ಪ್ರತಿಭೆ ಗುರುತಿಸಲು ಜನಪದ ಯುವಜನ ಮೇಳ ಸಹಕಾರಿ: ಡಾ|ರೆಜಿ ಜೋಸೆಫ್
ಶಿವಮೊಗ್ಗ: ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಎಲೆಮರೆಕಾಯಿಯಂತೆ ಸಾಧನೆ ಮಾಡಿದ ಸಾಧಕರನ್ನು ಕಲಾವಿದರನ್ನು ಗುರುತಿಸಲು ಸಂಘ ಸಂಸ್ಥೆಗಳು ಮುಂದೆ ಬರಬೇಕು. ಪ್ರತಿಭಾವಂತ ಕಲಾವಿದರನ್ನು ಗುರುತಿಸಲು ಜನಪದ ಯುವಜನ ಮೇಳ ಸಹಕಾರಿಯಾಗಿದೆ ಎಂದು ಜವಳ್ಳಿ ಕಾಲೇಜಿನ ಉಪ ಪ್ರಾಂಶುಪಾಲ ಡಾ| ರೆಜಿ ಜೋಸೆಫ್ ಹೇಳಿದರು.
ಅವರು ಹೊಸಮನೆಯ ಪತಂಜಲಿ ಯೋಗ ಕಲಾ ಮಂದಿರದಲ್ಲಿ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಕರ್ನಾಟಕ ಜನಪದ ಕಲಾ ಕೇಂದ್ರ ಆಶ್ರಯದಲ್ಲಿ ಏರ್ಪಡಿಸಿದ್ದ ಜನಪದ ಯುವಜನಮೇಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಪರಿವರ್ತನೆ ತರಲು ಸಂಘ ಸಂಸ್ಥೆಗಳ ಪಾತ್ರ ಮಹತ್ವದಾಗಿದೆ. ಪತಂಜಲಿ ಸಂಸ್ಥೆ ಹಲವಾರು ವರ್ಷಗಳಿಂದ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಮಾಜ ಸೇವೆ ಸಲ್ಲಿಸುತ್ತಾ ಮಾದರಿಯಾದ ಸಂಸ್ಥೆಯಾಗಿ ಬೆಳೆದಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಬಿ.ಎಡ್ ಕಾಲೇಜಿನ ಶರಣ ನಾಯಕ್ ಮಾತನಾಡಿ, ಸಮಾಜದ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಪ್ರತಿಯೊಬ್ಬರು ಸಕ್ರೀಯತೆಯಿಂದ ಸಮಾಜ ಸೇವೆ ಸಲ್ಲಿಸಿದಾಗ ಪ್ರಗತಿ ಕಾಣಲು ಸಾಧ್ಯ ಎಂದರು.
ಪುತ್ತೂರಿನ ಯಕ್ಷಗಾನ ಕಲಾವಿದ ಸಂದೇಶ್ ದೀಪ್ರೈ ಕಲ್ಲಂಗಳ , ತರೀಕೆರೆ ಕೃಷಿ ಅಧಿಕಾರಿ ಎ.ಎನ್. ಕರಿಯಪ್ಪ ಕನ್ನಡಜನಪದ ಪರಿಷತ್ತು ಅಧ್ಯಕ್ಷ ಡಿ.ವಿ.ಎಸ್. ಕಾಲೇಜಿನ ಪ್ರಾಂಶುಪಾಲ ಡಾ:ಎಂ. ವೆಂಕಟೇಶ್, ಉಪಾಧ್ಯಕ್ಷ ಡಾ: ಪಿ.ಬಾಲಪ್ಪ, ಆಡಳಿತಾಧಿಕಾರಿ ಎಂ .ಪೂವಯ್ಯ, ಕಡೂರಿನ ಶ್ರೀವಾರಿ ಭಜನಾ ಸಂಘದ ಸುಪ್ರಿಯಾ ಮಂಜುನಾಥ್, ಉಮಾ ಬಸವರಾಜ್, ಹೊನ್ನಾಳಿಯ ಎಂ.ಜೆ. ಯುವರಾಜ್, ಕರ್ನಾಟಕ ರಾಜ್ಯ ಗ್ರಾ.ಪಂ. ಸದಸ್ಯರ ಮಹಾ ಒಕ್ಕೂಟದ ರಾಜ್ಯ ಸಹ ಕಾರ್ಯದರ್ಶಿ ರೇಖಾ ಲೋಕೇಶ್ ಕಿಚಡಿ, ತಾಲ್ಲೂಕ್ಅಧ್ಯಕ್ಷೆ ಶ್ವೇತಾ ಬಸವರಾಜ, ಗಮಕ ಕಲಾವಿದ ವಿನಾಯಕ್, ಆಶಾ ಕಾರ್ಯಕರ್ತೆಯರಾದ ಭಾರತಿ, ಸವಿತಾ, ಮಂಜುಳಾ, ಶಿಲ್ಪಾ, ಲಕ್ಷ್ಮೀದೇವಿ, ಸಹ ಶಿಕ್ಷಕ ಕಷ್ಣಶೆಟ್ಟಿ, ಹೇಮಂತ, ಎ.ಬಿ.ಸಿ.ನ್ಯೂಸ್ ಚಾನಲ್ನ ಅರವಿಂದ, ಚಂದ್ರಪ್ಪ, ಸತ್ಯನಾರಾಯಣ, ಸವಿತಾ, ಆರ್.ಎಸ್. ಜ್ಯೋತಿ, ನೇತ್ರಾವತಿ, ಭೂದೇವಿ ಸಾಲಿಮಠ, ಭವಾನಿ ಶಂಕರ್ರಾವ್, ಜಿ.ಈ. ಶಿವಾನಂದಪ್ಪ ಉಪಸ್ಥಿತರಿದ್ದರು.
ಎಂ.ಈಶ್ವರಪ್ಪ ನವುಲೆ ಅಧ್ಯಕ್ಷತೆ ವಹಿಸಿದ್ದರು. ಸುಶೀಲ ಭವಾನಿ ಶಂಕರ್ರಾವ್ ಪ್ರಾರ್ಥಿಸಿದರು. ಪರಿಸರ ಸಿ.ರಮೇಶ್ ಸ್ವಾಗತಿಸಿ ದರು. ಪತಂಜಲಿ ಜೆ.ನಾಗರಾಜ್ ನಿರೂಪಿಸಿದರು. ರಂಗನಾಥ್ ವಂದಿಸಿದರು.