ಸದೃಢ ಮನಸ್ಸು ಇದ್ದಲ್ಲಿ ಸದೃಢ ಆರೋಗ್ಯ ಲಭ್ಯ: ಬಿವೈಆರ್

ಶಿವಮೊಗ್ಗ: ಕ್ರೀಡೆಯಿಂದ ದೇಹಕ್ಕೆ ಮತ್ತು ಮನಸ್ಸಿಗೆ ಉಸ ಹಾಗೂ ಆರೋಗ್ಯ ಲಭಿಸುತ್ತದೆ. ಸದೃಢ ಮನಸ್ಸು ಇದ್ದಲ್ಲಿ ಸದೃಢ ಆರೋಗ್ಯ ಲಭ್ಯವಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿzರೆ.
ಅವರು ಇಂದು ನಗರದ ನೆಹರು ಒಳಾಂಗಣ ಕ್ರೀಡಾಂಗಣ ದಲ್ಲಿ ಶಿವಮೊಗ್ಗ ಜಿ ಟೇಕ್ವಾಂ ಡೋ ಸಂಸ್ಥೆ ವತಿಯಿಂದ ಇಂದಿ ನಿಂದ ಜು.೯ರವರೆಗೆ ಹಮ್ಮಿಕೊ ಳ್ಳಲಾಗಿರುವ ೪೦ನೇ ರಾಷ್ಟ್ರೀಯ ಜ್ಯೂನಿಯರ್ ಕ್ಯೂರಿಗಿ ಮತ್ತು ೧೩ನೇ ರಾಷ್ಟ್ರೀಯ ಜ್ಯೂನಿಯರ್ ಫುಂಸೆ ಟೆಕ್ವಾಂಡೋ ಚಾಂಪಿಯನ್ ಶಿಪ್ ಸ್ಪರ್ಧೆ ಉದ್ಘಾಟಿಸಿ ಮಾತ ನಾಡಿದ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ೪೦ ಕೋಟಿಯಷ್ಟು ಜನಸಂಖ್ಯೆ ಇತ್ತು. ಯುವಕರ ಸಂಖ್ಯೆ ಕಮ್ಮಿ ಇತ್ತು. ಎ ಸೌಲಭ್ಯಗಳ ಕೊರತೆ ಇತ್ತು. ಆದರೆ ಇಂದು ಭಾರತದಲ್ಲಿ ೧೪೦ಕೋಟಿ ಜನಸಂಖ್ಯೆ ಇದ್ದು, ೮೦ ಕೋಟಿ ಯಷ್ಟು ಯುವಕರೇ ಇzರೆ. ಪ್ರಧಾನಿ ಮೋದಿ ನೇತೃ ತ್ವದ ಬಿಜೆಪಿ ಸರ್ಕಾರ ಹಿಂದೆಂದೂ ಇಲ್ಲದ ಅನುದಾನಗಳನ್ನು ಮತ್ತು ಸೌಲಭ್ಯಗಳನ್ನು ಕ್ರೀಡೆಗೆ ಒದಗಿಸು ತ್ತಿದೆ. ಎ ಕ್ರೀಡೆಗಳಲ್ಲೂ ಕೂಡ ಭಾರತ ಇಂದು ವಿಶ್ವ ಮಟ್ಟದಲ್ಲಿ ಹೆಸರು ಮಾಡುತ್ತಿದೆ ಎಂದರು.
ಭಾರತೀಯ ಕ್ರೀಡಾಪಟು ಗಳು ದೇಶಕ್ಕೆ ಉತ್ತಮ ಕೊಡುಗೆ ನೀಡುತ್ತಿzರೆ. ಗುಣಮಟ್ಟದ ಕ್ರೀಡಾಂಗಣ, ತರಬೇತುದಾರು ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣಗಳನ್ನು ಕೇಂದ್ರ ಸರ್ಕಾರ ಒದಗಿಸುತ್ತಿದ್ದು, ವಿಶ್ವದ ಗಮನ ಸೆಳೆಯಲಾಗುತ್ತಿದೆ. ಇತ್ತೀ ಚಿನ ದಿನಗಳಲ್ಲಿ ಆತ್ಮರಕ್ಷಕ ಕ್ರೀಡೆ ಗಳಿಗೆ ಅತ್ಯಂತ ಮಹತ್ವ ನೀಡು ತ್ತಿದ್ದು, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳು ಭಾರತದಲ್ಲಿ ನಡೆಯುತ್ತಿವೆ. ಶಿವಮೊಗ್ಗದಲ್ಲಿ ಇಷ್ಟು ದೊಡ್ಡ ಮಟ್ಟದ ಕ್ರೀಡಾ ಕೂಟ ಆಯೋಜಿಸಿದ್ದು ಇಲ್ಲಿನ ಕ್ರೀಡಾಪಟುಗಳಿಗೆ ಸ್ಫೂರ್ತಿ ತಂದಿದೆ ಎಂದರು.
ಕ್ರೀಡಾಕೂಟದ ಅಧ್ಯಕ್ಷ ಕೆ.ವಿ.ಶಿವಕುಮಾರ್ ಮಾತನಾಡಿ, ಕ್ರೀಡೆಗಳಿಗೆ ಯಾವುದೇ ಜತಿ, ಧರ್ಮವಿಲ್ಲ. ಎಲ್ಲರನ್ನೂ ಒಂದು ಗೂಡಿಸುವ ಏಕೈಕ ವೇದಿಕೆ ಕ್ರೀಡಾ ಕೂಟಗಳು. ಶಿವಮೊಗ್ಗ ಒಳಾಂಗಣ ಕ್ರೀಡಾಂಗಣವು ಕೇವಲ ಶಟಲ್ ಬ್ಯಾಡ್ಮಿಂಟನ್‌ಗೆ ಮಾತ್ರ ಸೀಮಿ ತವಾಗಬಾರದು. ಜಿಡಳಿತ ಮತ್ತುಕ್ರೀಡಾ ಅಧಕಾರಿಗಳು ಎ ತರಹದ ಕ್ರೀಡಾಕೂಟಗಳಿಗೆ ಇಲ್ಲಿ ಅವಕಾಶ ನೀಡಬೇಕು ಎಂದರು.
ಆಟಗಳಲ್ಲಿ ಭಾಗವಹಿಸು ವುದು ಮುಖ್ಯ. ಸೋಲು ಗೆಲುವು ಮುಖ್ಯವಲ್ಲ. ಕ್ರೀಡಾಕೂಟಗಳಲ್ಲಿ ಭಾವಹಿಸುವುದರಿಂದ ಆತ್ಮಸ್ಥೈರ್ಯ ವೃದ್ಧಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್, ಕ್ರೀಡಾಧಿಕಾರಿ ಮಂಜುನಾಥ್, ಟಿಎಫ್‌ಐ ಕಾರ್‍ಯ ದರ್ಶಿ ಆರ್.ಡಿ. ಮಂಗೇಶ್ಕರ್, ಚೇತನ್‌ಕುಮಾರ್, ಕ್ರೀಡಾಕೂ ಟದ ಸಂಚಾಲಕ ಡಾ. ದೊರೈ ಸಿ., ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಮತ್ತಿತರರಿದ್ದರು.