ಜೈನ ತೀರ್ಥಂಕರರ ವೃಕ್ಷಗಳ ಉದ್ಯಾನ ನಿರ್ಮಾಣದ ದೀಕ್ಷೆ
ಭಾರತದಲ್ಲಿ ಗತಿಸಿ ಹೋಗಿರುವ ಋಷಿ ಮುನಿಗಳಲ್ಲಿ ಜೈನ ಪರಂಪರೆಯ ಶ್ರೀ ಋಷಭನಾಥರಿಂದ ಹಿಡಿದು ಶ್ರೀ ಮಹಾವೀರ ಸ್ವಾಮಿಯವರೆಗೆ ೨೪ ತೀರ್ಥಂಕರರು ಅತ್ಯಂತ ಪೂಜ್ಯನೀಯ ಸ್ಥಾನವನ್ನು ಪಡೆದಿzರೆ. ಮುನಿಗಳು ಕುಳಿತು ತಪಸ್ಸು ಆಚರಿಸಿದ ಪ್ರತಿಯೊಂದು ವೃಕ್ಷಗಳನ್ನು ಗುರುತಿಸಿ ಶಿವಮೊಗ್ಗದ ಡಾಲರ್‍ಸ್ ಕಾಲೋನಿ ಬಳಿಯ ಮಹಾವೀರ ಉದ್ಯಾನವನದಲ್ಲಿ ನೆಡುವ ಹಾಗೂ ಅವುಗಳನ್ನು ಪೋಷಿಸುವ ದೀಕ್ಷೆ ತೊಡಲಾಗಿದೆ.
ಪರೋಪಕಾರಂ ಶಿವಮೊಗ್ಗ, ಶ್ರೀ ದಿಗಂಬರ ಜೈನ ಸಂಘದ ಸಹಯೋಗದಲ್ಲಿ ಸೆ.೧೦ರ ಭಾನುವಾರ ಬೆಳಿಗ್ಗೆ ೬ ಗಂಟೆಗೆ ೨೪ ಜೈನ ತೀಥಂಕರರ ವೃಕ್ಷಗಳ ಉದ್ಯಾನವನ್ನಾಗಿ ಪರಿವರ್ತಿಸುವ ದೀಕ್ಷಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಪೃಕೃತಿಯ ಜೊತೆ ಜೈನ ಧರ್ಮದ ೨೪ ತೀರ್ಥಂಕರರಿಗೆ ಇದ್ದ ಅವಿನಾಭಾವ ಸಂಬಂಧವನ್ನು ಸ್ಮರಿಸಲು, ಗೌರವಿಸಲು ಹಾಗೂ ಧ್ಯಾನಿಸಲು ಅನುಕೂಲ ಆಗುವಂತೆ ಮಹಾವೀರ ಉದ್ಯಾನವನದಲ್ಲಿ ಸಸಿಗಳನ್ನು ನೆಡಲಾಯಿತು.
ವೃಷಭನಾಥರ ಆಲ, ಅಜಿತನಾಥರ ಸಪ್ತಪರ್ಣಿ( ಮzಲೆ), ಶಂಬವನಾಥರ ಸಾಲವೃಕ್ಷ, ಅಭಿನಂದನನಾಥರ ಸರಲ, ಸುಮತಿನಾಥ ಮತ್ತು ಪದ್ಮಪ್ರಭ ಅವರ ಪ್ರಿಯಂಗು, ಸುಪಾರ್ಶ್ವನಾಥರ ಶಿರೀಷಾ, ಚಂದ್ರಪ್ರಭ ಅವರ ನಾಗಕೇಶ, ಪುಷ್ಪದಂತ ಅವರ ಬಭೀತಕಿ (ತಾರೆ), ಶೀಥಲನಾಥರ ಬಿಲ್ವ, ಶ್ರೇಯಾಂಸನಾತಥರ ತಿಂದುಕಾ (ತುಂಬುರ), ವಾಸುಪೂಜ ಅವರ ಪಾಟಲಿ, ವಿಮಲನಾಥರ ನೇರಳೆ, ಅನಂತನಾಥರ ಅಶ್ವಥ, ಧರ್ಮನಾಥರ ಕಪಿತ್ಥ, ಶಾಂತಿನಾಥರ ನಂದಿ, ಕುಂತುನಾಥರ ತಿಲಕ, ಅರಹನಾಥರ ಮಾವು, ಮಲ್ಲಿನಾಥರ ಅಶೋಕ, ಮುನಿಸೂವ್ರತ ಅವರ ಸಂಪಿಗೆ (ಚಂಪಕ), ನಮಿನಾಥರ ಬಕುಲ, ನೇಮಿನಾಥರ ಬಿದಿರು, ಪಾಶ್ವನಾಥರ ದೇವದಾರು ಮತ್ತು ವರ್ಧಮಾನ ಅವರ ಬೂರಗ ಹೀಗೆ ೨೪ ತೀರ್ಥಂಕರರಿಗೆ ಅನುಗುಣವಾಗಿ ಸಸಿಗಳನ್ನು ನೆಡಲಾಯಿತು.
