ಪಾಶ್ಚಾತ್ಯ ಸಂಶೋಧನೆಯಿಂದ ಭಾರತೀಯ ಸಾಂಪ್ರದಾಯಕ ಆಹಾರದ ಮೇಲೆ ಪ್ರಹಾರ: ಡಾ. ವಿಘ್ವೇಶ್

ಸಾಗರ: ಪಾಶ್ಚಾತ್ಯ ಸಂಶೋಧನೆ ಯಿಂದಾಗಿ ಭಾರತೀಯ ಸಾಂಪ್ರದಾಯಿಕ ಆಹಾರದ ಮೇಲೆ ದೊಡ್ಡ ಪ್ರಹಾರ ನಡೆದಿತ್ತು. ಪರಂಪರಾಗತವಾಗಿ ಸಾವಿರಾರು ವರ್ಷಗಳಿಂದ ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿ ಬಂದ ದೇಶೀಯ ಯಾವ ಆಹಾರಕ್ಕೂ ಆಗ ಪ್ರೋತ್ಸಾಹ ಸಿಗುತ್ತಿರಲಿಲ್ಲ. ಅವರ ಪ್ರಾಡಕ್ಟ್‌ಗಳಿಗೆ ಇಲ್ಲಿ ಮಾರುಕಟ್ಟೆ ಕಂಡುಕೊಂಡರು. ಆದರೆ ದೇಶೀ ಸಂಸ್ಕೃತಿಯ ಹುಟ್ಟಿ ಬೆಳೆದಂತವ ರಿಗೆ ಅಧಿಕಾರ ಬಂದಮೇಲೆ ದೇಶೀಯ ಸಂಶೋಧನೆಗೆ ತುಂಬ ಅವಕಾಶ ಗಳು ಸಿಕ್ಕಿದವು ಎಂದು ಭಾರತೀಯ ಕೃಷಿ ಉದ್ಯಮ ಸಂಸ್ಥೆ ಅಧ್ಯಕ್ಷ, ವಿಶ್ರಾಂತ ಉಪ ಕುಲಪತಿ ಡಾ. ಎಂ. ಎಸ್. ವಿಘ್ವೇಶ್ ಅಭಿಪ್ರಾಯಪಟ್ಟರು.

ಇಲ್ಲಿನ ಗಾಂಧಿಮೈದಾನದಲ್ಲಿ ಸಾಗರ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ಸಿರಿ ಸಾಗರ ಉತ್ಪನ್ನಗಳ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ, ಮನೋ ಆಹಾರದ ಯುದ್ಧ ಅತ್ಯಂತ ಅಪಾಯಕಾರಿ ಎಂದರಲ್ಲದೇ, ಒಂದು ಕಾಲ ಹೇಗಿತ್ತೆಂದರೆ ಸುಮಾರು ೨೫ ವರ್ಷ ತೆಂಗು ಬೆಳಗಾರರು ಕಂಗಾಲಾಗಿ ದ್ದರು. ಯಾಕೆಂದರೆ ಎಲ್ಲಿ ನೋಡಿದರೂ ಕೊಬ್ಬರಿ ಎಣ್ಣೆ ಕೊಲೆಸ್ಟ್ರಾಲ್ ಎಂದು ಪ್ರಚಾರ ಮಾಡಲಾಗಿತ್ತು. ತೆಂಗಿನ ಯಾವ ಉಪ ಉತ್ಪನ್ನಗಳಿಗೂ ಬೆಲೆ ಇರಲಿಲ್ಲ. ಒಂದು ಹಂತದಲ್ಲಿ ತೆಂಗಿನ ಬೆಳೆಗಾರರು ತಮ್ಮ ತೋಟಗಳನ್ನು ಕಡಿಯುವ ಹಂತಕ್ಕೆ ತಲುಪಿದ್ದರು. ನಂತರದ ಬೆಳವಣಿ ಗೆಯಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಬಂದ ಮೇಲೆ ತೆಂಗಿನ ಎಣ್ಣೆ ಬಳಕೆಯಿಂದ ಕೊಲೆಸ್ಟ್ರಾಲ್ ಹತೋಟಿಗೆ ಬರುತ್ತದೆ ಎಂಬ ಸಂಶೋಧನೆ ವರದಿ ಬಂತು. ಆಗ ತೆಂಗು ಬೆಳೆಗಾರರು ನಿಟ್ಟುಸಿರು ಬಿಟ್ಟರು ಎಂದರು.


