ಚಳಿಗಾಲದ ಅಧಿವೇಶನದಲ್ಲಿ ಭ್ರಷ್ಠ ಕಾಂಗ್ರೆಸ್ ಸರ್ಕಾರದ ಚಳಿ ಬಿಡಿಸುತ್ತೇನೆ…
ಹೊನ್ನಾಳಿ: ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರವು ರೈತರ, ಬಡ ವರ್ಗದ ಮತ್ತು ರಾಜ್ಯದ ಎ ವರ್ಗದ ಜನರಿಗೆ ಶಾಪವಾಗಿ ಪರಿಣಮಿಸಿದೆ ಎಂದು ಬಿಜೆಪಿ ರಾಜಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
ಶಿಕಾರಿಪುರದಿಂದ ನಂದಿ ಗುಡಿಯ ಖಾಸಗಿ ಕಾರ್ಯಕ್ರಮಕ್ಕೆ ಹೋಗುವ ಮಾರ್ಗ ಮಧ್ಯೆ ಪಟ್ಟಣದ ವೀರ ಸಂಗೊಳ್ಳಿ ರಾಯಣ್ಣ ಮತ್ತು ಟಿ.ಬಿ. ವೃತ್ತದಲ್ಲಿರುವ ಭಕ್ತ ಕನಕದಾಸರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಕಾರ್‍ಯಕರ್ತ ರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಮತ್ತು ಎ ಸಮುದಾಯಗಳ ಹಿತ ಕಾಯುತ್ತೇವೆಂದು ಹೇಳಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿ ನಿಂದಲೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಭ್ರಷ್ಠಾಚಾರವೆಸಗುತ್ತಿರುವ ಜನ ವಿರೋಧಿ ಸರ್ಕಾರವನ್ನು ಬೆಳಗಾವಿ ಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಒಳಗೆ ಮತ್ತು ಹೊರಗೆ ಚಳಿ ಬಿಡಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಬಿಎಸ್‌ವೈ ನೀಡಿದ್ದ ಯೋಜನೆಗಳಿಗೆ ಅಡ್ಡಗಾಲು: ಬಿಎಸ್ ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿzಗ ಅನುಷ್ಠಾನಕ್ಕೆ ತಂದಿದ್ದ ಭಾಗ್ಯಲಕ್ಷ್ಮಿ ಮತ್ತು ಕಿಸಾನ್ ಸಮ್ಮಾನ್ ಯೋಜನೆಗಳಿಗೆ ಈ ಸರ್ಕಾರವು ತಡೆ ಹಾಕಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ರೈತರು ಕೇವಲ ೨೫,೦೦೦ ಹಣ ಕಟ್ಟಿದರೆ ತಮ್ಮ ಜಮೀನುಗಳಿಗೆ ವಿದ್ಯುತ್ ಸಂಪರ್ಕ ಸಿಗುತ್ತಿದ್ದುದು ಈ ಸರ್ಕಾರ ಬಂದ ಮೇಲೆ ೨.೫ ರಿಂದ ೩ ಲಕ್ಷದವರೆಗೆ ಹೆಚ್ಚಳ ಮಾಡಿ ರೈತ ಸಮುದಾಯ ವನ್ನು ಸಂಕಷ್ಟಕ್ಕೆ ನೂಕಿದೆ ಎಂದು ಆರೋಪಿಸಿದರು.
ನೆರೆ ಮತ್ತು ಬರಗಾಲದಿಂದ ತತ್ತರಿಸಿರುವ ರೈತ ಸಮುದಾಯಕ್ಕೆ ಸೂಕ್ತ ಪರಿಹಾರ ಬಿಡುಗಡೆ ಮಾಡಿಲ್ಲ ಹಾಗೂ ಮಳೆಯಿಂದ ಹಾನಿಯಾದ ಮನೆಗಳಿಗೆ ಬಿಎಸ್‌ವೈ ೫ ಲಕ್ಷ ಹಣ ಬಿಡುಗಡೆ ಮಾಡಿಸಿದ್ದರೆ ಈ ಸರ್ಕಾರವು ಕೇವಲ ೧ ಲಕ್ಷ ಘೋಷಣೆ ಮಾಡಿದ್ದು ಅದನ್ನೂ ಬಿಡುಗಡೆ ಮಾಡುವುದಕ್ಕೆ ಮೀನ- ಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದ ರೈತ ಸಮುದಾಯವು ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.
