ಕಾಪಾಡಿಕೊಳ್ಳಬೇಕಾದದ್ದು ಸಂಪತ್ತನ್ನಲ್ಲ.. ನಿಮ್ಮ ತಂದೆ-ತಾಯಿಯರನ್ನ…

ತಂದೆ -ತಾಯಿಯೇ ದೇವರು ಎನ್ನುವ ಗಾದೆಯನ್ನು ನೀವು ಕೇಳೇ ಕೇಳಿರುತ್ತಿರಿ. ಆದರೇ ಈ ಕಲಿಯುಗದ ಜನ-ಮನಸ್ಥಿತಿಗಳ ಮರ್ಮವು ಈ ಗಾದೆಯ ಧೂಳಿಗೂ ಮಿಟುಕುವುದಿಲ್ಲ. ಕೇವಲ ಹಳ್ಳಿಗಳು ಮಾತ್ರ ಪಟ್ಟಣವಾಗುತ್ತಿಲ್ಲ, ಪ್ರತಿಯೊಬ್ಬರ ಮನಸ್ಸುಗಳು ಈ ಪಟ್ಟಣದ ಶೋಕಿಗಳಿಗೆ ಮೊರೆಹೋಗುತ್ತಿವೆ ಎಂದರೆ ತಪ್ಪಾಗಲಾರದು. ಜನರು ಈ ಸಿಟಿಯ ಜೀವನಶೈಲಿಗೆ ಆಕರ್ಷತರಾಗುತ್ತಿzರೆ. ದೊಡ್ಡ ಮಟ್ಟದಲ್ಲಿ ದುಡ್ಡು ಮಾಡಬೇಕು, ದೊಡ್ಡ ಶ್ರೀಮಂತರಾಗಬೇಕು ಎನ್ನುವ ಹುಚ್ಚಾಟದಲ್ಲಿ ಜನರ ಮೆದುಳು ಬರೀ ದುಡ್ಡು ದುಡ್ಡನ್ನೆ ಯೋಚನೆ ಮಾಡುವುದರಲ್ಲಿ ಮನಸ್ಸು ದಾರಿತಾಪ್ಪಿ ಅಂಧಕಾರಿಯಾಗುತ್ತಿದೆ.
ಇಂದಿನ ಪೀಳಿಗೆಗಳ ಕನಸು ಏನೆಂದು ಕೇಳಿದಾಗ ಭಾಗಷಹ ಶೇ.೬೦-೭೦ ಮಂದಿ ಬರೀ ದುಡ್ಡು ದುಡ್ಡು ಮಾಡುವುದು ಎನ್ನುವುದಾಗಿದೆ. ಈ ಕಾಂಚಾಣದ ಮದ್ದಿನಲ್ಲಿ ರೋಗಿಗಳಾಗಿzರೆ. ಹೌದು ಇವತ್ತು ಪ್ರತಿಯೊಂದಕ್ಕೂ ದುಡ್ಡಿನ ವ್ಯಾಮೋಹ ಹೆಚ್ಚಾಗಿ ಈ ಕಾಂಚಣವು ಒಂದು ದೊಡ್ಡ ರಾಕ್ಷಸದಂತೆ ಬೆಳೆದುನಿಂತಿದೆ.


ನನ್ನ ಮನಸ್ಸಲ್ಲಿ ಮೂಡುವ ಪ್ರಶ್ನೆ ಎಂದರೆ, ಇನ್ನೂ ಕೊಂಚ ಕಾಲಗಳು ಕಳೆದಂತೆ ಹುಟ್ಟುಕೂಸಿನ ಮೊದಲ ತೊದಲ ನುಡಿಯೂ, ಅಪ್ಪ ಅಮ್ಮಾ ಎನ್ನುವುದನ್ನು ಬಿಟ್ಟು ದುಡ್ಡು ದುಡ್ಡು ಎನ್ನುವುದಾಗಬಹುದು. ದುಡ್ಡನ್ನು ಗಳಿಸಲು ಪ್ರತ್ಯೇಕವಾದ ದಾರಿಗಳನ್ನು ಹುಡುಕಿ, ಮನುಷ್ಯ ಮನುಷ್ಯನನ್ನೆ ವಂಚಿಸಿ ಹಣ ಗಳಿಸುವ ಪಥವನ್ನು ಕಂಡುಕೊಳ್ಳುತ್ತಿzರೆ.
