ಅಮೂಲ್ಯವಾದ ‘ಆಹಾರ’ ವ್ಯರ್ಥ ಮಾಡುವುದು ಸರಿಯೇ..?

ಅನ್ನದ ಮಹತ್ವ ಅರಿತವರಿಗೆ ಮಾತ್ರ ಗೊತ್ತು. ಹಸಿದ ಹೊಟ್ಟೆಗೆ ಭಿಕರಿಯಾಗಿಯೂ ಸಹ ಕೆಲವೊಮ್ಮೆ ಬಾರಿ ಏನೆ ಹುಡುಕಾಟ, ನಮ್ಮೆಲ್ಲರ ಹೊಟ್ಟೆ ತುಂಬಿಸುವರು ಎಂದದೇ ನಮ್ಮ ಅನ್ನದಾತರು. ಪ್ರತಿನಿತ್ಯ ನಾವು ‘ರೈತ’ ರನ್ನು ನೆನೆ ನೆನೆದು ಉಣಬೇಕು. ಅವರು ಬೆಳೆದು ಹಾಕಿದ ಅನ್ನದಿಂದಲೇ ನಾವೆಲ್ಲಾ ಬದುಕಲು ಸಾಧ್ಯವಾಗಿದೆ. ತಿನ್ನಲು ಅನ್ನವೇ ಇಲ್ಲದಿದ್ದರೆ ಮನುಜನ ಪಾಡು ಏನಾಗುತ್ತಿತ್ತು. ಒಮ್ಮೆ ಯೋಚಿಸಿ. ಅದೆನೇ ಇರಲಿ, ಇತ್ತೀಚೆಗೆ ಬಹುತೇಕ ಸಿರಿವಂತರ ಮನೆಯಲ್ಲಿ ಕೆಲವು ಅದ್ದೂರಿ ಕಾರ್ಯಕ್ರಮಗಳು ನಡೆಯುತ್ತವೆ. ಅದು ಮದುವೆಯಾಗಿರಬಹುದು ಅಥವಾ ವಿಶೇಷವಾಗಿ ದೇವಸ್ಥಾನಗಳಲ್ಲಿ ಪ್ರಸಾದ ಪಂಥಿಗಳಗಿರಬಹುದು. ಸಾರ್ವಜನಿಕರು, ಭಕ್ತರು ಸಾವಧಾನವಾಗಿ ತಮಗೆ ಬೇಕಾದಷ್ಟು ಊಟ ಮಾಡಿದರೆ ಪರಂಥು ಬೇಸರವಿಲ್ಲ. ಆದರೆ ಕೆಲವರು ಆ ಆಹಾರವನ್ನು ಎಚೇತ್ತ ವಾಗಿ ಕೆಡಿಸುವುದೇ ವಿಷಾದನೀಯ ಸಂಗತಿಯಾಗಿದೆ.
ಭಾರತವು ಹಸಿವುಮುಕ್ತ ದೇಶವನ್ನಾಗಿ ಮಾಡಬೇಕೆಂದು ಸುಸ್ಥಿರ ಅಭಿವೃದ್ದಿ ಯೋಜನೆಗಳಲ್ಲಿ ಕೆಲವು ಅಂಶವನ್ನು ಗಮನದಲ್ಲಿಡಬೇಕಾಗಿರುವದು ಇಂದಿನ ಅಗತ್ಯವಾಗಿದೆ. ಏತನ್ಮಧ್ಯೆ ಇನ್ನೂ ಸಹ ಆ ಯೋಜನೆ ಸಂಪೂರ್ಣತೆಯನ್ನು ಹೊಂದ ಬೇಕಿದೆ. ನಾವೂ ಸಹ ಈ ಆಹಾರ ವ್ಯರ್ಥ ವಾಗುವುದರ ಬಗೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ಜಗತ್ತಿನಲ್ಲಿ ಆಹಾರದ ಸಮಸ್ಯೆಯನ್ನು ಎದುರಿಸುತ್ತಿರುವ ಅನೇಕ ದೇಶಗಳಲ್ಲಿ ಭಾರತವು ಒಂದು ಎಂಬುದನ್ನು ಮರೆಯದಿರೋಣ. ಇಷ್ಟೆಲ್ಲದರ ಮಧ್ಯೆ ರೈತರು ಕಷ್ಟ ಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆಯೂ ಸಹ ಇಲ್ಲವಾಗಿರುವದು ಖೇದಕರ ವಿಷಯ. ಆದರೆ ಇತ್ತೀಚಿನ ದಿನಗಳಲ್ಲಿ ಆಹಾರದ ಶೈಲಿಯೂ ಬದಲಾಗುತ್ತಿದೆ. ಎಲ್ಲರೂ ಆನ್ ಲೈನ್ ಮೊರೆ ಹೋಗುತ್ತಿರು ವುದು ಸರ್ವೆ ಸಾಮಾನ್ಯವಾಗಿದೆ. ಮನುಷ್ಯನ ಅಭಿರುಚಿಯೂ ಸಹ ಬದಲಾವಣೆಯತ್ತ ಸಾಗಿದೆ. ಎಷ್ಟೋ ಸಲ ನಾವು ಮದುವೆ, ಸಭೆ, ಸಮಾರಂಭಗಳು ಸೇರಿದಂತೆ ದೇವಸ್ಥಾನಗಳಲ್ಲಿ ಆಹಾರವನ್ನು ಗೊತ್ತಿದ್ದು ಗೊತ್ತಿಲ್ಲದಂತೇ ಬಿಸಾಡುತ್ತೇವೆ. ಇಲ್ಲವಾದರೆ ಊಟದಲ್ಲಿಯೇ ಬಿಡುವಂತಹ ಮನಃಸ್ಥಿತಿ ಹೊಂದಿದ್ದೇವೆ. ಆಹಾರವನ್ನು ಮಿತವಾಗಿ ಹಾಕಿಸಿಕೊಳ್ಳುವುದೇ ಇಲ್ಲ. ಒಮ್ಮೊಮ್ಮೆ ಊಟವನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ನಾವೇನು ಅವರಿಗೆ ಹೋಗಿ ಬುದ್ದಿ ಹೇಳಲು ಸಾಧ್ಯವೇ..? ಖಂಡಿತವಾಗಿಯೂ ಸಾಧ್ಯವಿಲ್ಲ ಎಂಬ ಮನಸ್ಸು ನಮ್ಮದಾಗಿರುತ್ತದೆ. ಅವರಿಗೆ ಆಹಾರದ ಸಮಸ್ಯೆ ಎದುರಿಸುತ್ತಿರುವ ವಿಷಯ ತಿಳಿದಿದ್ದರೂ ಸಹ ನಾವು ಹೀಗೆ ಮಾಡಿದರೆ ಹೇಗೆ..? ಎಂಬ ಪರಿeನವೂ ಇರುವುದಿಲ್ಲ.


ಆಹಾರ ವ್ಯರ್ಥವಾಗಿರವ ‘ಅಂಕಿ ಅಂಶ’ :
ಭಾರತದಲ್ಲಿ ಪ್ರತಿ ವರ್ಷ ಅನೇಕ ಜನರು ಹಸಿವಿನಿಂದ ಸಾಯುತ್ತಿದ್ದಾರೆ ಮತ್ತು ೨೦೧೯ರಲ್ಲಿ ಪ್ರಪಂಚದಾದ್ಯಂತ ೯೩೧ ಮಿಲಿ ಯನ್ ಟನ್ ಆಹಾರ ವ್ಯರ್ಥವಾಗಿದೆ. ಅಲ್ಲದೆ ಜಗತಿಕ ತಲಾ ಮಟ್ಟದಲ್ಲಿ ಪ್ರತಿ ವರ್ಷ ೧೨೧ ಕೆಜಿ ಆಹಾರವು ವ್ಯರ್ಥವಾಗುತ್ತಿದೆ. ಇದರಲ್ಲಿ ೭೪ ಕೆಜಿ ನಮ್ಮ ಮನೆಗಳಲ್ಲಿ ನಡೆಯುತ್ತಿದೆ ಎಂದರೆ ತಪ್ಪಾಗಲಾರದು . ಅಂದಾಜು ೯೩೧ ಮಿಲಿಯನ್ ಟನ್ ಆಹಾರ ಅಥವಾ ೨೦೧೯ರಲ್ಲಿ ಗ್ರಾಹಕರಿಗೆ ಲಭ್ಯವಿರುವ ಒಟ್ಟು ಆಹಾರದ ಶೇ.೧೭, ಮನೆಗಳು, ಚಿಲ್ಲರೆ ವ್ಯಾಪಾರಿಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ಆಹಾರ ಸೇವೆಗಳ ತ್ಯಾಜ್ಯ ತೊಟ್ಟಿಗಳಿಗೆ ಸೇರಿದೆ ಎಂದು ಆಹಾರ ತ್ಯಾಜ್ಯ ಸೂಚ್ಯಂಕ ವರದಿ ೨೦೨೧ರಲ್ಲಿ ತಿಳಿಸಿದೆ.
