ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸೂಕ್ತ ಪ್ರೋತ್ಸಾಹ ದೊರೆತಲ್ಲಿ ಸಾಧನೆ ಸಾಧ್ಯ: ಡಾ| ಹೆಗಡೆ…

ಶಿಕಾರಿಪುರ: ಪುರುಷ ಪ್ರಧಾನ ಸಮಾಜ ಮಹಿಳೆಯರಿಗೆ ಸೂಕ್ತ ರೀತಿಯ ಪ್ರೋತ್ಸಾಹದ ಜತೆಗೆ ವ್ಯವಸ್ಥೆ ಸುಧಾರಣೆಗೆ ಸಹಕರಿಸಿದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮೂಲಕ ಗುರುತಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ ಎಂದು ಅಂತರ ರಾಷ್ಟ್ರೀಯ ಲಯನ್ ಡಿ.೩೧೭ ಬಿ ಗವರ್ನರ್ ಲ.ಡಾ ರವಿ ಹೆಗಡೆ ಹುವಿನಮನೆ ತಿಳಿಸಿದರು.
ಇಲ್ಲಿನ ಡಿ.೩೧೭ ಸಿ ಲಯನ್ಸ್ ಕ್ಲಬ್,ಲಿಯೋ ಕ್ಲಬ್‌ನ ೫೧ ನೇ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಬೆಳಕು ೨೦೨೩ಧಿ-೨೪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಟ್ಟಣದಲ್ಲಿ ಸತತ ೫೦ ವರ್ಷ ದಿಂದ ಲಯನ್ಸ್ ಕ್ಲಬ್ ಸಮಾಜ ಮುಖಿ ಕಾರ್ಯದ ಮೂಲಕ ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಗಮನ ಸೆಳೆದಿದೆ ಸಮಾಜದಲ್ಲಿ ಅಶಕತಿರು ಆರ್ಥಿಕ ದುರ್ಬಲರ ಏಳ್ಗೆಗಾಗಿ ಶ್ರಮಿಸುತ್ತಿರುವ ಕ್ಲಬ್ ಇದುವರೆಗೂ ಅಸಂಖ್ಯಾತ ಕಣ್ಣಿನ ತಪಾಸಣಾ ಹಾಗೂ ಶಸ ಚಿಕಿತ್ಸಾ ಶಿಬಿರದ ಜತೆಗೆ ರಕತಿ ತಪಾಸಣೆ, ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿ ಗಳಿಗೆ ಉಚಿತ ಊಟ ಮತ್ತಿತರ ಹಲವು ಕಾರ್ಯದಿಂದ ಸಮಾಜದ ಅಭಿವೃದ್ದಿಯನ್ನು ಕೇಂದ್ರೀಕರಿಸಿ ಕೊಂಡು ಕಾರ್ಯನಿರ್ವಹಿಸುತಿತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಅವರು ಇತ್ತೀಚೆಗೆ ಸುವರ್ಣ ಮಹೋತ್ಸವ ಆಚರಣೆ ಮೂಲಕ ಕ್ಲಬ್ ೫೦ ವಸಂತಗಳಲ್ಲಿ ಅತ್ಯಂತ ಜನಪ್ರಿಯ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಕ್ಲಬ್ ಸಮಾಜಮುಖಿ ಕಾರ್ಯದ ಜತೆಗೆ ಶಿಕ್ಷಣ ಸಂಸ್ಥೆಯ ಮೂಲಕ ಸಮಾಜದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ಯನ್ನು ಕಲ್ಪಿಸಿಕೊಟ್ಟಿದ್ದು ಸಂಸ್ಥೆಯ ಹಲವು ವಿದ್ಯಾರ್ಥಿಗಳು ರ್‍ಯಾಂಕ್‌ಗಳಿಸಿ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇಂತಹ ಹಲವು ಸಮಾಜಮುಖಿ ಕಾರ್ಯದಿಂದಾಗಿ ಕ್ಲಬ್ ಡಿ.೩೧೭ ವ್ಯಾಪಿತಿಯಲ್ಲಿ ಮುಂಚೂಣಿಯಲ್ಲಿ ಗುರುತಿಸಲ್ಪಟ್ಟಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕ್ಲಬ್ ಪುರುಷರಿಗೆ ಸಮಾನವಾಗಿ ಮಹಿಳೆಯರಿಗೂ ಆದ್ಯತೆ ನೀಡಲು ರಚಿಸಲಾದ ನೂತನ ಸಮಿತಿಯಲ್ಲಿ ಮಹಿಳಾ ಪ್ರತಿನಿಧಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿರುವುದು ಆಶಾದಾಯಕ ಸಂಗತಿಯಾಗಿದೆ ಎಂದ ಅವರು ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸೂಕ್ತ ಪ್ರೋತ್ಸಾಹದ ಕೊರತೆಯಿಂದಾಗಿ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ದೊರಕದೆ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದು ಬದಲಾದ ಸಂದರ್ಬದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಕಾರ್ಯಕ್ಷಮತೆ ಮೂಲಕ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದು ಈ ದಿಸೆಯಲ್ಲಿ ಲಯನ್ಸ್ ಕ್ಲಬ್ ಗೆ ನೂತನ ಮಹಿಳಾ ಪದಾಧಿಕಾರಿಗಳಿಗೆ ಸೂಕ್ತ ಪ್ರೋತ್ಸಾಹ ಉತೆತೀಜನ ನೀಡುವ ಮೂಲಕ ಕ್ಲಬ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿ ಎಂದು ಹಾರೈಸಿದರು.