ಇನ್ನೂ ಕೆಲವರು ಎಷ್ಟು ಮಾನಸಿಕರಾಗಿzರೆ ಎಂದರೆ.. ಅವರ ಮೊಮ್ಮಕ್ಕಳ ಪೀಳಿಗೆಯೂ ಕುತೂಣ್ಣುವ ತನಕ ಅಸ್ತಿ ಅಂತಸ್ತು ಮಾಡಿ ತಮ್ಮ ಸದ್ಯದ ಜೀವನವನ್ನು ಅನುಭವಿಸುವುದನ್ನೇ ಮರೆತು ಅದನ್ನು ಕಾಪಾಡಿಕೊಳ್ಳಲು ವಿವಿಧ ದಾರಿಯ ವೆವಸ್ಥೆ ಮಾಡಿಕೊಳ್ಳುತ್ತಿzರೆ.
ಹೌದು ಒಪ್ಪೋಣ ಮಾನವನ ಸೌಕರ್ಯತೆಗಳಿಗೆ, ಅವನ ಪ್ರತಿಯೊಂದು ಅವಶ್ಯಕತೆಗಳಿಗೆ ಈ ದುಡ್ಡು ಮುಖ್ಯವಾಗಿದೆ. ಹಾಗಂತ ದುಡ್ಡಿಗೆ ಬೆಲೆ ಕೊಡಬಾರದೆಂದು ನಾನು ಹೇಳುತ್ತಿಲ್ಲ.
ದುಡ್ಡಿಂದಾನೆ ಎ ಎನ್ನುವ ಇಂದಿನ ಈ ಹೀನಮಾಯ ಸ್ಥಿತಿಯನ್ನು ನೋಡಿ ಒಂದು ಅದ್ಬುತವಾದ ಮಾತು ನೆನಪಿಗೆ ಬರುತ್ತದೆ. ಮಕ್ಕಳಿಗಾಗಿ ಅಸ್ತಿ ಮಾಡುವುದಕ್ಕಿಂತ ನಿಮ್ಮ ಮಕ್ಕಳನ್ನೇ ಅಸ್ತಿ ಮಾಡಿ ಎನ್ನುವ ಮಾತು ಎಷ್ಟು ಅರ್ಥಪೂರ್ಣವಾಗಿದೆ ಅಲ್ವಾ?.
ಆದರೇ ನಾನು ಹೇಳುವುದೇನೆಂದರೆ ನಮ್ಮ ತಂದೆತಾಯಿಯರಿಗೆ ಮಕ್ಕಳಾದ ನಾವುಗಳು ನಮ್ಮ ತಂದೆತಾಯಿಯರನ್ನೆ ಅಸ್ತಿಮಾಡಬೇಕು, ಪ್ರೀತಿ ಮಾಡಬೇಕು. ಕಾಪಾಡಿಕೊಳ್ಳಬೇಕಾದದ್ದು ಸಂಪತ್ತು ಆಸ್ತಿಯನಲ್ಲ, ಅಪ್ಪ ಅಮ್ಮಂದಿರನ್ನು ಎನ್ನುವ ಈ ವಾಕ್ಯವು ನಮ್ಮ ಮನಸ್ಸಿನಲ್ಲಿ ಮೊದಲು ಮೂಡಬೇಕು. ಸಂಪತ್ತೆನ್ನುವುದು ಕ್ಷಣಿಕವಾದದ್ದು ಅದು ಕರಗಿಹೋಗಬಹುದು ಮತ್ತು ಮರಳಿಯೂ ಬರಬಹುದು ಗಳಿಸಿಕೊಳ್ಳಲುಬಹುದು. ಆದರೇ ಅಪ್ಪ ಅಮ್ಮಂದಿಯರ ವಿಷಯದಲ್ಲಲ್ಲ. ನೀವು ನಾವುಗಳು ಈ ಕಾಂಚಾಣದ ಮದ್ದಿನಲ್ಲಿ ಎಷ್ಟು ಕುರುಡರಾಗಿದ್ದೇವೆ ಎಂದರೆ ಹಣ ಗಳಿಸುವ ಸ್ವಾರ್ಥದಲ್ಲಿ ನಿಸ್ವಾರ್ಥ ಜೀವಿಗಳಾದ ತಂದೆತಾಯಿಯರ ಪ್ರೀತಿಯನ್ನೇ ಮರೆತಿದ್ದೇವೆ. ಮುದಿ ಜೀವಗಳು ಬಯಸುವುದು ಹಣ, ಮೃಸ್ಟಾನ್ನ ಭೋಜನ, ಶ್ರೀಮಂತಿಕೆಯ ಸಂಪತ್ತಿನ ಜೀವನವಲ್ಲ. ತಮ್ಮ ತನವಾದ ತಮ್ಮ ಮಕ್ಕಳ ಜೊತೆಗೆ ಸ್ವಲ್ಪ ಪ್ರೀತಿಯ ಮಾತುಗಳು, ನಗುವ ಕ್ಷಣಗಳು, ಅಷ್ಟಿದ್ದರೆ ಸಾಕು. ಆ ಜೀವಗಳಿಗೆ. ನನ್ನ ಮಕ್ಕಳನ್ನು ಚೆನ್ನಾಗಿಟ್ಟಿರು ಎಂದು ಆ ಸೃಷ್ಟಿಕರ್ತನಲ್ಲಿ ಪ್ರಾರ್ಥಿಸಿಕೊಳ್ಳುತ್ತವೆ.