ನಾವು ಒಂದಲ್ಲ ಒಂದು ರೀತಿಯಲ್ಲಿ ಆಹಾರವನ್ನು ವ್ಯರ್ಥ ಮಾಡುತ್ತಿದ್ದೇವೆ. ಎಷ್ಟರಮಟ್ಟಿಗೆಂದರೆ, ನಮ್ಮ ಇಡೀ ಆರ್ಥಿಕತೆ ಮತ್ತು ಸಮಾಜವು ಗಮನಾರ್ಹ ಪ್ರಮಾಣದ ಸಮಯ, ಉತ್ಪಾದನೆ ಯಾವುದನ್ನಾದರೂ ವ್ಯರ್ಥ ಮಾಡುವುದರ ಮೇಲೆ ನಿರ್ಮಿಸಲ್ಪ ಟ್ಟಿದೆ. ಭಾರತದಲ್ಲಿಯೂ ಸಹ, ಲಕ್ಷಾಂತರ ಜನರು ಜೀವನಾಧಾರ ಮಟ್ಟದಲ್ಲಿ ಬದುಕುಳಿ ಯುತ್ತಾರೆ, ಟನ್‌ಗಳಷ್ಟು ಆಹಾರವು ವ್ಯರ್ಥ ವಾಗುತ್ತದೆ. ಆಹಾರ ವ್ಯರ್ಥದ ಬಗ್ಗೆ ತಲೆಕೆಡಿಸಿಕೊಂಡಾಗ ಮಾತ್ರ ಜನರು ರೈತರ ಕಷ್ಟಗಳು ಅರಿವಿಗೆ ಬರುತ್ತವೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಆಹಾರದ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ದೇಶವು ಪ್ರತಿ ವರ್ಷ ೪೪,೦೦೦ ಕೋಟಿ ರೂಪಾಯಿ ಮೌಲ್ಯದ ಆಹಾರವನ್ನು ವ್ಯರ್ಥವಾಗಿ ಬಿಡುತ್ತಿದೆ ಇದರಿಂದಾಗಿ ಲಕ್ಷಾಂತರ ಜನರು ಹಸಿದ ಹೊಟ್ಟೆಯಲ್ಲಿಯೇ ಜೀವನ ಸಾಗಿಸಬೇಕಾಗಿದೆ. ೨೦೧೩ರ ಅಂಕಿ ಅಂಶದ ಪ್ರಕಾರ ಐದು ವರ್ಷದೊಳಗಿನ ಶೇ.೪೮ ರಷ್ಟು ಮಕ್ಕಳು ಬೆಳವಣಿಗೆಯನ್ನು ಕುಂಠಿತಗೊಳಿಸಿzರೆ. ಇದರಿಂದ ದೇಶದ ಅರ್ಧದಷ್ಟು ಮಕ್ಕಳು ದೀರ್ಘಕಾಲದ ಅಪೌಷ್ಟಿಕತೆಯಿಂದ ಬಳಲುತ್ತಿzರೆ. ಅಲ್ಲದೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಪ್ರಕಾರ, ಪ್ರತಿ ವರ್ಷ ೧.