ಸಹಕಾರಿಯಲ್ಲಿ ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಪಡೆಯುವುದು ಕಷ್ಟಸಾಧ್ಯ : ಕೆ.ಸತೀಶ್

ಸಾಗರ : ಸಹಕಾರಿಯಲ್ಲಿ ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಪಡೆಯು ವುದು ಕಷ್ಟಸಾಧ್ಯ. ಸೇವಾವಧಿಯಲ್ಲಿ ಗ್ರಾಹಕರ ಹಿತ ಕಾಯುವ ಜೊತೆಗೆ ಸಂಸ್ಥೆಯ ಶ್ರೇಯೋಭಿ ವೃದ್ದಿಯನ್ನು ಪರಿಗಣನೆಗೆ ತೆಗೆದು ಕೊಳ್ಳುವುದು ಅತ್ಯಾಗತ್ಯ ಎಂದು ಸಾಗರ ಪಟ್ಟಣ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಸತೀಶ್ ತಿಳಿಸಿದರು.
ಇಲ್ಲಿನ ಸಾಗರ ಪಟ್ಟಣ ಹೌಸ್ ಬಿಲ್ಡಿಂಗ್ ಕೋ. ಆಪರೇಟಿವ್ ಸೊಸೈಟಿಯಲ್ಲಿ ೩೭ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಕಾರ್ಯದರ್ಶಿ ನಾಗಪ್ಪ ದಂಪತಿ ಗಳನ್ನು ಬೀಳ್ಕೊಡುವ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ನಾಗಪ್ಪ ಅವರು ೧೯೮೬ರಲ್ಲಿ ೨೦೦ ರೂ. ಸಂಬಳಕ್ಕೆ ಗುಮಾಸ್ತ ರಾಗಿ ಸೇವೆಗೆ ಸೇರಿದ್ದರು. ಅಂದಿ ನಿಂದ ಇಂದಿನವರೆಗೆ ವಿವಿಧ ಹುz ಗಳಲ್ಲಿ ಕಾರ್ಯನಿರ್ವಹಿಸಿ ಕಳೆದ ಐದು ವರ್ಷದಿಂದ ಸಂಸ್ಥೆಯ ಕಾರ್‍ಯ ದರ್ಶಿಯಾಗಿ ಎಲ್ಲರೂ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿzರೆ. ಅವರ ನಿವೃತ್ತಿ ಬೇಸರ ಎನಿಸಿದರೂ ಸೇವೆಯಲ್ಲಿ ನಿವೃತ್ತಿ ಸಹಜ ಪ್ರಕ್ರಿಯೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹೇಳಿದರು.

ಸೊಸೈಟಿ ನಿಕಟಪೂರ್ವ ಅಧ್ಯಕ್ಷ ಎಸ್.ಬಿ.ರಘುನಾಥ್ ಮಾತನಾಡಿ, ನಾಗಪ್ಪ ಅವರು ಸೇವೆಗೆ ಸೇರುವ ಸಂದರ್ಭದಲ್ಲಿ ಸಂಸ್ಥೆಯು ಬಾಡಿಗೆ ಕಟ್ಟಡದಲ್ಲಿತ್ತು. ಆಡಳಿತ ಮಂಡಳಿ ಜೊತೆ ಸಾಲ ವಸೂಲಾತಿ ಸೇರಿದಂತೆ ಗ್ರಾಹಕರಿಗೆ ವಿವಿಧ ಸೌಲಭ್ಯ ತಲುಪಿಸುವಲ್ಲಿ ನಾಗಪ್ಪ ಅವರ ಶ್ರಮ ಸಾಕಷ್ಟಿದೆ. ೩೭ ವರ್ಷದ ಸೇವೆಯಲ್ಲಿ ಅವರು ಅನೇಕ ಏಳುಬೀಳುಗಳನ್ನು ಕಂಡಿ ದ್ದರೂ ಸಂಸ್ಥೆಯ ಶ್ರೇಯೋಭಿ ವೃದ್ದಿಗೆ ವಿರುದ್ದವಾಗಿ ಯಾವತ್ತೂ ನಡೆದುಕೊಂಡಿಲ್ಲ ಎಂದರು.
ಸನ್ಮಾನ ಸ್ವೀಕರಿಸಿ ಮಾತ ನಾಡಿದ ನಾಗಪ್ಪ, ಸುದೀರ್ಘ ಸೇವೆಯ ನನಗೆ ತೃಪ್ತಿ ತಂದಿದೆ. ಗ್ರಾಹಕರ ಹಿತ ಕಾಯುವ ನಿಟ್ಟಿ ನಲ್ಲಿ ನಮ್ಮ ಸಂಸ್ಥೆ ಆರು ದಶಕ ಗಳಿಂದ ಶ್ರಮಿಸುತ್ತಿದೆ. ಸಂಸ್ಥೆ ಬೆಳವ ಣಿಗೆಯಲ್ಲಿ ನಾನು ಸಹ ಅಳಿಲು ಸೇವೆ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಸಂಸ್ಥೆ ಬೆಳವಣಿಗೆಗೆ ಬೇಕಾದ ಸಲಹೆ ಸಹಕಾರ ನೀಡುವುದಾಗಿ ತಿಳಿಸಿದರು.
ಉಪಾಧ್ಯಕ್ಷ ಎನ್.ಬಸವ ರಾಜ್, ಸರಸ್ವತಿ ನಾಗಪ್ಪ, ಕಾರ್ಯ ದರ್ಶಿ ಪ್ರಮೋದ್, ನಿರ್ದೇಶಕ ರಾದ ಗೋಪಾಲಕೃಷ್ಣ ಶ್ಯಾನ ಭಾಗ್, ಎನ್.ಉಷಾ, ವೀರರಾಜ ಜೈನ್, ಪದ್ಮನಾಭ ವಿ., ಜೆ.ಭೀ ಮಣ್ಣ, ಗಣಪತಿ ಎಂ., ವಿ. ಶಂಕರ್, ವಿ.ಚಂದ್ರಶೇಖರ್, ನಾಗಪ್ಪ ಟಿ., ವಿದ್ಯಾನಂದ ಸಿ.ಬಿ. ಜೇಡಿಕುಣಿ ಜಗನ್ನಾಥ್ ಇನ್ನಿತರರು ಹಾಜರಿದ್ದರು. ಸುಜತ ಪ್ರಾರ್ಥಿ ಸಿದರು. ಕೆ.ಎಸ್.ಶ್ರೀಧರ್ ಸ್ವಾಗತಿಸಿ ದರು. ಡಾ. ಬಿ.ಎಸ್.ಪ್ರಭಾಕರ್ ವಂದಿಸಿದರು. ಉಮೇಶ್ ಹಿರೇನೆ ಲ್ಲೂರು ನಿರೂಪಿಸಿದರು.