ನಿಮಗೆಲ್ಲ ನನ್ನದೊಂದು ನೇರವಾದ ಪ್ರಶ್ನೆ? ದೇವರ ಹುಂಡಿಗೆ ದುಡ್ಡು ಹಾಕಿ, ನನ್ನ ಹೆತ್ತವರು ಚೆನ್ನಾಗಿರಲಿ ಎಂದು ಹರಕೆ ಹೊತ್ತುಕೊಂಡಿದ್ದೀರಾ? ಹೀಗೆ ದೇವರಲ್ಲಿ ಬೇಡಿಕೊಂಡಿದ್ದರೆ, ನಿಮಗೆ ಈ ಜೇಯನದೊಂದು ದೊಡ್ಡ ಸಲಾಮು. ಆದರೇ ನಾನು ನೋಡಿರುವ ಪ್ರಕಾರ ಸ್ವಾರ್ಥಿಯಾದ ಮನುಷ್ಯನ ಕುಲವು ದೇವರ ಹುಂಡಿಗೆ ೧೦ ರೂಪಾಯಿ ಹಾಕಿ ದೇವರೇ ನನ್ನನ್ನು ಕೋಟ್ಯಧಿಪತಿಯನ್ನಾಗಿ ಮಾಡು ಎಂದು ಕೇಳಿಕೊಳ್ಳುವುದು ಈ ಕಲಿಯುಗದ ಅಮಾನುಷ ಮನಸ್ಥಿತಿಯಾಗಿದೆ.
ತಂದೆ ತಾಯಿಯರ ಮಾತುಗಳನ್ನು ಕೇಳದವರು, ಅವರನ್ನು ಪ್ರೀತಿಗೆ ಬೆಲೆ ಕೊಡದವರು, ಏZmmqs ಞಟಠಿeಛ್ಟಿ’o Zb Zಠಿeಛ್ಟಿ’o bZqs ಅಂತಾ ವಾಟ್ಸಪ್ಪ್ ಸ್ಟೇಟಸ್ ಹಾಕಿ ವಿಶ್ ಮಾಡಿದ್ರೆ ನಿಮ್ಮ ಹರಕೆಯ ಮಾತನ್ನು ಆ ದೇವರು ಹೇಗೆ ಕೇಳಿಸಿಕೊಳ್ಳಬಲ್ಲನು? ಎನ್ನುವ ಪ್ರಶ್ನೆ ನನ್ನದಾಗಿದೆ.
ನೆನೆಪಿರಲಿ ದೈವ ಕ್ಷಮಿಸಿದರು ಕರ್ಮ ಕ್ಷಮಿಸುವುದಿಲ್ಲ. ನೀವು ಇವತ್ತು ನಿಮ್ಮ ತಂದೆತಾಯಿಯರಿಗೆ ಮಾಡಿದ್ದು ಮುಂದೆ ನಿಮ್ಮ ಮಕ್ಕಳು ನಿಮಗೆ ಮಾಡುತ್ತಾರೆ ಇದೆ ಕರ್ಮ. ಅದು ಪ್ರೀತಿಯಾಗಿಯೂ ಮತ್ತು ನರಕವಾಗಿಯೂ ನಿಮಗೆ ಪ್ರಾಪ್ತಿಯಾಗೆಯಾಗುತ್ತದೆ.
ನನ್ನ ಲೇಖನದ ಉದ್ದೇಶವಿಷ್ಟೇ ಕಾಪಾಡಿಕೊಳ್ಳಬೇಕಾದದ್ದು ಸಂಪತ್ತು ಆಸ್ತಿ ಅಂತಸ್ತನಲ್ಲ, ನಮಗೆ ಉಸಿರನ್ನು ಭಿಕ್ಷೆಕೊಟ್ಟ ಆ ಎರಡು ಜೀವಗಳನ್ನು .
ನಿಮ್ಮ ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ನಿಮ್ಮ ತಂದೆತಾಯಿಯರನ್ನೇ ಆಸ್ತಿ ಮಾಡಿ ಅವರನ್ನು ಕಾಪಾಡಿಕೊಳ್ಳಿ.

ಅಜೇಯ್. ಪಿ. ಎಸ್, ಯುವಬರಹಗಾರ,
ಬೀದರ್ (ಮುತ್ತಂಗಿ)