ಶ್ರೀ ದಿಗಂಬರ ಜೈನ ಸಂಘದ ಕಾರ್ಯದರ್ಶಿ, ನಿವೃತ್ತ ಶಿಕ್ಷಕ ಬಿ. ಪಾಶ್ವನಾಥ್ ಅವರು ತಮ್ಮದೇ ಹೆಸರಿನ ೨೩ನೇ ತೀರ್ಥಂಕರರಾದ ಪಾಶ್ವನಾಥರ ದೇವದಾರು ಸಸಿ ನೆಟ್ಟಿದ್ದು ವಿಶೇಷವಾಗಿತ್ತು.
ಬೆಳ್ತಂಗಡಿ ತಾಲೂಕಿನ ನಾರಾವಿ ಬಿಟ್ಟರೆ ಇಂತಹ ಪರಿಕ್ರಮ ಬೇರೆಲ್ಲೂ ನಡೆದಿರುವ ಮಾಹಿತಿ ಇಲ್ಲ. ರಾಜ್ಯದ ಎರಡನೇ ಇಂತಹ ಉದ್ಯಾನವನ ಎಂಬ ಕೀರ್ತಿ ಶಿವಮೊಗ್ಗಕ್ಕೆ ಸಲ್ಲಲಿದೆ.
ಪರೋಪಕಾರಂ ಕುಟುಂಬವು ನೈಜ ಭಾರತೀಯರಾಗಿ ಎ ಜತಿ, ಧರ್ಮ, ಪಂಗಡ, ವರ್ಗವನ್ನು ಹಾಗೂ ಅವರ ಪೂಜೆ, ಆರಾಧನೆ, ವಿಧಿ- ವಿಧಾನಗಳನ್ನು, ಗುರುಗಳನ್ನು, ದೇವತೆಗಳನ್ನು ಹಾಗೂ ನಂಬಿಕೆಗಳನ್ನು ಮನಃಪೂರ್ವಕವಾಗಿ ಗೌರವಿಸುತ್ತೇವೆ ಎಂಬುದನ್ನು ಈ ಕಾಯಕದ ಮೂಲಕ ತೋರಿಸಿಕೊಡಲು ಸಂಕಲ್ಪಿಸಿದೆ.
ನೈಜ ಭಾರತೀಯ ಎಂದರೆ ಅವನು ಯಾರ ನಂಬಿಕೆಯನ್ನು ಅಗೌರವಿಸುವುದಿಲ್ಲ. ಅವರವರ ನಂಬಿಕೆ ಅವರವರಿಗೆ ದೊಡ್ಡದು. ಇಡೀ ಜಗತ್ತೇ ಒಂದು ಕುಟುಂಬ ಎಂಬ ವಿಶಾಲ ಹೃದಯವನ್ನು ಹೊಂದಿರುತ್ತಾನೆ ಎಂಬುದು ಪರೋಪಕಾರಂ ಕುಟುಂಬದ ಪರಿಕಲ್ಪನೆಯಾಗಿದೆ.
ಪರೋಪಕಾರಂ ಕುಟುಂಬದ ಕಟ್ಟಾಳು ಶ್ರೀಧರ್ ಎನ್.ಎಂ., ಲೀಲಾಬಾಯಿ ಎಂ.ಎನ್., ಅನಿಲ್ ಹೆಗಡೆ, ವಕೀಲ ನಾಗಭೂಷಣ ಸ್ವಾಮಿ, ನಿವೃತ್ತ ಯೋಧ ಕೆ.ಎಸ್. ವೆಂಕಟೇಶ್, ಸಾರಥಿ ಶಿವಾನಂದ್, ರಾಘವೇಂದ್ರ ಎನ್.ಎಂ., ಕಿರಣ್ ಆರ್., ರೂಪಶ್ರೀ ಎಸ್. ಮತ್ತಿತರರು ಉಪಸ್ಥಿತರಿದ್ದರು.
ಪೂರ್ಣಿಮಾ ಸುನೀಲ್, ಅಧ್ಯಕ್ಷರು, ಜೆಸಿಐ ಶಿವಮೊಗ್ಗ ಭಾವನಾ