ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಕಾಂಗ್ರೆಸ್ ನಡೆದುಕೊಂಡಿರುವುದನ್ನು ಸ್ವಾಗತಿಸುತ್ತೇನೆ:ಎಂ.ಪಿ.ರೇಣುಕಾಚಾರ್ಯ
ಹೊನ್ನಾಳಿ : ಕಾಂಗ್ರೆಸ್ ಸರ್ಕಾ ರ ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಐದು ಬರವಸೆಗಳನ್ನು ಈಡೇರಿಸಿದ್ದು ಅದನ್ನು ಸ್ವಾಗತಿಸು ತ್ತೇನೆಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಮಂಗಳವಾರ ತಾಲೂಕಿನ ಹನುಮಸಾಗರ ಕೆಳಗಿನ ತಾಂಡ ದಲ್ಲಿ ಮಾತನಾಡಿದಲ್ಲಿ ವಿವಿಧ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು.
ನಾನು ನಮ್ಮ ಕುಟುಂಬದ ಸದಸ್ಯರಗಳು ಸರ್ಕಾರ ನೀಡುವ ಬರವಸೆಗಳನ್ನು ಬಳಸುವುದಿ ಎಂದ ರೇಣುಕಾಚಾರ್ಯ ಅದನ್ನು ಸರ್ಕಾರ ಬರವಸೆಗಳ ಮೇಲೆ ಷರತ್ತುಗಳನ್ನು ಹಾಕಬಾರದೆಂದು ಸರ್ಕಾರಕ್ಕೆ ಮನವಿಯ ಜೊತೆಗೆ ಒತ್ತಾಯ ಮಾಡುತ್ತೇನೆಂದರು.
ಮುಖ್ಯಮಂತ್ರಿ ಸಿದ್ದರಾಮ ಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚುನಾ ವಣಾ ಪೂರ್ವದಲ್ಲಿ ಎಲ್ಲರಿಗೂ ಬರವಸೆಗಳಿಗೆ ಯಾವುದೇ ಷರತ್ತು ಗಳನ್ನು ವಿಧಿಸಿರಲಿ, ಈಗ ಸರ್ಕಾರ ಷರತ್ತುಗಳನ್ನು ವಿಧಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೇ ಮಾಡಿದ ರೇಣುಕಾ ಚಾರ್‍ಯ ಬರವಸೆಗಳ ಮೇಲೆ ಯಾವುದೇ ಷರತ್ತುಗಳನ್ನು ಹಾಕ ಬಾರದೆಂದು ಸರ್ಕಾರವನ್ನು ಆಗ್ರಹಿಸಿದರು.
ಗೃಹಜ್ಯೋತಿ ಬರವಸೆಯಲ್ಲಿ ಎಲ್ಲರಿಗೂ ೨೦೦ ಯುನಿಟ್ ಫ್ರೀ ಎಂದು ಹೇಳಿ ಈಗ ೧೨ ತಿಂಗಳ ಸರಾಸರಿ ಮಾಡಲಾವುದು ಎಂದು ಹೇಳುತ್ತಿದ್ದೀರಿ, ಅಷ್ಟೇ ಅಲ್ಲದೇ ಬಾಡಿಗೆ ಇರುವವರೂ ೨೦೦ ಯುನಿಟ್ ಉಚಿತ ಎಂದು ಹೇಳಿ ಈಗ ಷರತ್ತ ಹಾಕುವುದು ಎಷ್ಟು ಸರಿ ಎಂದ ಅವರು, ಯಾವುದೇ ಷರತ್ತು ಹಾಕ ಬಾರದು ಕೊಟ್ಟ ಮಾತನ್ನು ಉಳಿಸಿಕೊಳ್ಳ ಬೇಕು, ವಚನ ಭ್ರಷ್ಟರಾಗ ಬಾರದೆಂದರು.
ಬರವಸೆಯಲ್ಲಿ ಹತ್ತು ಕೆಜಿ ಅಕ್ಕಿ ಎಂದು ಹೇಳಿದ್ದೀರಿ ಆದರೇ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿದ್ದು, ನೀವು ಐದು ಕೆಜಿ ಅಕ್ಕಿ ಕೊಟ್ಟಂತಾಗುತ್ತದೆ, ಅದನ್ನು ಬಿಟ್ಟು ನೀವು ಹತ್ತು ಕೆಜಿ ಕೊಡ ಬೇಕೆಂದು ಒತ್ತಾಯ ಮಾಡುತ್ತೇನೆಂದರು.
