ಅಂತರ್ ಜಾತಿ ವಿವಾಹ ಎಂಬುದು ಸರಿಯಲ್ಲ, ಆದರ್ಶ ವಿವಾಹ, ಜತ್ಯಾತಿತ ವಿವಾಹವೆಂದು ಕರೆಯಬೇಕು…
ಭದ್ರಾವತಿ : ಇಂದಿನ ದಿನಗಳಲ್ಲಿ ದೇವರು ಇzನಾ? ಹೇಗೆ ಇzನೆ? ಎಲ್ಲಿzನೆ? ಎಂಬ ಬಗ್ಗೆ ಪ್ರಶ್ನಿಸುವವರು ಬಹಳಷ್ಟು ಮಂದಿ. ಆದರೆ ಇದಕ್ಕೆ ೧೨ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಚಗಳ ಮೂಲಕ ಸಮರ್ಪಕವಾದ ಉತ್ತರ ಗಳನ್ನು ನೀಡಿzರೆ ಎಂದು ಆನಂದಪುರಂ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳವರು ತಿಳಿಸಿದರು.
ನಗರದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನಿಂದ ಸಿz ರೂಢ ನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಏರ್ಪಡಿಸಿದ್ದ ಬಸವಣ್ಣನವರ ಜಯಂತ್ಯೋತ್ಸವ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ದೇವರು ಎಲ್ಲಿzನೆ? ಹೇಗೆ ಇzನೆ? ಎಂಬುದನ್ನು ಬೇರೆಯವರೆಲ್ಲರಿ ಗಿಂತ ಲಿಂಗಾಯಿತರು ಮಾತ್ರವೆ ಬಹಳ ಸುಲಭವಾಗಿ ತೋರಿಸ ಬಹುದು ಎಂದರು.
ದೇವರು ಎಲ್ಲಿಯೂ ಇಲ್ಲ ಹಾಗು ಅವನನ್ನು ಹುಡುಕುವ ಅವಶ್ಯಕತೆ ಇಲ್ಲ. ನಮ್ಮಲ್ಲಿಯೇ ಇzನೆ. ಅದಕ್ಕೆ ಇಷ್ಟಲಿಂಗದ ಪರಿಕಲ್ಪನೆಯನ್ನು ನೀಡಿzರೆ. ಇಂತಹ ದೇವರಿಗೆ ಅವನ ಅಸ್ತಿತ್ವದ ಬಗ್ಗೆ ಶರಣರು ಮಾತ್ರ ಛಾಲೆಂಜ್ ಮಾಡುವ ಶಕ್ತಿ ಇರುವುದು ಶರಣರಿಗೆ ಮಾತ್ರ ಎಂದರು.
ಸುಮಾರು ಎರಡು ಮೂರು ದಶಕಗಳ ಹಿಂದೆ ಲಿಂಗಾಯಿತರ ಮನೆಗಳಲ್ಲಿ ಹೋಮ ಹವನಾದಿ ಗಳನ್ನು ಮಾಡುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಎಲ್ಲರ ಮನೆಗಳ ಧರ್ಮ ಕಾರ್ಯಗಳಲ್ಲಿ ಹೋಮ ಹವನಗಳನ್ನು ಮಾಡುವುದು ಕಡ್ಡಾಯವಾಗಿದೆ. ಮೂಢ ನಂಬಿಕೆಗಳು ಮಢ್ಯಗಳು ಅeನಗಳು ತುಂಬಿಕೊಂಡಿದೆ. ಇಂತಹ ಸಂದರ್ಭಗಳಲ್ಲಿ ಶರಣರ ಸಂಗತಿಗಳನ್ನು ಅಗತ್ಯವಾಗಿ ತಿಳಿಸುವ ಕಾರ್ಯ ಆಗಬೇಕಿದೆ ಎಂದರು.
ಸಮಾಜದಲ್ಲಿ ಹಿಂದೆ ಇದ್ದ ಕಾಯಕಗಳು ಜಾತಿಗಳಾಗಿ ಸಮಾಜ ದಲ್ಲಿ ವಿಜಂಭಿಸಿ ಬೇಧ ಭಾವವನ್ನು ಉಂಟು ಮಾಡಿ ವಿಘಟನೆಗಳಿಗೆ ಮುಖ್ಯ ಕಾರಣವಾಗಿದೆ. ಇದರ ಪರಿಣಾಮ ಇಂದು ಎಲ್ಲಿ ನೋಡಿ ದರೂ ಅಶಾಂತಿ, ಸಂಘರ್ಷದ ವಾತಾವರಣ ಉಂಟಾಗಿ ನೆಮ್ಮದಿಯ ಜೀವನ ಇಲ್ಲವಾಗಿದೆ ಎಂದು ಬೇಸರಿಸಿದರು.