೩ ಶತಕೋಟಿ ಟನ್ ಆಹಾರ ವ್ಯರ್ಥವಾಗುತ್ತದೆ. ಅದೇ ಸಮಯ ದಲ್ಲಿ, ಪ್ರಪಂಚದ ಪ್ರತಿ ಏಳು ಜನರಲ್ಲಿ ಒಬ್ಬರು ಹಸಿವಿನಿಂದ ಮಲಗುತ್ತಾರೆ. ಐದು ವರ್ಷದೊಳಗಿನ ೨೦,೦೦೦ ಕ್ಕೂ ಹೆಚ್ಚು ಮಕ್ಕಳು ಪ್ರತಿದಿನ ಹಸಿವಿನಿಂದ ಸಾಯುತ್ತಾರೆ. ಇಷ್ಷೆ ತಿಳಿದಿದ್ದರರೂ ಸಹ ನಾವು ಆಹಾರ ವ್ಯರ್ಥಮಾಡುವುದು ಎಷ್ಷರ ಮಟ್ಟಿಗೆ ಸರಿ ಅಲ್ಲವೇ? ಅದರಲ್ಲೂ ಮಕ್ಕಳು ಹಾಗೂ ವಿದ್ಯಾವಂತರೇ ಹೆಚ್ಚಾಗಿ ಈ ರೀತಿ ವರ್ತಿಸುತ್ತಿರುವುದು ವಿಷಾದನೀಯ.
ಪರಿಹಾರೋಪಾಯ ಮಾರ್ಗಗಳು :

  • ಮುಂಚಿತವಾಗಿ ಯೋಜಿಸಿ, ಎಚ್ಚರಿಕೆಯಿಂದ ಬೇಯಿಸಿ, ಅದನ್ನು ಸರಿ ಯಾಗಿ ಉಳಿಸಿ ದೇವಸ್ಥಾನ, ಮದುವೆ, ಸಭೆ, ಸಮಾರಂಭಗಳು ಮತ್ತು ಇತರ ಸಾಮಾಜಿಕ ಸಭೆಗಳಿಂದ ಹೆಚ್ಚುವರಿ ಆಹಾರವನ್ನು ಸಂಗ್ರಹಿಸಿ ಬಡವರಿಗೆ ಹಂಚುವುದು.
  • ಅನಿರೀಕ್ಷಿತ ಕಾರಣಗಳಿಂದಾಗಿ ಕೆಲವೊಮ್ಮೆ ಹೆಚ್ಚಿನ ಆಹಾರ ಇರುತ್ತದೆ. ಹೆಚ್ಚಿನ ಆಹಾರ ಸೇವಿಸುವ ಸಂಸ್ಥೆಗಳನ್ನು ಗುರುತಿಸಿ, ಯಾವುದೂ ವ್ಯರ್ಥವಾಗದಂತೆ ಜನರು ಅಂತಹ ಸಂದರ್ಭಗಳಿಗೆ ಮುಂಚಿತವಾಗಿ ತಿಳಿಸುವುದರಿಂದ ಆಹಾರ ವ್ಯರ್ಥವಾಗುವುದನ್ನು ತಡೆಯಬಹುದು.
  • ರಾಜದ್ಯಂತ ಆಹಾರದ ವ್ಯರ್ಥದ ಬಗ್ಗೆ ಶಿಕ್ಷಣವನ್ನು ಉತ್ತೇಜಿಸುವುದು. ಆಹಾರ ವ್ಯವಸ್ಥೆ ಮತ್ತು ತ್ಯಾಜ್ಯದ ಬಗ್ಗೆ ಗ್ರಾಹಕರ ಶಿಕ್ಷಣ ಮತ್ತು ಜಗೃತಿಯನ್ನು ಉತ್ತೇಜಿಸುವುದರ ಮೂಲಕ ಜನರಿಗೆ ತಾವು ಖರೀದಿಸುತ್ತಿರುವ ಆಹಾರದ ನಿಜವಾದ ಮೌಲ್ಯವನ್ನು ತಿಳಿಸುವುದು ಅಲ್ಲದೆ ಶಾಲೆಗಳಲ್ಲಿಯೇ ಮಕ್ಕಳಿಗೆ ಹಾಗೂ ಕಾಲೇಜುಗಳಲ್ಲಿ ಸಾರ್ವಜನಿಕ ವಲಯಗಳಲ್ಲಿ ಅವರಿಗೆ ಜಗೃತಿ ಮೂಡಿಸಿ ಅನುಷ್ಠಾನಗೊಳಿಸುವುದು ಸಾರ್ವಜನಿಕರಿಗೆ ಶಿಕ್ಷಣ ನೀಡಲು ಪರಿಣಾಮಕಾರಿ ಮಾರ್ಗವಾಗಿದೆ.
