ಗುರುಶಿಷ್ಯ ಪರಂಪರೆಯಲ್ಲಿ ಗುರುಗಳು ಶಿಕ್ಷಿಸಿ- ಕ್ಷಮಿಸಿ ಕಲಿಸುತ್ತಿದ್ದರು; ಪ್ರತಿ ಶಿಕ್ಷೆಯ ಹಿಂದೊಂದು ಸಂಸ್ಕಾರದ ಉದ್ದೇಶವಿತ್ತು: ಸ್ವಾಮೀಜಿ
ಅಥಣಿ:ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವು ಅತೀ ಮುಖ್ಯವಾಗಿದ್ದು ಒಳ್ಳೆಯ ಸಂಸ್ಕಾರ ವನ್ನು ಕಲಿತವರು ಜೀವನದಲ್ಲಿ ಎಲ್ಲಿಯೂ ಎಡವುದಿಲ್ಲ ಮತ್ತು ಸೋಲನ್ನು ಅನುಭವಿಸುವದಿಲ್ಲ ಎಂದು ಪೂಜ್ಯಶ್ರೀ ಡಾ.ಮಹಾಂತ ಸ್ವಾಮೀಜಿ ಹೇಳಿದರು.
ಅವರು ಆದಿಬಣಿಜಿಗ ಯುವ ವೇದಿಕೆಯು ಕುಲಕರ್ಣಿ ಸಭಾಭವನದಲ್ಲಿ ಏರ್ಪಡಿಸಿದ್ದ ಎಸ್ಎಸ್ಎಲ್ಎಲ್ಸಿ ಮತ್ತು ಪಿಯುಸಿ ಉತ್ತಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ೬ನೇ ವರ್ಷದ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಹಿಂದೆ ಗುರು ಶಿಷ್ಯರ ಪರಂಪರೆ ಇತ್ತು. ಅಲ್ಲಿ ಗುರುಗಳು ಶಿಕ್ಷಿಸಿ, ಕ್ಷಮಿಸಿ ಕಲಿಸುತ್ತಿದ್ದರು. ಪ್ರತಿ ಶಿಕ್ಷೆಯ ಹಿಂದೆ ಒಂದು ಸಂಸ್ಕಾರದ ಉದ್ದೇಶವಿರುತ್ತಿತ್ತು. ಗುರುಕುಲ ಪಾಠ ಶಾಲೆಯ ಉದ್ದೇಶವೇ ಸಂಸ್ಕಾರವಾಗಿತ್ತು. ಆದರೆ ಇಂದು ಎಲ್ಲರ ಗಮನ ಹಣ ಮತ್ತು ಐಷಾರಾಮಿ ಜೀವನದ ಮೇಲಿದೆ ಹೋರತು ಸರಳವಾದ ಸಂಸ್ಕಾರಯುತ ಜೀವನದ ಶೈಲಿಯಲ್ಲಿ ಇಲ್ಲವಾಗಿದೆ ಎಂದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಅದಕ್ಕಾಗಿಯೇ ಮಕ್ಕಳಿಗೆ ನೀಡುವ ಸಂಸ್ಕಾರ ಮುಂದೆಂದು ಅವರ ಜೀವನದಲ್ಲಿ ಸೋಲದಂತೆ ಕಾಪಾಡುತ್ತದೆ ಒಂದಷ್ಟು ಮೌಲ್ಯ ಯುತ ಜೀವನವನ್ನು ಮಕ್ಕಳಿಗೆ ಕಲಿಸುವುದು ನಮ್ಮೇಲ್ಲರ ಆದ್ಯ ಕರ್ತವ್ಯವಾಗಿದೆ ಒಂದಷ್ಟು ಒಳ್ಳೆಯ ಗುಣಗಳನ್ನು ಕಲಿಸಿದ ನಿಮ್ಮನ್ನು ಮಕ್ಕಳು ಜೀವನದ ದಾರಿ ದೀಪವಾಗಿ ನಿಮ್ಮನ್ನು ಮುಂದೆ ನೆನಪಿಸಿಕೊಳ್ಳುತ್ತಾರೆ ಅದಕ್ಕಿಂತ ಅದೃಷ್ಟ ನಿಮ್ಮಂತಹ ಯುವಕರನ್ನು ಪಡೆದಿರುವುದು ಸಮಾಜದ ಎಲ್ಲರಿಗೂ ಹೆಮ್ಮೆ ಉಂಟು ಮಾಡುವ ಸಂಗತಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ವೇಳೆ ಶೆಟ್ಟರ ಮಠದ ಶ್ರೀಗಳು, ಆದಿಬಣಜಿಗ ಸಮಾಜದ ತಾಲ್ಲೂಕು ಅದ್ಯಕ್ಷ ಚಂದ್ರಶೇಖರ್ ಬಳ್ಳೊಳ್ಳಿ, ಮುಖಂಡರುಗಳಾದ ಸಿ ಎಸ್ ನೇಮಗೌಡ, ಮಲ್ಲಪ್ಪ ಡಂಗಿ,ಅಪ್ಪಾಸಾಹೇಬ ತೆಲಸಂಗ ಮಾತನಾಡಿದರು. ಯುವ ವೇದಿಕೆ ಅಧ್ಯಕ್ಷ ಅಶೋಕ ಮಾರಪೂರ ಪ್ರಾಸ್ತಾವಿಕ ವಾಗಿ ಯುವ ವೇದಿಕೆ ನಡೆದುಬಂದ ದಾರಿಯ ಕುರಿತು ತಿಳಸಿದರು. ಮಲ್ಲಪ್ಪ ಝರೆ, ಬಸು ಮಾದಗುಡಿ, ಸತ್ಯಪ್ಪಾ ಹುರಣಗಿ, ಸಿದ್ದು ಗದ್ಯಾಳ, ಮಹಾತೇಶ ಬುರ್ಲಿ ಇದ್ದರು. ಸ್ವಾಗತ ತೋರಿ ಸ್ವಾಗತಿಸಿದರು, ವಿಜಯ ಹುzರ ನಿರೂಪಿಸಿದರು, ಸುರೇಶ ಬಳ್ಳೋಳ್ಳಿ ವಂದನಾರ್ಪಣೆ ಮಾಡಿದರು.