ಲಿಂಗಾಯಿತರು ಎನ್ನುವುದು ಕೇವಲ ಹೆಸರಿಗಾಗಿ ಇzರೆ. ಆದರೆ ಅವರ ಆಚರಣೆಗಳೆಲ್ಲವೂ ಲಿಂಗಾಯಿತಕ್ಕೆ ವಿರುದ್ಧವಾದ ಸಂಗತಿ ಗಳನ್ನು ಮಾಡುತ್ತಿzರೆ. ಇದು ಇಂದಿನ ಸಮಾಜದ ಲಿಂಗಾಯಿತರ ದುರಂತದ ಸಂಗತಿ ಎಂದು ವಿಷಾಧಿಸಿದರು.
ರಾಜ್ಯ ಸರ್ಕಾರ ಬಸವಣ್ಣ ನವರನ್ನು ಸಾಂಸ್ಕೃತಿಕ ನಾಯಕನೆಂದು ಗೌರವಿಸಿ ರಾಜ್ಯದ ರಾಯಭಾರಿಯ ನ್ನಾಗಿ ಮಾಡಿ ಗೌರವಿಸಿದೆ. ನಾಯಕನೆಂದರೆ ಎಲ್ಲರನ್ನು ಕೂಡಿ ಕೊಂಡು ಎಲ್ಲರನ್ನು ಜೊತೆಯಲ್ಲಿಟ್ಟು ಕೊಂಡು ಮುಂದು ಹೋಗುವವನೆ ನಾಯಕ ಎಂದು ಆರ್ಥೈಸಿ. ಇಂದು ಸಮಾಜದಲ್ಲಿ ಇಂತಹ ನಾಯಕರ ಅವಶ್ಯಕತೆ ಇದೆ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಕೆ. ಸಂಗಮೇಶ್ವರ ಅವರು, ಇಂದು ಮಾಧ್ಯಮಗಳಲ್ಲಿ ಸಮಾಜಕ್ಕೆ ಬೇಕಾದಂತಹ ಉತ್ತಮ ಸಂಗತಿ ಸಂದೇಶಗಳು ಬಸವಣ್ಣ ನವರಂತಹ ಸಮಾಜ ಸುಧಾರಕರ ಸಂಗತಿಗಳನ್ನು ಅವರುಗಳ ಸಿzಂತಗಳನ್ನು ತಿಳಿಸುವುದಿಲ್ಲ. ಆದರೆ ಸಮಾಜಕ್ಕೆ ಬೇಡವಾದ ಯಾರಿಗೂ ಅವಶ್ಯಕತೆ ಇಲ್ಲದ ಕೇವಲ ಪ್ರಚಾರಕ್ಕಾಗಿ ಕೆಲವರ ತೆವಲಿಗಾಗಿ ಮನೋರಂಜನೆ ಪಡೆಯಲು ಇಲ್ಲ ಸಲ್ಲದ ಸಂಗತಿಗಳನ್ನು ಫ್ಲಾಷ್ ನ್ಯೂಸ್ ಹೆಸರಿನಲ್ಲಿ ದಿನ ಪೂರ್ತಿ ಬಿತ್ತರಿಸುತ್ತಾರೆ ಎಂದರು.
ಶಂಕರಘಟ್ಟದ ಸಾಹಿಗಳಾದ ಡಾ. ಕುಮಾರ ಚಲ್ಯ ಉಪನ್ಯಾಸ ನೀಡಿ, ಇಂದು ಜತಿ ಜತಿಗಳ ನಡುವೆ ಇರುವ ವೈಷಮ್ಯವನ್ನು ನಿವಾರಣೆ ಮಾಡುವುದು ಜಾತಿಯಿಂದ ವಿಮೋಚನೆ ಮಾಡಿಕೊಳ್ಳುವ ಸಲುವಾಗಿ ಅಂತರ್ ಜತಿ ವಿವಾಹಗಳನ್ನು ನಡೆಸಲಾಗುತ್ತಿದೆ. ಈ ಕಾರ್ಯಗಳನ್ನು ಮಾಡುವ ಭರದಲ್ಲಿ ಜತಿಗಳನ್ನು ಕಡಿಮೆ ಮಾಡುವ ಸಲುವಾಗಿ ಹೊಸ ಜತಿಗಳನ್ನು ಹಟ್ಟು ಹಾಕುತ್ತಿದ್ದೇವೆ ಎಂದರು.
