ನಾವೇನು ತಿಳಿದುಕೊಂಡಿದ್ದೇವೆಂಬ ಬಗ್ಗೆ ಚಿಂತನೆ ಅಗತ್ಯ….

VEERASHAIVA

(ಹೊಸ ನಾವಿಕ)
ಶಿವಮೊಗ್ಗ: ಬೇರೆಯವರ ಬಗ್ಗೆ ಮಾತನಾಡುವುದಕ್ಕಿಂತ ನಾವೇನು ತಿಳಿದುಕೊಂಡಿದ್ದೇವೆ ಎಂಬುವುದು ಮುಖ್ಯ ಎಂದು ಬೆಕ್ಕಿನ ಕಲ್ಮಠದ ಸಂಸ್ಕೃತ ಮಹಾ ವಿದ್ಯಾಲಯದ ನಿವೃತ್ತ ಉಪನ್ಯಾಸಕ ಡಾ.ಸಿ. ರೇಣುಕರಾಧ್ಯ ಹೇಳಿದರು.
ಶಿವಮೊಗ್ಗ ಜಿ ಬೇಡ ಜಂಗಮ ಸಮಾಜದಿಂದ ಇತ್ತೀಚೆಗೆ ಏರ್ಪಡಿಸಿದ್ದ ಪಂಚಚಾರ್ಯ ಯುಗಮಾನೋತ್ಸವ ಮತ್ತು ಶಿವದೀಕ್ಷೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ, ಪ್ರತಿಯೊಬ್ಬರು ಧರ್ಮ ಗ್ರಂಥ ಅಧ್ಯಯನ ಮಾಡಬೇಕು. ಜನನ ಮರಣ ಗೆದ್ದವರು ಸದಾ ಸಂಚಾರಶೀಲ ರಾಗಿರುತ್ತಾರೆ. ಮದ, ಕ್ರೋಧ, ಮತ್ಸರವನ್ನು ಗೆದ್ದವರು, ಜೋಳಿಗೆ ಬೆತ್ತ ಹಿಡಿದು ಭೀಕ್ಷಾಟಣೆ ಮಾಡಿ, ದಾಸೋಹ ಮಾಡುವವರು, ನೀಲಾಂಬರಿ, ಯತಿ, ಶಿವಯೋಗಿಗಳೇ ಜಂಗಮವರು ನಮ್ಮ ಆಚಾರ ವಿಚಾರ ಪಾಲನೆ ಮಾಡಬೇಕು. ಸದಾ ಬಸ್ಮದಾರಿ ಯಾಗಿರಬೇಕು. ಪಂಚಾಕ್ಷರಿ ಮಂತ್ರ ಗಳನ್ನು ನಿತ್ಯ ಪಠಣ ಮಾಡಬೇಕು ಎಂದರು.
ಮುಸ್ಲಿಂರಿಗೆ ಕುರಾನ್, ಕ್ರಿಶ್ಚಿಯನ್ನರಿಗೆ ಬೈಬಲ್ ಇರುವಂತೆ ವೀರಶೈವರಿಗೆ ಸಿದ್ಧಾಂತ ಶಿಖಾಮಣಿಯೇ ಧರ್ಮಗ್ರಂಥ ಎಂದು ಧರ್ಮಗ್ರಂಥ, ಸಿzಂತ ಶಿಖಾಮಣಿ ಬರೀ ಗ್ರಂಥವಲ್ಲ ಮಹಾಕಾವ್ಯಗಳು ಅದರಲ್ಲಿವೆ. ಈ ಗ್ರಂಥದ ಬಗ್ಗೆ ವೀರಶೈವರೇ ಹೆಚ್ಚಾಗಿ ತಿಳಿದುಕೊಂಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ದೀಕ್ಷಾ ವಟುಗಳು ಸಿzಂತ ಶಿಖಾಮಣಿ, ಪಂಚಾಪೀಠಗಳು, ಮಂತ್ರಗಳ ಬಗ್ಗೆ ಮುಖ್ಯವಾಗಿ ತಿಳಿದುಕೊಳ್ಳಬೇಕು. ಜನರು ಕೇಳಿದಾಗ ಅವುಗಳ ಬಗ್ಗೆ ಗೊತ್ತಿಲ್ಲ ಎನ್ನಬಾರದು ಎಂದು ಕಿವಿ ಮಾತು ಹೇಳಿದರು.
