ರಾಜಧಾನಿ ಸೇರಿದಂತೆ ರಾಜ್ಯದ ೧೦ ನಗರಗಳಲ್ಲಿ ೧೦ಅಡಿ ಎತ್ತರದ ಸಂವಿಧಾನ ಪೀಠಿಕೆ ಪ್ರದರ್ಶನ ಫಲಕ ಅಳವಡಿಕೆ…

0
26-Samvidana-dinacharane-fr

ಶಿವಮೊಗ್ಗ: ಭಾರತೀಯರೆಲ್ಲರೂ ಒಂದೇ ಎಂಬ ಐಕ್ಯತೆ, ಸಮಗ್ರತೆ, ಭಾವೈಕ್ಯತೆ ಸಾರುವ ಸಂವಿಧಾನದ ಪೀಠಿಕೆ ಯನ್ನು ಪ್ರತಿಷ್ಟಾಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಜಿ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದರು.
ಸಂವಿಧಾನ ದಿನಾಚರಣೆ ನಿಮಿತ್ತ ಸಂವಿಧಾನ ಕುರಿತು ಜಗೃತಿ ಮೂಡಿಸಲು ಅಲ್ಲಮ ಪ್ರಭು ಮೈದಾನದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ೧೦ ಅಡಿ ಎತ್ತರ ಮತ್ತು ೬ ಅಡಿ ಅಗಲ ಅಳತೆಯ ಮುದ್ರಿತ ಸಂವಿಧಾನ ಪೀಠಿಕೆಯನ್ನು ಪ್ರತಿಷ್ಟಾಪನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ವೈವಿಧ್ಯಮಯವಾದ ಭಾರತ ದೇಶದಲ್ಲಿ ಯಾವುದೇ ದ್ವೇಶ, ವೈಷಮ್ಯವಿಲ್ಲದೆ, ಎಲ್ಲರೂ ಏಕತೆ, ಭಾವೈಕ್ಯತೆ, ಸಮಗ್ರತೆಯಿಂದ ಬದುಕಲು ಅನುವಾಗುವಂತಹ ಸಂವಿಧಾನವನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೀಡಿzರೆಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ‘ ನಮ್ಮ ಸಂವಿಧಾನ ನಮ್ಮ ಹೆಮ್ಮೆ, ಸಂವಿಧಾನವಿಲ್ಲದೆ ಪ್ರಜಪ್ರಭುತ್ವವಿಲ್ಲ, ಸಂವಿಧಾನವು ನಿಮಗೆ ಹಕ್ಕುಗಳನ್ನು ಒದಗಿಸುತ್ತದೆ, ಅವುಗಳನದನಯ ಸರಿಯಾಗಿ ಬಳಸಿಕೊಳ್ಳಿ. ಸಂವಿಧಾನದ ಮೂಲಧ್ಯೇಯ ಎಲ್ಲರಿಗೂ ಒಂದೇ ಕಾನೂ, ಸರ್ವ ಧರ್ಮ ಸಮನ್ವತೆ’ ಮುಂತಾದ ಧ್ಯೇಯವಾಕ್ಯ ಗಳನ್ನೊಳಗೊಂಡ ಫಲಕಗಳನ್ನು ಹಿಡಿದು ಅಲ್ಲಮ ಪ್ರಭು ಮೈದಾನ ದಿಂದ ಅಂಬೇಡ್ಕರ್ ಭವನದವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದರು.
ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು, ಡಾ.ಧನಂಜಯ ಸರ್ಜಿ, ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ರವಿಕುಮಾರ್ , ಜಿ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಜಿಧಿಕಾರಿ ಗುರುದತ್ತ ಹೆಗಡೆ, ಜಿ.ಪಂ.ಸಿಇಓ ಎನ್.ಹೇಮಂತ್, ಜಿ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಅಪರ ಜಿಧಿಕಾರಿ ಸಿದ್ದಲಿಂಗ ರೆಡ್ಡಿ, ಪಾಲಿಕೆ ಆಯುಕ್ತೆ ಡಾ.ಕವಿತಾ ಯೋಗಪ್ಪನವರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಿ.ಮಶಪ್ಪ, ಇತರೆ ಜಿ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ರಾಜ್ಯದ ೧೦ ನಗರಗಳ ಪ್ರಮುಖ ಉದ್ಯಾನವನಗಳಲ್ಲಿ ಸಂವಿಧಾನ ಪೀಠಿಕೆ ಪ್ರದರ್ಶನ ಫಲಕ:
ಸಂವಿಧಾನದ ಅರಿವು ಮೂಡಿಸುವ ಪ್ರಯತ್ನದ ಭಾಗವಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ೧೦ ನಗರಗಳ ಪ್ರಮುಖ ಉದ್ಯಾನವನಗಳಲ್ಲಿ ಸಂವಿಧಾನ ಪೀಠಿಕೆ ಪ್ರದರ್ಶನ ಫಲಕ ಅಳವಡಿ ಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಸಂವಿಧಾನದ ಸಂದೇಶ ತಿಳಿಸಲು ಸಮಾಜ ಕಲ್ಯಾಣ ಇಲಾಖೆಯು ಈ ರೀತಿಯ ಮೊದಲ ಕ್ರಮ ಕೈಗೊಂಡಿದ್ದು, ಇದಕ್ಕಾಗಿ ೩ ಕೋಟಿ ರೂ. ವೆಚ್ಚ ಮಾಡಲು ಉzಶಿಸಿದೆ. ಬೆಂಗಳೂರು, ಶಿವಮೊಗ್ಗ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ- ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ತುಮಕೂರು ಮತ್ತು ವಿಜಯಪುರ ದಲ್ಲಿ ಈ ಫಲಕಗಳನ್ನು ಹಾಕಲಾಗು ತ್ತಿದೆ. ಫಲಕಗಳು೧೦ ಅಡಿ ಎತ್ತರ ಮತ್ತು ೬ ಅಡಿ ಅಗಲವಿದ್ದು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಇರಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಎಲ್. ನರಸಿಂಹಮೂರ್ತಿ ಸರಕಾರಿ ಆದೇಶದಲ್ಲಿ ತಿಳಿಸಿzರೆ.
ಮುಂದಿನ ವರ್ಷ ಗಣರಾಜ್ಯೋತ್ಸವದಂದು ಫಲಕ ಗಳನ್ನು ಲೋಕಾರ್ಪಣೆ ಮಾಡಲಾಗುವುದು. ಜೂನ್ ೨೦೨೩ರಲ್ಲಿ ರಾಜ್ಯ ಸರ್ಕಾರವು ಎ ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯನ್ನು ಪ್ರತಿದಿನ ಓದುವು ದನ್ನು ಕಡ್ಡಾಯಗೊಳಿಸಿ ಆದೇಶವನ್ನು ಹೊರಡಿಸಿತು. ಎ ಸರ್ಕಾರಿ ಕಛೇರಿಗಳಲ್ಲೂ ಪ್ರಸ್ತಾವನೆ ಯನ್ನು ಪ್ರದರ್ಶಿಸಲಾಗುತ್ತಿದೆ. ಅಂತರಾಷ್ಟ್ರೀಯ ಪ್ರಜಪ್ರಭುತ್ವ ದಿನದಂದು ರಾಜ್ಯ ಸರ್ಕಾರ ಸಂವಿಧಾನ ಪೀಠಿಕೆ ಓದಲು ಮೆಗಾ ಕಾರ್ಯಕ್ರಮವನ್ನು ಆಯೋಜಿಸಿತು

Leave a Reply

Your email address will not be published. Required fields are marked *