ಡಿ.೩೧೭ ಸಿ ಶಿಕಾರಿಪುರ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷೆ ಮಮತಾ ಬಾಲಚಂದ್ರ ಹೊನ್ನಶೆಟ್ಟರ್ ಮಾತನಾಡಿ, ಕ್ಲಬ್ ೫೧ನೇ ವರ್ಷಾಚರಣೆಯ ಸಂದರ್ಭದಲ್ಲಿ ಮಹಿಳೆಯರಿಗೆ ಹೊಸ ಜವಾಬ್ದಾರಿಯನ್ನು ವಹಿಸಲಾಗಿದ್ದು ಎಲ್ಲರ ಸಹಕಾರ ದಿಂದ ಕ್ಲಬ್ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸುವುದಾಗಿ ತಿಳಿಸಿದರು.
ಅಕ್ಕಮಹಾದೇವಿ ಜನ್ಮಸ್ಥಳದಲ್ಲಿ ಮಹಿಳೆಯರಿಗೆ ಕ್ಲಬ್ ಪ್ರಾತಿನಿಧ್ಯ ನೀಡುವ ಮೂಲಕ ಉನ್ನತ ಸಂಪ್ರದಾಯವನ್ನು ಹಾಕಿಕೊಟ್ಟಿದೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವು ದಾಗಿ ಭರವಸೆ ನೀಡಿದ ಅವರು ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಜತೆಗೆ ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಈಗಾಗಲೇ ನೀಡಲಾಗುತ್ತಿರುವ ವಾರದಲ್ಲಿ ಒಂದು ದಿನದ ಉಚಿತ ಊಟವನ್ನು ಎರಡು ದಿನಕ್ಕೆ ವಿಸತಿರಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಡಾ.ರವಿ ಹೆಗಡೆ ಪ್ರಮಾಣ ವಚನ ಬೋಧಿಸಿದರು. ಲಿಯೋ ಕ್ಲಬ್ ಜಿಲ್ಲಾ ಸಂಯೋಜಕಿ ಸಾಧನಾ ಕಿಣಿ,ಜಿಲ್ಲಾ ಅಧ್ಯಕ್ಷ ಆದಿತ್ಯ ಶೇಟ್, ಸ್ಥಳೀಯ ಕ್ಲಬ್ ನೂತನ ಕಾರ್ಯದರ್ಶಿ ಸ್ವಾತಿ ಬಸವರಾಜ್, ಖಜಾಂಚಿ ಶಿಲ್ಪ ಅನಿಲ್ ಪ್ರಸಾದ್, ಲಿಯೋ ಕ್ಲಬ್ ಅಧ್ಯಕ್ಷ ಭುವನ್ ಪ್ರಸಾದ್, ಕಾರ್ಯದರ್ಶಿ ಅಮಿತ್, ಖಜಾಂಚಿ ದಿಶಾ ಸಹಿತ ಉಪಾಧ್ಯಕ್ಷೆ ಲಲಿತಾ ಶೇಟ್,ಲಲಿತಾ ಜಯಪ್ಪ ನಿಕಪೂರ್ವ ಅಧ್ಯಕ್ಷ ರಾಘವೇಂದ್ರ ಸಾನು ಮತ್ತಿತರರು ಉಪಸ್ಥಿತರಿದ್ದರು.