ಹಾದಿ ಬೀದಿಗಳಲ್ಲಿ ಧರ್ಮ ಕುರಿತು ದ್ವೇಷ ಸಾರುವ ರಾಜಕಾರಣಿಗಳನ್ನು ಉದಾಸೀನ ಮಾಡಿ: ಸ್ವಾಮೀಜಿ

02

ಶಿವಮೊಗ್ಗ: ಧರ್ಮ ಕುರಿತು ಮಾತನಾಡುವ ರಾಜಕಾರಣಿಗಳನ್ನು ಉದಾಸೀನ ಮಾಡಬೇಕು ಎಂದು ಬಸವ ಕೇಂದ್ರ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಸೌಹಾರ್ದವೇ ಹಬ್ಬದ ನಿಮಿತ್ತ ಶಾಂತಿ ಮೆರವಣಿಗೆ ಬಳಿಕ ನಗರದ ಸೈನ್ಸ್ ಮೈದಾನದಲ್ಲಿ ಗುರುವಾರ ಮಾತನಾಡಿದ ಅವರು, ರಾಜಕಾರಣಿಗಳು ಧರ್ಮದ ಬಗ್ಗೆ ಮಾತನಾಡಬಾರದು. ಧರ್ಮದ ಬಗ್ಗೆ ಮಾತನಾಡದಿರೆ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರಲಿದೆ. ರಾಜಕಾರಣಿಗಳ ಮಾತುಗಳನ್ನು ಜನರೂ ಉದಾಸಿನ ಮಾಡಬೇಕು ಎಂದು ಸಲಹೆ ನೀಡಿದರು.


