ಹಳ್ಳಿಯ ಮಲ್ಲಿಗೆ
ಘಮದಲಿ….
ಪೇಟೆ ಹುಡುಗಿ
ನಾಚಿ ಮೈಮರೆತಳು
ಘಮವು ಹೇಳಿತ್ತು..
ಹೇ… ಹುಡುಗಿ
ಇದು ಹಳ್ಳಿ….
ಹಳ್ಳಿಯೆಂದರೆ ಹಾಗೆ..
ಮೊದಲ ಮಳೆಯ
ಮಣ್ಣಿನ ಘಮಲಂತೆ.
ಬಾಲ್ಯದಾಟದ ಸವಿನೆನಪಂತೆ.
ಮಗುವಿಗೆ ತಾಯಾ ಮಡಿಲಿನಂತೆ
ಹಾಯಾದ ಅನುಭವ….
ಅಜ್ಜಿ… ದೊಡ್ಡಮ್ಮ ಮಾಡಿದ
ಹೋಳಿಗೆ ಹೂರಣದ ಸಿಹಿಯಂತೆ
ಸೋದರಮಾವ ಅಕ್ಕರೆಯಲಿ
ತಲೆ ನೇವರಿಸಿದ ಹಾಗೆ….
ಅತ್ತೆ…. ಸೊಸೆಗೆ ಮಲ್ಲಿಗೆ ದಂಡು
ಕಟ್ಟಿ… ಮುಡಿಸಿ..
ಚೆಂದವ ಕಂಡಂತೆ
ನಾ ಮಗುವಾಗಿನಿಂದ….
ನನಗೆ ಮಗುವಾದ ಮೇಲೂ…
ಬದಲಾಗದ ಪ್ರೀತಿಯ ಬಂಧ
ತವರೂರ ಕರುಳಬಳ್ಳಿಯ
ಬಾಂಧವ್ಯ.. ಸದಾ..
ಘಮಘಮಿಸುತ್ತದೆ..

ಶ್ರೀಮತಿ ಅನಿತಕೃಷ್ಣ.
ಶಿಕ್ಷಕಿ, ಜಿಧ್ಯಕ್ಷರು, ಕ.ರಾ.ಶಿ.ಸಾ.ಪ. ಶಿವಮೊಗ್ಗ.