ಎಂ.ಪಿ.ಆರ್. ಎಂದರೆ ಅಭಿವದ್ಧಿ: ಎಂ.ಪಿ.ರೇಣುಕಾಚಾರ್ಯ ಅವರು ಶಾಸಕರಾಗಿzಗ ಕಾರಿನಲ್ಲಿ ಗುದ್ದಲಿ ಹಿಡಿದುಕೊಂಡೇ ತಿರುಗಾಡುತ್ತಿದ್ದರು. ಅಂದಿನ ಸಿಎಂ ಯಡಿಯೂರಪ್ಪರಿಂದ ತಾಲ್ಲೂಕಿನ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಿಸಿ ಕೊಂಡು ಇದುವರೆಗೂ ಸುಮಾರು ೫೦೦೦ ಕೋಟಿ ಹಣ ತಂದು ಹೊನ್ನಾಳಿ -ನ್ಯಾಮತಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮಾಡಿಸಿzರೆ ಎಂದು ಅವರ ಕಾರ್ಯವೈಖರಿ ಯನ್ನು ಕೊಂಡಾಡಿದರು.
ಶಾಸಕರು ತಲೆ ಎತ್ತುತ್ತಿಲ್ಲ: ಹೊನ್ನಾಳಿಯ ಶಾಸಕರು ಸೇರಿ ದಂತೆ ರಾಜ್ಯದ ಎ ಶಾಸಕರಿಗೆ ಅವರವರ ತಾಲ್ಲೂಕಿನ ಅಭಿವೃದ್ಧಿಗೆ ಇದುವರೆಗೂ ಅನುದಾನ ಬಿಡುಗಡೆಯಾಗದೇ ಅವರ ಗುದ್ದಲಿಗಳು ತುಕ್ಕು ಹಿಡಿದಿದ್ದು ಇದರಿಂದ ಅವರಿಗೆ ಮತದಾರರ ಎದುರು ತಲೆ ಎತ್ತಿ ಓಡಾಡುವು ದಕ್ಕೂ ಮುಜುಗರವಾಗುತ್ತಿದೆ ಎಂದು ಲೇವಡಿ ಮಾಡಿದರು.
ಹೊನ್ನಾಳಿಯ ಎಂ.ಪಿ. ರೇಣುಕಾಚಾರ್ಯ ಅವರೂ ಸೇರಿ ದಂತೆ ರಾಜದಾದ್ಯಂತ ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ೧೩೦-೧೪೦ ಶಾಸಕರನ್ನು ಗೆಲ್ಲಿಸಿ ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇನೆ ಎಂದು ಶಪಥಗೈದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಬಿ.ವೈ.ವಿಜಯೇಂದ್ರ ಅವರು ಪಕ್ಷದ ರಾಜಧ್ಯಕ್ಷರಾದ ಮೇಲೆ ಕಾಂಗ್ರೆಸ್ ಸರ್ಕಾರದ ಹಲವಾರು ಭ್ರಷ್ಠಾಚಾರಗಳ ವಿರುದ್ಧ ಹೋರಾಟ ಮಾಡಿ ಸರ್ಕಾರದ ಮುಖಭಂಗ ವಾಗುವಂತೆ ಮಾಡಿzರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎ ಮಠಾಧೀಶರುಗಳ ಆರ್ಶೀವಾದ ಪಡೆದು ರಾಜ್ಯದೆಡೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸಂಚರಿಸಿ ಪಕ್ಷದ ಬೂತ್ ಅಧ್ಯಕ್ಷರು ಗಳ ಮನೆಗಳಿಗೆ ಭೇಟಿ ನೀಡುವುದರ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿzರೆ. ೧೭ ಎಂ.ಪಿ. ಗಳನ್ನು ಗೆಲ್ಲಿಸಿದ ಕೀರ್ತೀಯೂ ಕೂಡ ಇವರಿಗೆ ಸಲ್ಲುತ್ತದೆ. ಈ ಗೆಲುವು ಇವರ ವರ್ಚಸನ್ನು ಇನ್ನೂ ಹೆಚ್ಚುವಂತೆ ಮಾಡಿದೆ ಎಂದರು.
