ಅಸಂಖ್ಯಾತ ರಾಷ್ಟ್ರ ಭಕ್ತರ ಹೋರಾಟದಿಂದ ದೇಶ ಸ್ವಾತಂತ್ರ್ಯ: ಸಿ. ಮಂಜುನಾಥ್

ಶಿವಮೊಗ್ಗ: ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ಅಸಂಖ್ಯಾತ ರಾಷ್ಟ್ರ ಭಕ್ತರ ಕೊಡುಗೆ ಅಪಾರ ಇದ್ದು, ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನದಿಂದ ಭಾರತ ದೇಶ ಸ್ವಾತಂತ್ರ್ಯವಾಯಿತು ಎಂದು ಹಿರಿಯ ಉಪನ್ಯಾಸಕ ಸಿ. ಮಂಜುನಾಥ್ ಹೇಳಿದರು.
ದೇಶಿಯ ವಿದ್ಯಾಶಾಲಾ ಸಮಿತಿ ವತಿಯಿಂದ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ೭೭ನೇ ಸ್ವಾತಂತ್ರ್ಯ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮಹಾತ್ಮ ಗಾಂಧೀಜಿ ಸೇರಿದಂತೆ ಸಾವಿರಾರು ಸ್ವಾತಂತ್ರ್ಯ ಹೋರಾಟ ದಲ್ಲಿ ಭಾಗಿಯಾದ ನಾಯಕರು ತಮ್ಮದೇ ಆದ ಮಾರ್ಗಗಳಲ್ಲಿ ಹೋರಾಟ ನಡೆಸಿದರು. ಎಲ್ಲರ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು ಎಂದರು.


೭೭ನೇ ಸ್ವಾತಂತ್ರ್ಯ ಮಹೋತ್ಸವ ಸಂಭ್ರಮಾಚರಣೆ ಯಲ್ಲಿ ಧ್ವಜರೋಹಣ ನೆರವೇರಿ ಸಿದ ಡಿವಿಎಸ್ ಅಧ್ಯಕ್ಷ ಕೆ.ಎನ್. ರುದ್ರಪ್ಪ ಕೊಳಲೆ, ದೇಶದ ಸ್ವಾತಂತ್ರ್ಯಯಕ್ಕಾಗಿ ಜೀವನ ಸಮರ್ಪಿಸಿದ ಹೋರಾಟಗಾರರ ಕೊಡುಗೆ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರು ಸದೃಢ ಭಾರತ ನಿರ್ಮಾಣದಲ್ಲಿ ಕೈಜೋಡಿಸ ಬೇಕು. ದೇಶವನ್ನು ರಕ್ಷಣೆ ಮಾಡುತ್ತಿ ರುವ ಸೈನಿಕರಿಗೆ ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕು ಎಂದು ಸಂದೇಶ ತಿಳಿಸಿದರು.
ದೇಶಕ್ಕಾಗಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ರಮೇಶ್ ಎನ್. ಹಾಗೂ ಬಸವರಾಜ ನಾಯ್ಕ ಎಲ್. ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿದ್ದರು. ನಂತರ ದೇಶಭಕ್ತಿ ಗೀತೆಗಳ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು.
ಡಿವಿಎಸ್ ಮಾಜಿ ಅಧ್ಯಕ್ಷ ಕೆ. ಬಸಪ್ಪಗೌಡ, ಕಾರ್ಯದರ್ಶಿ ಎಸ್. ರಾಜಶೇಖರ್, ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ್ ಶೆಟ್ಟಿ, ಡಿವಿಎಸ್ ಕಲಾ, ವಿeನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಎ.ಇ. ರಾಜಶೇಖರ್, ಆರ್.ಲಕ್ಷ್ಮೀದೇವಿ, ಹರೀಶ್, ಎನ್‌ಎಸ್‌ಎಸ್, ರೇಂಜರ್‍ಸ್, ರೋವರ್‍ಸ್ ಘಟಕದ ಪ್ರತಿನಿಧಿಗಳು, ಬೋಧಕ ಸಿಬ್ಬಂದಿ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.