ಅಡಿಕೆಯ ಬಗ್ಗೆಯೂ ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂದು ಅಪಪ್ರಚಾರ ಮಾಡಿದರು. ರೈತರ ಯಾವ ಉತ್ಪನ್ನಕ್ಕೆ ಬೇಡಿಕೆ ಹೆಚ್ಚುತ್ತದೆಯೋ ಅದಕ್ಕೆ ಗೂಬೆ ಕೂರಿಸಲಾಗುತ್ತದೆ. ಆದರೆ ಈವರೆಗೆ ನೂರಾರು ಬಗೆಯ ಅಡಿಕೆ ಕುರಿತು ಸಂಶೋಧನೆಗಳು ನಡೆದಿವೆ. ಯಾರೂ ಅಡಿಕೆ ಹಾನಿ ಎಂದು ನಿಖರವಾಗಿ ಹೇಳಿಲ್ಲ. ಹಾನಿ ಇರಬಹುದು ಎಂದು ಹೇಳಿವೆ. ಈ ಕುರಿತು ಸುಪ್ರೀಂ ಕೋರ್ಟ್‌ಗೂ ಅರ್ಜಿ ಹೋಗಿದೆ. ರಾಮಾಯಣ ಕಾಲದ ಲ್ಲೂ ಅಡಿಕೆ ಬಗ್ಗೆ ಉಖ ವಿದ್ದು ಪೂಗಪುಷ್ಪ ಎನ್ನುವ ಹೆಸರಿತ್ತು ಎಂದವರು ವಿಶ್ಲೇಷಿಸಿದರು.


ಹಿರಿಯ ಸಹಕಾರಿ ಎಚ್. ಎಸ್. ಮಂಜಪ್ಪ ಸೊರಬ ಅವರು ರೈತರ ಅಭಿವೃದ್ಧಿಯಲ್ಲಿ ಸಹಕಾರಿ ಯ ಪಾತ್ರ ಕುರಿತು ಮಾತನಾಡಿ, ಸಹಕಾರಿ ವ್ಯವಸ್ಥೆಯು ೧೯೦೪ರಲ್ಲಿ ಆರಂಭಗೊಂಡಿತು. ನಮ್ಮ ದೇಶದ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಮಾತ್ರ ಸಹಕಾರಿ ಕ್ಷೇತ್ರ ಸದೃಢ ವಾಗಿದೆ. ಸಂಘ ಶಕ್ತಿ ಬಲವಾ ದುದು. ಕೊರೋನಾ ಕಾಲದಲ್ಲಿ ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆಯಾಗಿಲ್ಲ. ಅಡಿಕೆ ಉತ್ಪನ್ನ ಹಾಳಾಗಿಲ್ಲ. ದರ ಕುಸಿಯಲಿಲ್ಲ. ಸಹಕಾರಿ ಸಂಘದ ಮೂಲಕ ಬೆಳೆಗಾರರ ವ್ಯವಹಾರ ಚೆನ್ನಾಗಿ ನಡೆಯುತ್ತಿದೆ. ಆದರೆ ಒಂದು ಕಡೆ ಅನಾನಸ್‌ಗೆ ಸರಿಯಾದ ದರ ಸಿಗದೇ ಒಬ್ಬ ರೈತ ಸುಮಾರು ೩.೫ ಕೋಟಿಯಷ್ಟು ನಷ್ಟ ಅನು ಭವಿಸಿದ. ಸಹಕಾರಿ ವ್ಯವಸ್ಥೆ ಇದ್ದರೆ ಅವನಿಗೆ ಇಂಥ ಪರಿಸ್ಥಿತಿ ಬರುತ್ತಿ ರಲಿಲ್ಲ ಎಂದವರು ಸಹಕಾರಿ ಸಂಸ್ಥೆಯ ಅನಿವಾರ್ಯತೆ ಕುರಿತು ಹೇಳಿದರು.


ಆಹಾರ ಮೇಳ ಉದ್ಘಾಟಿಸಿದ ಉದ್ಯಮಿ ಎಚ್.ಎನ್.ಉಮೇಶ್ ಮಾತನಾಡಿ, ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಬೇಕೆಂದರೆ ಸಹಕಾರಿ ಸಂಸ್ಥೆಗಳು ಬಲಗೊಳ್ಳ ಬೇಕು. ರೈತರು ಬೆಳೆದ ಬೆಳೆಗಳನ್ನು ಮಧ್ಯವರ್ತಿಗಳನ್ನು ತಪ್ಪಿಸಿ ಸಹಕಾರಿ ಸಂಘಗಳಿಗೆ ಕೊಡಬೇಕು ಎಂದರು.
ಸಾಗರ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಜನೀಶ್ ಹೆಗಡೆ ಟಿ.ಎನ್. ಹಕ್ರೆ ಅಧ್ಯಕ್ಷತೆ ವಹಿಸಿದ್ದರು.
ಐಡಿಎಫ್ ಸಂಸ್ಥೆಯ ಕಾರ್ಯ ನಿರ್ವಾಹಕ ಟ್ರಸ್ಟಿ ಟಿ.ವಿ.ಶ್ರೀಕಾಂತ್ ಶೆಣೈ ಪ್ರಾಸ್ತಾವಿಕ ಮಾತನಾಡಿ ದರು. ಸಾಗರ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ನಾಗೇಂದ್ರ ಸಾಗರ್ ಸಂಘದ ಚಟುವಟಿಕೆ ಕುರಿತು ಮಾಹಿತಿ ನೀಡಿದರು.
ಸವಿತಾ ಮತ್ತು ವಿದ್ಯಾ ಪ್ರಾರ್ಥಿಸಿದರು. ರೂಪಾ ರಮೇಶ್ ಸ್ವಾಗತಿಸಿದರು. ಗಣಪತಿ ಕೆ.ಟಿ. ವಂದಿಸಿದರು. ಕಲ್ಪನಾ ತಲವಾಟ ನಿರೂಪಿಸಿದರು.