ಪ್ರಭಾವ ಬಳಸಿ ನಿಯಮಬಾಹಿರವಾಗಿ ಚಿಕಿತ್ಸಾ ವೆಚ್ಚ ಬಳಕೆ; ಚುನಾವಣಾ ಸ್ಪರ್ಧೆಗೆ ಅವಕಾಶ ನೀಡದಿರಲು ಆಗ್ರಹ…
ಶಿವಮೊಗ್ಗ: ಜನಪ್ರತಿನಿಧಿಗಳಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಚಿಕಿತ್ಸಾ ವೆಚ್ಚವನ್ನು ಪಾವತಿಸಲು ಅವಕಾಶವಿಲ್ಲದಿದ್ದರೂ ಮಹಾನಗರ ಪಾಲಿಕೆಯಿಂದ ೭ ಜನ ಸದಸ್ಯರು ತಮ್ಮ ಪ್ರಭಾವ ಬಳಸಿ, ಚಿಕಿತ್ಸಾ ವೆಚ್ಚವನ್ನು ನಿಯಮಕ್ಕೆ ವಿರುದ್ಧವಾಗಿ ಪಡೆದುಕೊಂಡಿದ್ದು, ಇವರೆಲ್ಲರನ್ನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಆಮ್ ಆದ್ಮಿ ಪಕ್ಷದ ಜಿಧ್ಯಕ್ಷ ಮನೋಹರಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾನಗರ ಪಾಲಿಕೆ ಸದಸ್ಯರಾದ ಕೆ. ಶಂಕರ ಗನ್ನಿ, ಎನ್.ಎಸ್. ಮಂಜುನಾಥ್, ಆರ್.ಸಿ. ನಾಯ್ಕ್, ಪ್ರಭಾಕರ ಪಿ., ಶಾಮೀರ್ ಖಾನ್, ರಾಜು ಎಸ್.ಜಿ., ಮಂಜುಳಾ ಶಿವಣ್ಣ ಇವರು ನಿಯಮಕ್ಕೆ ವಿರುದ್ಧವಾಗಿ ಹಣ ಪಡೆದುಕೊಂಡಿzರೆ ಎಂದರು.
ಈ ಬಗ್ಗೆ ನಾವು ದಾಖಲೆಗಳ ಸಮೇತ ದೂರು ಸಲ್ಲಿಸಿದ್ದು, ಈ ದೂರಿನ ಅನ್ವಯ ಈಗ ಶಂಕರ ಗನ್ನಿ ೮೭,೭೦೯ ರೂ., ಎನ್.ಎಸ್. ಮಂಜುನಾಥ್ ೧ ಲಕ್ಷ ರೂ., ಆರ್.ಸಿ. ನಾಯ್ಕ್, ೧,೦೫,೧೭೮ ರೂ., ಪ್ರಭಾಕರ ೫೧,೮೦೦ ರೂ. ಪಡೆದಿzರೆ. ಆದರೆ, ಇವರೆಲ್ಲರೂ ತಮ್ಮ ವೈದ್ಯಕೀಯ ವೆಚ್ಚದ ಮೆತ್ತವನ್ನು ವಾಪಸ್ ನೀಡಿzರೆ ಎಂದರು.
ಆದರೆ, ಶಾಮೀರ್ ಖಾನ್ ೪೯,೭೮೧ ರೂ., ರಾಜು ಎಸ್.ಜಿ. ೧,೦೮,೫೨೩ ರೂ., ಮಂಜುಳಾ ಶಿವಣ್ಣ ೧೭,೯೦೪ ರೂ. ಪಡೆದಿzರೆ. ಆದರೆ ಇವರು ಮಾತ್ರ ಇದುವರೆಗೂ ಹಣವನ್ನು ವಾಪಸ್ ಮಾಡಿಲ್ಲ. ಆದ್ದರಿಂದ ಈ ಎ ೭ ಜನರನ್ನು ಮುಂದೆ ಚುನಾವಣೆಗೆ ಸ್ಪರ್ಧಿಸದಂತೆ ಅಗತ್ಯಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಭ್ರಷ್ಟಾಚಾರದ ವಿಷಯದಲ್ಲಿ ಎ ಪಕ್ಷಗಳು ಒಂದಾಗಿವೆ. ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ವೈದ್ಯಕೀಯ ವಿಮೆ ಪಾವತಿಸಲು ೪೦ ಲಕ್ಷ ರೂ.ಗಳನ್ನು ಪಾವತಿಸಲು ಯಾರೂ ವಿರೋಧಿಸಿಲ್ಲ. ಹಾಗಾಗಿ ಪಕ್ಷಬೇಧವಿಲ್ಲದೇ ಎ ಸದಸ್ಯರು ಇದನ್ನು ಒಪ್ಪಿರುವುದರಿಂದ ಇವರು ಕೂಡ ತಪ್ಪು ಮಾಡಿzರೆ. ಹಾಗಾಗಿ ಯಾವುದೇ ಸದಸ್ಯರಾಗಿದ್ದವರು ಈ ಬಾರಿ ಚುನಾವಣೆಗೆ ನಿಲ್ಲದಂತೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಿರಣ್, ಮಂಜುನಾಥ್, ನವಿಲೇಶ್, ಚಂದ್ರಶೇಖರ್ ಸೇರಿದಂತೆ ಹಲವರಿದ್ದರು.