ಅಂತರ್ ಜತಿ ವಿವಾಹ ಎಂಬುದು ಸರಿಯಲ್ಲ, ಅದು ಆದರ್ಶ ವಿವಾಹ, ಜತ್ಯಾತಿತ ವಿವಾಹ ಎಂದು ಕರೆಯಬೇಕು. ಅಂತರ್ ಜತಿ ವಿವಾಹ ಮಾಡಿ ಕೊಂಡರೆ ಸವಲತ್ತುಗಳು ಸಿಗುತ್ತದೆ ಎಂದು ಮಾಡಿಕೊಂಡರೆ ಅದರಲ್ಲಿ ಸತ್ವ-ರುಚಿ ಇರುವುದಿಲ್ಲ. ಇದರಿಂದ ವೈವಾಹಿಕ ಜೀವನದಲ್ಲಿ ಶಾಂತಿ ನೆಮ್ಮದಿ ಇಲ್ಲವಾಗಿ ಬಾಳು ಎಂಬು ದು ಒಂದು ರೀತಿಯಲ್ಲಿ ಅಡಕತ್ತರಿ ಯಲ್ಲಿ ಸಿಕ್ಕಿಹಾಕಿ ಕೊಂಡಂತಾಗುತ್ತದೆ ಎಂದು ಎಚ್ಚರಿಸಿದರು.
ದೇವರು ದೇವಾಲಯಗಳ ಹೆಸರಿನಲ್ಲಿ ಮೋಸ, ವಂಚನೆ ಮಾಡುವುದು ಹೆಚ್ಚುತ್ತಿದೆ. ಪೂಜೆ ಮಾಡುವುದು ನಮ್ಮ ನೆಮ್ಮದಿಗಾಗಿ. ಆದರೆ ಅದು ಮೂಢ ನಂಬಿಕೆ ಮೂಢ ಭಕ್ತಿ ಆಗಬಾರದು. ಬಸವಣ್ಣ ನವರನ್ನು ಕೇವಲ ಉತ್ಸವ ಮೂರ್ತಿಯನ್ನಾಗಿ ಪೂಜಿಸದೆ ವೈಚಾರಿಕ ಚಿಂತನೆಗಳನ್ನು ಮಾಡಿ ಅವರು ಪ್ರತಿಪಾದಿಸಿ ತತ್ವ ಆದರ್ಶ ಗಳನ್ನು ಆಚರಿಸಿದಾಗ ಮಾತ್ರ ಅವರ ಜಯಂತ್ಯೋತ್ಸವ ಆಚರಣೆ ಮಾಡಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.
ವಿಧಾನ ಪರಿಷತ್ ಶಾಸಕ ಡಾ| ಧನಂಜಯ ಸರ್ಜಿ ಮಾತನಾಡಿ, ನಮ್ಮ ನಮ್ಮ ತಪ್ಪುಗಳನ್ನು ತಿಳಿಸಿ ನಾವು ಮಾಡುತ್ತಿರುವುದು ತಪ್ಪು ಎಂದು ಹೇಳುವವರು ನಮ್ಮ ಸುತ್ತ ಮುತ್ತ ಬಹಳ ಜನ ಇzರೆ. ಆದರೆ ನಮ್ಮನ್ನು, ನಮ್ಮ ತಪ್ಪುಗಳನ್ನು ತಿದ್ದಿ ತೀಡಿ ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಮಾರ್ಗದರ್ಶನ ಮಾಡುವವರು ಗುರುಗಳು ಮಾತ್ರ. ಆ ಮೂಲಕ ನಮ್ಮಲ್ಲಿ ಗುಣಾತ್ಮಕ ಚಿಂತನೆಗಳನ್ನು ಬಿತ್ತುತ್ತಾರೆ. ಬಸವಣ್ಣ ನವರ ವಚನಗಳ ಶೇ.೩ – ೫ರಷ್ಟು ವಚನಗಳನ್ನು ಪ್ರತಿಯೊಬ್ಬರೂ ಜೀವನಲ್ಲಿ ಆಳವಡಿಕೊಂಡರೆ ಉತ್ತಮ ವ್ಯಕ್ತಿಯಾಗಿ ಸ್ವಾಸ್ಥ ಸಮಾಜ ನಿರ್ಮಾಣ ಮಾಡುವ ಮೂಲಕ ರಾಮ ರಾಜ್ಯ ನಿರ್ಮಾಣ ಮಾಡಬಹುದು ಎಂದರು.