ಜಂಗಮರು ವೀರಶೈವರಾದ ನಾವು ಯಾವ ರೀತಿ ಇರಬೇಕು ಎಂಬುವುದನ್ನು ಮೊದಲು ತಿಳಿದು ಕೊಳ್ಳಬೇಕು. ಸಮಾಜದಲ್ಲಿ ನಾನಾ ಸಮಸ್ಯೆಗಳು ತಲೆದೋರುತ್ತವೆ. ಆಚಾರ ವಿಚಾರ ಶುದ್ಧವಾಗಿzರೆ. ಸಮದ್ಧ ಮಳೆಬೆಳೆ ಕಾಣಲು ಸಾಧ್ಯ ಎಂದರು.
ಸಮಾಜದ ಪ್ರಧಾನ ಕಾರ್ಯದರ್ಶಿ ಸೋಮನಾಥ್ ಮಾತನಾಡಿ, ಸತತ ೨ನೇ ವರ್ಷದ ಯುಗಮಾನೋತ್ಸವ ನಡೆಸಲಾಗು ತ್ತಿದೆ. ಈ ವರ್ಷ ಶಿವದೀಕ್ಷೆ ಕೊಡಿ ಸಿದ್ದು, ವಿಶೇಷವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಸೇರಿದಂತೆ ವಿವಿಧೆಡೆ ಯಿಂದ ಆಗಮಿಸಿದ್ದ ೫೦ಕ್ಕೂ ಹೆಚ್ಚು ಅಧಿಕ ವಟುಗಳಿಗೆ ಶಿವದೀಕ್ಷೆ ನೀಡಲಾಯಿತು. ದೀಕ್ಷೆ ಕಾರ್ಯ ಕ್ರಮದ ನಂತರ ಗಾಂಧಿಬಜರ್ ನಿಂದ ವೀರಶೈವ ಕಲ್ಯಾಣ ಮಂದಿರ ದವರೆಗೂ ಶಿವದೀಕ್ಷೆ ಪಡೆದವರ ಮೆರವಣಿಗೆ ನಡೆಯಿತು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ವೀರಶೈವ ಸಮಾಜ ವಿದ್ಯಾರ್ಥಿಗಳಾದ ವಿeನ ವಿಭಾಗದಲ್ಲಿ ರಾಜ್ಯಕ್ಕೆ ೯ನೇ ರ್‍ಯಾಂಕ್ ಪಡೆದ ಡಿ.ಎನ್. ನಿತ್ಯಾಶ್ರೀ, ಕಲಾ ವಿಭಾಗದಲ್ಲಿ ರಾಜ್ಯಕ್ಕೆ ೪ನೇ ರ್‍ಯಾಂಕ್ ಪಡೆದ ಕೆ.ಸಿ.ಚುಕ್ಕಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೋಣಂದೂರು ಶ್ರೀಕ್ಷೇತ್ರದ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, ತರೀಕೆರೆ ಹಿರೇಮಠದ ಶ್ರೀ ಜಗದೀಶ ಶಿವಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಸಮಾಜದ ಜಿಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಉಪಾಧ್ಯಕ್ಷ ಲಿಂಗರಾಜ್ ಚಿತ್ರಹಟ್ಟಿಮಠ್, ತಾಲ್ಲೂಕು ಅಧ್ಯಕ್ಷ ಲೋಕೇಶ್ ದೊಡ್ಡಮಠ, ಜಗದೀಶ್ವರಯ್ಯ, ಕುಮಾರಸ್ವಾಮಿ, ಹಾಲಸ್ವಾಮಿ, ನಾಗರಾಜ ಸ್ವಾಮಿ, ಉಮೇಶ್ ಹಿರೇಮಠ, ಬಸಯ್ಯ, ಸಮಾಜದ ಮಹಿಳಾಧ್ಯಕ್ಷೆ ಸುನಂದ ಎಂ.ವಿ., ರಶ್ಮಿ, ಜ್ಯೋತಿ, ಆರತಿ, ಗಿರಿಜಮ್ಮ, ರೇಣುಕ, ರೇಣುಕಮ್ಮ, ಶಂಬುಲಿಂಗಯ್ಯ, ಪ್ರೇಮಾ, ವೀರಸಂಗಯ್ಯ, ಮಲ್ಲಿಕಾರ್ಜುನಯ್ಯ ಸೇರಿದಂತೆ ಸಮಾಜದ ಇತರೆ ಪದಾಧಿದಿಕಾರಿ ಗಳು ಭಾಗವಹಿಸಿದ್ದರು.