಗಿ ಅವರಲ್ಲಿರುವ eನವು ಗಹಿಣಿಯರನ್ನು ಶ್ರೇಷ್ಟತೆಯ ಸಾಲಿಗೆ ಸೇರಿಸಿದೆ ಎಂದು ಹೇಳಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಸಿಸ್ಕೊ ಕಂಪನಿ ಗ್ರಾಹಕ ವಿಭಾಗದ ಉಪಾಧ್ಯಕ್ಷೆ ಪಲ್ಲವಿ ಅರೋರ ಮಾತನಾಡಿ, ಕಾಲೇಜಿನ ಸಾಧನೆ ಮತ್ತು ಹೊರಹೊಮ್ಮುತ್ತಿರುವ ರೀತಿ ಕಂಡು ಸಂತೋಷವಾಗುತ್ತಿದೆ. ಶಿಕ್ಷಣದ ಜೊತೆಗೆ ಕತಜ್ಞತಾ ಮನೋಭಾವ ವನ್ನು ನಮ್ಮ ಕಾಲೇಜು ಕಲಿಸಿಕೊಟ್ಟಿದೆ ಎಂದು ಹೇಳಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಸಿಂಗಾಪುರ್ ಕ್ಸೆರೋಲಾಜಿಕಲ್ ಇಂಟರ್ನ್ಯಾಷನಲ್ ಕಂಪನಿ ಸ್ಥಾಪಕ ಶ್ರೀರಾಮ ಸುಬ್ಬರಾವ್, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿದರು.
ಇದೇ ವೇಳೆ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ‘ನೆನಪಿನ ಅಂಕಣ’ ಸ್ಮರಣ ಸಂಚಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ಪ್ರಾಂಶುಪಾಲರಾದ ಡಾ.ವೈ. ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ.ಕೆ.ಎಂ.ಬಸಪ್ಪಾಜಿ, ಕಾರ್ಯದರ್ಶಿ ಡಾ.ಎಸ್.ವಿ. ಸತ್ಯನಾರಾಯಣ, ಸಹ ಕಾರ್ಯದರ್ಶಿ ಸಜ ಸತ್ಯೋದಯ, ಎಂ.ಡಿ.ಸುನಿಲ್, ಬೆಂಗಳೂರು ಸಮಿತಿಯ ಅಧ್ಯಕ್ಷರಾದ ಡಾ.ಜಿ.ಆರ್. ಮಂಜುನಾಥ, ಸದಸ್ಯರಾದ ಅನಂತಪ್ರಸಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.