ಗುರುಪರಂಪರೆಯ ಕಾರಣ ಇಡೀ ವಿಶ್ವಕ್ಕೆ ಭಾರತದ ಸಂಸ್ಕೃತಿ ಮಾದರಿ..

dasaraa5A9p1

ಹೊನ್ನಾಳಿ: ಗುರುಪರಂಪರೆಯ ಕಾರಣದಿಂದ ನಮ್ಮ ದೇಶದಲ್ಲಿ ಸಂಸ್ಕೃತಿ- ಪರಂಪರೆಯು ಶಾಶ್ವತವಾಗಿ ಉಳಿದಿದೆ ಎಂದು ಹೇಳಲು ಹೆಮ್ಮೆ ಯಾಗುತ್ತದೆ ಎಂದು ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ೫ನೇ ದಿನದ ದಸರಾ ಮತ್ತು ಶರನ್ನವರಾತ್ರಿ ಕಾರ್ಯಕ್ರಮದ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬನ್ನಿ ಸೊಪ್ಪನ್ನು ಬಂಗಾರ ದಂತೆ ಭಾವಿಸುವ, ಪ್ರಕೃತಿ ಮತ್ತು ಸ್ತ್ರೀಯನ್ನು ಆರಾಧ್ಯ ದೈವವಾಗಿ ಪೂಜಿಸುವ ನಮ್ಮ ಸಂಸ್ಕೃತಿಯು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಅವರು ಬಣ್ಣಿಸಿದರು.
ಶಿವಮೊಗ್ಗದಲ್ಲಿ ಶಾಸಕನಾಗಿ ಕಾರ್ಯನಿರ್ವಹಿಸಲು ಶಕ್ತಿ ತೆಗೆದು ಕೊಂಡು ಹೋಗಲು ಹಿರೇಕಲ್ಮಠದ ಧಾರ್ಮಿಕ ಕಾರ್ಯಕ್ರಮಕ್ಕೆ ಬಂದಿದ್ದೇನೆ, ಹಿರೇಕಲ್ಮಠವು ಒಂದು ಪವಿತ್ರ ಧಾರ್ಮಿಕ ಶಕ್ತಿ ಕೇಂದ್ರ ವಾಗಿದೆ ಎಂದು ಧನ್ಯತಾಭಾವ ವ್ಯಕ್ತಪಡಿಸಿದರು.
ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಲಿಂ. ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಶ್ರೀಮಠದಲ್ಲಿ ನ್ಯಾಯಪೀಠ ಸ್ಥಾಪಿಸಿ ತನ್ಮೂಲಕ ಭಕ್ತರ ವ್ಯಾಜ್ಯಗಳನ್ನು ಬಗೆಹರಿಸುವ ಮೂಲಕ ಈ ಭಾಗದ ನಡೆದಾಡುವ ದೇವರಾಗಿದ್ದರು ಎಂದರು.
ಶ್ರೀಮಠವು ಕಲಾವಿದರನ್ನು, ಸಾಹಿತಿಗಳನ್ನು, ಉಪನ್ಯಾಸಕರನ್ನು ಗುರುತಿಸಿ ಅವಕಾಶಗಳನ್ನು ಕಲ್ಪಿಸುವ ಮಧ್ಯಕರ್ನಾಟಕದ ಏಕೈಕ ಮಠವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹತ್ತು ದೇವರನ್ನು ಪೂಜಿಸುವುದಕ್ಕಿಂತ ಹೆತ್ತ ದೇವರುಗಳಾದ ತಂದೆ-ತಾಯಿ ಆರೈಕೆ ಮಾಡಿದರೆ ಪುಣ್ಯ ಲಭಿಸು ತ್ತದೆ ಎಂದು ಸಲಹೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಂ.ತಿಪ್ಪೇಶಪ್ಪ ಮಾತನಾಡಿ ಇಂದಿನ ಸಮಾಜದಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾನವೀಯ ಮಲ್ಯಗಳು ಕುಸಿಯುತ್ತಿರುವುದು ಆತಂಕಕಾರಿ ವಿಷಯವಾಗಿದೆಯೆಂದು ಕಳವಳ ವ್ಯಕ್ತಪಡಿಸಿದರು.
ಎಸ್.ಜೆ.ವಿ.ಪಿ. ಬಿಇಡಿ ಕಾಲೇಜಿನ ಪ್ರಾಂಶುಪಾಲರಾದ ಮಮತ ಅವರು ಮಹಿಳೆಯರ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು. ಹಿರೇಕಲ್ಮಠದ ಪೀಠಾ ಧ್ಯಕ್ಷ ಒಡೆಯರ್ ಡಾ. ಚನ್ನಮಲ್ಲಿಕಾ ರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.