ಗೃಹಲಕ್ಷಿ ಯೋಜನೆಯಲ್ಲಿ ಅತ್ತೆ,ಸೊಸೆ ಎಂದು ಗೊಂದಲ ಇದ್ದು, ಬಡತನ ರೇಖೆಗಿಂತ ಕಡಿಮೆ ಇರುವ ಪ್ರತಿಯೊಬ್ಬ ಮಹಿಳೆಗೂ ೨ ಸಾವಿರ ಕೊಡ ಬೇಕೆಂದು ಒತ್ತಾಯ ಮಾಡುತ್ತೇನೆಂದ ರೇಣುಕಾಚಾರ್ಯ ಚುನಾಚಣೆಯ ಪೂರ್ವದಲ್ಲಿ ಮಹಿಳೆಯರಿಗೆ ಎ ಬಸ್ ಪ್ರೀ ಎಂದು ಹೇಳಿ ಈಗ ಷರತ್ತು ಹಾಕಿ, ೫೦ ರಷ್ಟು ಮೀಸಲಾತಿ ಎಂದು ಹೇಳುತ್ತಿದ್ದು ಹೆಚ್ಚಿಗೆ ಮಹಿಳೆಯರು ಬಂದರೆ ಏನು ಮಾಡುತ್ತೀರಿ ಅವರು ಎಲ್ಲಿಗೆ ಹೋಗ ಬೇಕೆಂದರಲ್ಲದೇ ಮೀಸ ಲಾತಿ ಷರತ್ತನ್ನು ತೆಗೆದು ಹೆಚ್ಚುವರಿ ಬಸ್ ಬಿಡಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆಂದರು.
ಯುವನಿಧಿ ಮೂಲಕ ನಿರು ದ್ಯೋಗ ಯುವಕರಿಗೆ ಮೂರು ಸಾವಿರ, ಡಿಪ್ಲಮೋದವರಿಗೆ ೧,೫೦೦ ಕೊಡುತ್ತೇವೆಂದು ಹೇಳಿ ದಿದ್ದೀರಿ ಅದನ್ನ ನಂಬಿ ಯುವಕರು ಓಟು ಹಾಕಿzರೆ ಆದರೇ ಇದೀಗ ಅದಕ್ಕೆ ಷರತ್ತು ಹಾಕಿದ್ದು ಸರಿಯ ಎಂದ ರೇಣುಕಾಚಾರ್ಯ, ಯಾರ್‍ಯಾರು ನಿರುದ್ಯೋಗಿ ಯುವ ಕರಿzರೋ ಅವರಿಗೆ ಯುವನಿಧಿ ನೀಡ ಬೇಕೆಂದರು.
ಇನ್ನು ಜಿಎಸ್‌ಟಿ ೫೦೦, ಗ್ಯಾಸ್೫೦೦, ಮನೆನಿರ್ವಹಣೆ ೧೦೦೦ ಹಾಗೂ ಅಂಗನವಾಡಿ, ಆಶಾಕಾರ್ಯಕರ್ತೆಯರು, ಬಿಸಿಯೂಟದವರಿಗೆ ಸಂಬಳ ಹೆಚ್ಚಳ, ಓಪಿಎಸ್ ಜರಿಗೆ ಸಂಬಂ ಧಿಸಿದಂತೆ ವಿಚಾರ ಪ್ರಸ್ತಾಪ ಆಗಿ ಏಕೆ ಎಂದ ರೇಣುಕಾಚಾರ್ಯ, ನಾನು ಸರ್ಕಾರವನ್ನು ಟಿಕೆ ಮಾಡು ವುದಿ ಜನರು ವಿಶ್ವಾಸವಿಟ್ಟು ಓಟ್ ಹಾಕಿzರೆ, ಕೊಟ್ಟ ಮಾತ ನ್ನು ಉಳಿಸಿಕೊಳ್ಳಿ ಎಂದ ರೇಣುಕಾ ಚಾರ್‍ಯ ಜನರ ಕಿವಿ ಮೇಲೆ ಹೂ ಇಡುವ ಕೆಲಸ ಆಗ ಬಾರದು ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಸರ್ಕಾ ರಕ್ಕೆ ಮನವಿ ಮಾಡಿದರು.