  • ಜನರಿಗೆ ನಾವು ಎಷ್ಷೇ ಜಾಗೃತಿ ನೀಡಿದರೂ ಸಾಲುವುದಿಲ್ಲ ಬದಲಾಗಿ ಅವರ ಭಾವನೆ ಬದಲಾಗಿ ಆಹಾರವನ್ನು ಇತಮಿತವಾಗಿ ಬಳಸುವುದು ಒಳ್ಳೆಯದು.
  • ಎಲ್ಲಿಯಂದರೆ ಅಲ್ಲಲ್ಲಿ ಬಿಸಾಡುವ ಬದಲು, ಅರ್ಧದಲ್ಲಿಯೇ ಆಹಾರ ಬಿಡುವ ಬದಲು ಯೋಚಿಸಿ ಇನ್ನೊಬ್ಬರಿಗೆ ಸಹಾಯವಾಗುತ್ತದೆ ಎಂದು ಅವರಿಗೆ ಅರಿವಾದಾಗ ಆಹಾರ ವ್ಯರ್ಥವಾಗುವುದನ್ನು ತಪ್ಪಿಸಬಹುದು.
  • ಅಂತಹ ಉಳಿದ ಆಹಾರವನ್ನು ಹತ್ತಿರದ ಎನ್‌ಜಿಒ ಸಂಸ್ಥೆಗಳಿಗೆ ನೀಡುವುದು ಅಥವಾ ವಿವಿಧ ಆಶ್ರಮಗಳಿಗೆ ತಲುಪಿಸುವುದು ಒಳ್ಳೆಯದು.
    ಒಂದು ವೇಳೆ ಬೆಂಗಳೂರು ನಗರದಲ್ಲಿ ಆಹಾರವು ಹೆಚ್ಚುವರಿಯಾಗಿ ಉಳಿದರೆ ಅದನ್ನು ವ್ಯರ್ಥವಾಗದಂತೇ ಕಾಪಾಡಿಕೊಳ್ಳಲು ಈ ಕೆಳಗಿನ ಮೊಬೆಲ್ ಸಂಖ್ಯೆಗಳಿಗೆ ತಾವು ಕರೆ ಮಾಡಬಹುದು. ಮಾನವ್ ಚಾರಿಟಿ ಸೇರಿದಂತೆ ಇತರೆ ಸಂಸ್ಥೆಗಳಿಗೂ ತಾವು ಸಂಪರ್ಕಿಸಬಹುದಾಗಿದೆ. ೦೮೦- ೪೦೯೬೬೧೯೧/೨೮೩೮೬೮೨೮, ಮಿಷನರಿ ಚಾರಿಟಿ, ೦೮೦ ೨೫೪೭೪೯೯೩, ಶಿಶು ಮಂದಿರ, ೯೩೭೯೨೭೧೩೯೧/೦೮೦-೩೨೯೭೦೭೦೦ ಬೆಂಗಳೂರು. ಈ ಮೂಲಕ ಅನ್ನದಾತನ ಶ್ರಮಕ್ಕೆ ಗೌರವಿಸಿ, ಅತ್ಯಮೂಲ್ಯವಾದ ಆಹಾರ ವ್ಯರ್ಥವಾಗುವುದನ್ನು ತಡೆಯಲು ನಾವೆಲ್ಲರೂ ಒಟ್ಟಾಗಿ ಸಹಕರಿಸೋಣ ಅಲ್ಲವೇ…

ಜ್ಯೋತಿ,
ಉಪನ್ಯಾಸಕಿ ಹಾಗೂ
ಸಾಮಾಜಿಕ ಕಾರ್ಯಕರ್ತೆ, ಮೈಸೂರು