ಲಿಂಗಾಯಿತರು ತಮ್ಮ ಇಷ್ಟಲಿಂಗ ಪೂಜೆ ಮಾಡುವುದ ರಿಂದ ಮಾನಸಿಕ ಶಾಂತಿ ನೆಮ್ಮದಿ ದೊರೆಯುತ್ತದೆ. ಅಲ್ಲದೆ ಇದರ ಜೊತೆಗೆ ಇತರ ಧಾರ್ಮಿಕ ವಿಧಿ ವಿಧಾನಗಳ ಆಚರಣೆಗಳಿಂದ ಹಿಡಿದು ಮಾನವ ದೇಹದ ರಚನೆಯ ಬಗ್ಗೆ ವಿಮರ್ಶಿಸುತ್ತಾ ಇದು ದೇವರು ಕೊಟ್ಟಿರುವ ಮಹತ್ತರವಾದ ಕೊಡುಗೆಯಾಗಿದೆ. ಇವೆಲ್ಲವೂ ವೈeನಿಕವಾಗಿ ಸಾಬೀತಾಗಿದೆ ಎಂದರಲ್ಲದೆ ತಾವು ಪ್ರತಿ ದಿನವೂ ಇಷ್ಟ ಲಿಂಗವನ್ನು ಪುಜಿಸುತ್ತೇನೆ ಎಂದು ದೇಹದ ಮೇಲೆ ಧರಿಸಿದ್ದ ಲಿಂಗದ ಕರಡಿಗೆಯನ್ನು ಅಂಗಿಯಿಂದ ಹೊರ ತೆಗೆದು ಸಭೆಗೆ ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ವಿಧಾನ ಪರಿಷತ್ ಶಾಸಕಿ ಬಲ್ಕಿಶ್ ಭಾನು ಮಾತನಾಡಿ, ಸಾಮಾಜಿಕ ಸುಧಾರಣೆಯಲ್ಲಿ ದೇಶದಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದ ಸಮಾಜ ಸುಧಾರಕರಲ್ಲಿ ಬಸವಣ್ಣನವರು ಪ್ರಥಮರಾಗಿzರೆ. ಅವರು ೧೨ನೇ ಶತಮಾನದಲ್ಲಿ ಪ್ರತಿಪಾದಿಸಿದ ಸಂಗತಿಗಳು ೨೧ನೇ ಶತಮಾನದಲ್ಲಿ ಅಕ್ಷರಶಃ ನಿಜವಾಗಿದೆ. ಅದರ ಪ್ರಭಾವದ ಕಾರಣ ತಾವು ಇಂದು ಮಹಿಳೆಯಾಗಿ ರಾಜಕೀಯ ಕ್ಷೇತ್ರ ದಲ್ಲಿ ಉನ್ನತ ಸ್ಥಾನ ಮಾನ ಹೊಂದಲು ಕಾರಣವಾಗಿದೆ ಎಂದು ಸ್ಮರಿಸಿದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಎಸ್. ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಕದಳಿ ಮಹಿಳಾ ವೇದಿಕೆಯ ಸದಸ್ಯರು ವಚನ ಪ್ರಾರ್ಥನೆ ಮಾಡಿದರು. ಕತ್ತಲಗೆರೆ ತಿಮ್ಮಪ್ಪ ಸ್ವಾಗತಿಸಿದರು. ಹೆಚ್. ಎನ್. ಮಹಾರುದ್ರ ಪ್ರಾಸ್ತಾವಿಕ ಭಾಷಣ ಮಾಡಿದರು. ಹೊನ್ನಾಳಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ. ಧನಂಜಯ ಅಥಿತಿಗಳ ಪರಿಚಯ ಮಾಡಿ ಅಭನಂದನಾ ಭಾಷಣ ಮಾಡಿದರು. ಶ್ರೀ ಬಸವೇಶ್ವರ ಧರ್ಮ ಸಂಸ್ಥೆಯ ಶಿವಕುಮಾರ್ ಮುಖ್ಯ ಅಥಿತಿಗಳಾಗಿ ಆಗಮಿಸಿ ದ್ದರು. ಮಲ್ಲಿಕಾಂಬ ವಿರುಪಾಕ್ಷಪ್ಪ ವಂದನಾರ್ಪಣೆ ಮಾಡಿದರು. ಎಂ.ವಿರುಪಾಕ್ಷಪ್ಪ ಕಾರ್ಯಕ್ರಮ ನಿರೂಪಿಸಿದರು.