ನಮ್ಮ ಧರ್ಮಗಳ ಆಚರಣೆಗೆ ತಮ್ಮ ಮನೆಗಳಿಗೆ ಸೀಮಿತವಾಗಿರಬೇಕು. ಅದನ್ನು ಹೊರಗೆ ತಂದರೆ ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತದೆ. ಕೋಮುಗಲಭೆಯಾದರೆ ಬಡವರು, ಕೂಲಿ ಕಾರ್ಮಿಕರು ದುಡಿಯುವ ವರ್ಗಕ್ಕೆ ತೊಂದರೆ ಆಗಲಿದೆ ಎಂದರು.
ಜಮೀಯಾ ಮಸೀದಿ ವೌಲಾನ ಹಕೀಲ್ ಅಹಮ್ಮದ್ ಮಾತನಾಡಿ, ಭಾರತದಲ್ಲಿ ಸರ್ವರಿಗೂ ಸ್ವಾತಂತ್ರ್ಯ ಸಿಕ್ಕಿದ್ದು ನಮ್ಮ ಸಂಸ್ಕೃತಿಯನ್ನು ನಾವೇ ಉಳಿಸಬೇಕು. ಶಿವಮೊಗ್ಗದ ಹೆಸರು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆಯಬೇಕು. ಅದು ಸೌಹಾರ್ದಯುತವಾಗಿಬೇಕೋ ವಿನಃ ಕೋಮುಗಲಭೆಯಿಂದಲ್ಲ ಎಂದರು.
ವೌಲಾನ ಶಾಹುಲ್ ಹಮೀದ್ ಮಾತನಾಡಿ, ಮಸೀದಿ, ದೇವಸ್ಥಾನ ಅಥವಾ ಚರ್ಚ್‌ಗಳಿಗೆ ಹೋಗಿ ಕೈಮುಗಿದು ಪ್ರಾರ್ಥನೆ ಮಾಡುವುದು ಮಾತ್ರ ಸೌಹಾರ್ದತೆಯಲ್ಲ. ಎಲ್ಲ ಧರ್ಮಗಳ ಆಚರಣೆಗಳನ್ನು ಗೌರವಿಸುವುದು ನಿಜವಾದ ಸೌಹಾರ್ದತೆ. ಶಿವಮೊಗ್ಗ ಜಿ ಶಾಂತಿಗೆ ಹೆಸರಾಗಿದೆ. ಈ ಜಿಯಲ್ಲಿ ಮತೀಯ ಸಂಘರ್ಷಕ್ಕೆ ಎಡೆ ಮಾಡಿಕೊಡಬಾರದು. ನಾವೆಲ್ಲರೂ ಪ್ರೀತಿಯಿಂದ ಬದುಕಬೇಕು. ನಮ್ಮವರನ್ನು ಶಾಂತಿ ಪ್ರೀಯರನ್ನಾಗಿ ಮಾಡಬೇಕು ಎಂದರು.
ಎಸ್‌ಎಂಎಸ್‌ಎಸ್‌ಎಸ್‌ನ ಕಾರ್ಯದರ್ಶಿ ರೆ|ಫಾ| ಡಾ. ಕ್ಲಿಫರ್ಡ್ ರೋಶನ್ ಪಿಂಟೊ ಮಾತನಾಡಿ, ಮಾನವಿಯ ವೌಲ್ಯಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಸಹೋದರತ್ವ ಭಾವನೆ ಇರಬೇಕು. ಎಲ್ಲರೂ ಹಬ್ಬಗಳನ್ನು ಒಟ್ಟಾಗಿ ಶಾಂತಿಯಿಂದ ಅಚರಣೆ ಮಾಡಬೇಕು. ಆಗ ಸೌಹಾರ್ದತೆಗೆ ಅರ್ಥ ಬರಲಿದೆ. ಕೋಮುಗಲಭೆಗಳು ಜಿಗೆ ಕೆಟ್ಟ ಹೆಸರು ತಂದುಕೊಡಲಿವೆ ಎಂದು ಆಶಿಸಿದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ್ ಸ್ವಾಮೀಜಿ ಮಾತನಾಡಿ, ರಾಮಾಯಣ, ಖುರಾನ್, ಬೈಬಲ್‌ಗಳ ಮೊದಲ ಸಾಲಿನ ಸೌಹಾರ್ದತೆ ಕಾಣಬಹುದು. ವಿಶಿಷ್ಟತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮದು. ವೈಮನಸ್ಸುಗಳನ್ನು ಬೇರುಮಟ್ಟದಿಂದಲೇ ಕಿತ್ತೊಗೆದು ಶಿವಮೊಗ್ಗವನ್ನು ಇಡೀ ದೇಶದಲ್ಲಿ ಮಾದರಿ ಜಿಯಾಗಿ ಹೆಸರು ಗಳಿಸುವಂತೆ ಮಾಡಬೇಕು. ಮುಂದಿನ ದಿನಗಳಲ್ಲಿ ಜಿ ಶಾಂತಿಯನ್ನು ಕಾಣುವಂತಾಗಬೇಕು ಎಂದರು.
ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ, ಮೂಲೆಗz ಮಠದ ಶ್ರೀ ಅಭಿನವ ಸ್ವಾಮೀಜಿ, ಸೌಹಾರ್ದ ಹಬ್ಬದ ಪ್ರಮುಖರಾದ ಎಚ್.ಆರ್.ಬಸವರಾಜಪ್ಪ, ಕೆ.ಪಿ.ಶ್ರೀಪಾಲ್, ಎಂ.ಗುರುಮೂರ್ತಿ, ಫಾದರ್ ಪಿಯುಸ್ ಡಿಸೋಜ ಸೇರಿ ನೂರಾರು ಸಮಾನ ಮನಸ್ಕರು ಪಾಲ್ಗೊಂಡಿದ್ದರು.
ನಗರದಲ್ಲಿ ಶಾಂತಿ ಮೆರವಣಿಗೆ: ನಗರದ ಸಿಮ್ಸ್ ಆವರಣದಿಂದ ಸೈನ್ಸ್ ಮೈದಾನದವರೆಗೆ ಶಾಂತಿ ಮೆರವಣಿಗೆ ಸೈನ್ಸ್ ಮೈದಾನದವರೆಗೆ ನಡೆಯಿತು. ಶಾಂತಿ ಮೆರವಣಿಗೆಗೆ ಜಿಧಿಕಾರಿ ಗುರುದತ್ತ ಹೆಗಡೆ ಮತ್ತು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಸಿಮ್ಸ್ ಆವರಣದಲ್ಲಿ ಚಾಲನೆ ನೀಡಿದರು. ಶಾಂತಿ ನಡಿಗೆಯು ಅಶೋಕ ವೃತ್ತ, ಬಿ.ಎಚ್.ರಸ್ತೆ, ಆಮೀರ್ ಅಹಮ್ಮದ್ ವತ್ತ, ಶಿವಪ್ಪ ನಾಯಕ ವತ್ತ, ಕರ್ನಾಟಕ ಸಂಘದ ಮಾರ್ಗವಾಗಿ ಸೈನ್ಸ್ ಮೈದಾನ ತಲುಪಿತು. ಎಲ್ಲ ಧರ್ಮದ ಧರ್ಮಗುರು, ವಿವಿಧ ಸಂಘಟನೆಗಳ ಮುಖಂಡರು, ಪ್ರಗತಿಪರರು, ಸಾಮಾಜಿಕ ಹೋರಾಟಗಾರರು, ಸಾರ್ವಜನಿಕರು ಸೌಹಾರ್ದ ಹಬ್ಬಕ್ಕೆ ಹೆಜ್ಜೆ ಹಾಕಿದರು.