ನಾಡಿನ ಪ್ರeವಂತ ಮತದಾರರು, ಕಾರ್ಯಕರ್ತರು ಮತ್ತು ಮುಖಂಡರುಗಳು ಮುಂದಿನ ಮುಖ್ಯಮಂತ್ರಿಯಾಗಿ ಬಿ.ವೈ.ವಿಜಯೇಂದ್ರ ಅವರನ್ನೇ ಆಯ್ಕೆ ಮಾಡಬೇಕು ಎಂದು ಈಗಾಗಲೇ ತೀರ್ಮಾನಿಸಿದ್ದು ಬಿಎಸ್‌ವೈ ಅವರು ನಾಡಿಗೆ ನೀಡಿದ ಕೊಡುಗೆಗಳನ್ನು ಬಿ.ವೈ. ವಿಜಯೇಂದ್ರ ಅವರು ಮುಂದುವರೆಸುತ್ತಾರೆ ಎಂಬ ಆಶಾ ಭಾವನೆಯಿಂದ ಅಂತಹ ಸಂದರ್ಭ ವನ್ನು ಎದುರು ನೋಡುತ್ತಿzರೆ. ಈ ನಿಟ್ಟಿನಲ್ಲಿ ಅವರ ಹೋರಾಟಗಳಿಗೆ ಕಂಕಣಬದ್ಧರಾಗಿ ಜೊತೆಯಾಗಿ ನಿಲ್ಲಬೇಕೆಂದು ರಾಜ್ಯದ ಎ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.
ಬೆಂಗಳೂರಿನಿಂದ ಮೈಸೂರು ವರೆಗೂ ಮುಡಾ ಹಗರಣದ ವಿರುದ್ಧ ಬಿ.ವೈ.ವಿ. ಅವರ ನೇತೃತ್ವದ ಹೋರಾಟದ ಫಲವಾಗಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿಯು ಸೈಟ್‌ಗಳನ್ನು ಹಿಂದಿರುಗಿಸಿzಗಿದೆ. ವಕ್ಫ್ ಹೋರಾಟಕ್ಕೆ ೩ ತಂಡಗಳು ರಚನೆಯಾಗಿದ್ದು ಅದರ ಹೋರಾಟ ವನ್ನು ತೀವ್ರಗೊಳಿಸಿ ರಾಜ್ಯದ ರೈತ ಸಮುದಾಯಕ್ಕೆ ನ್ಯಾಯ ಒದಗಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಧ್ಯಕ್ಷ ರಾಜಶೇಖರ್, ಮಾಜಿ ಶಾಸಕ ಮಾಡಾಳ್ ಮಲ್ಲಿಕಾರ್ಜುನ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್, ಪುರಸಭಾ ಸದಸ್ಯರಾದ ಬಾಬು ಹೋಬಳಿದಾರ್, ರಂಗನಾಥ್, ಮುಖಂಡರಾದ ಲೋಕಿಕೆರೆ ನಾಗರಾಜ್,ಅರಕೆರೆ ನಾಗರಾಜ್, ನೆಲಹೊನ್ನೆ ಮಂಜು ನಾಥ್, ಕೆ.ಪಿ. ಕುಬೇಂದ್ರಪ್ಪ, ಎ.ಜಿ.ಮಹೇಂದ್ರಗೌಡ, ಮಾರುತಿ ನಾಯ್ಕ್, ಸಿ.ಆರ್.ಶಿವಾನಂದ್ ಸೇರಿದಂತೆ ಅವಳಿ ತಾಲ್ಲೂಕಿನ ಕಾರ್ಯಕರ್ತರು-ಮುಖಂಡರುಗಳು ಉಪಸ್ಥಿತರಿದ್ದರು.