ಮನುಷ್ಯನಲ್ಲಿ ಆವರಿಸಿರುವ ದುರಾಸೆ ಯೆಂಬ ಬಿಸಿಲು ಕುದುರೆ ಏರಿ, ವಿಲಾಸಿ ಜೀವನಕ್ಕೆ ಹಾತೊರೆಯುತ್ತ ಸಮಾಜ ವನ್ನು , ಪರಿಸರವನ್ನು ಹಾಳು ಮಾಡುತ್ತ , ಸಿಕ್ಕಸಿಕ್ಕ ಕಡೆಯಲ್ಲಿ ನಾಲಿಗೆ ಚಾಚುತ್ತ, ಮನುಷ್ಯ ಧರ್ಮವ ಮರೆತು ಕ್ರೂರ ಮೃಗಗಳಂತೆ, ಸಮಯ ಸಾಧಕರಾಗಿ , ಆತ್ಮದ್ರೋಹಿಗಳಾಗಿ , ದೇಶದ್ರೋಹಿ ಗಳಾಗಿ ಆಸೆಬುರುಕರ ದುರಾಸೆಗೆ ಸಿಕ್ಕಿ ನಲುಗಿದೆ , ಮರಗಿದೆ ಈ ಸಮಾಜ . ಇದುವೇ ದುಃಖಕ್ಕೆ ಮೂಲ ಕಾರಣವಾಗಿದೆ.
ನಾಡು ದೇಶ ಇವರ ಭ್ರಷ್ಟಾಚಾರ ನಿರಂತರವಾಗಿ ಎಗ್ಗಿಲ್ಲದೇ ನಡೆದಿದೆ , ನಿಯತ್ತು ಸತ್ತು , ಮೂರು ಹೊತ್ತು ಕಾಲ ಕೆಳಗೆ ಬಿತ್ತು ಎಂಬಂತಾಗಿದೆ . ನಾಡಿನ ಸಂಪತ್ತು ಲೂಟಿ ಮಾಡಿ ತಂದು ಒಡ್ಡಿರೋ ಆಪತ್ತು , ಯಾರಲ್ಲೂ ಉಳಿದಿಲ್ಲ ನಿಯತ್ತು , ಸ್ವಾರ್ಥದಿ ತೋರುವರು ಗತ್ತು ದರ್ಪ, ಗುರಿಯಿಲ್ಲದ ಜೀವನ ನಡೆಸುವುದನ್ನು ಕಂಡು , ಹುಸಿ ನಗುವವರ , ನಿಂದಿಸುವವರ , ನೋವು ನೀಡುವವರ ನಡುವೆ ಸಜ್ಜನರು ಬದುಕಿಗಾಗಿ ಹೋರಾಟವೆಂಬ ತೊಳಲಿನಲ್ಲಿ ಬಿದ್ದು , ಧೃತಿಗೇಡದೆ ಎದ್ದು , ಮನೋಸ್ಥೈರ್ಯ ವೃದ್ಧಿಸಿಕೊಳ್ಳಬೇಕಾಗಿದೆ .


ಮನಸಿನ ಮನುಷ್ಯನ ಭಾವನೆಗಳಿಗೆ ಬೆಲೆಕೊಟ್ಟು ಮಾನವೀಯತೆಗೆ ಶರಣಾಗಿ ಮನುಷ್ಯನಾಗಿ ಹುಟ್ಟಿದ ಮೇಲೆ ಸಕಲ ಪ್ರಾಣಿಗಳು ಬದುಕುವ ಹಕ್ಕಿದೆ , ಅದನ್ನು ಯಾರು ಕಿತ್ತುಕೊಳ್ಳಬಾರದು , ದುಸ್ತರಕ್ಕೆ ತಳ್ಳಬಾರದು, ನಮ್ಮ ಮನಸಿನ ದೀವಿಗೆ ಯಿಂದ ಅನ್ಯರ ಬಾಳು ಸಹ ಬೆಳಗಲಿ .
ಡಿ ವಿ ಜಿ ಅವರ ಈ ನುಡಿಯನ್ನು ನೆನಪಿಸುತಾ;
ಇರುವ ಭಾಗ್ಯವ ನೆನೆದು
ಬಾರನೆಂಬುದನ್ನು ಬಿಡು
ಹರುಷಕ್ಕಿದೆ ದಾರಿ
ಈ ಶುಭ ಮಂತ್ರದೊಂದಿಗೆ .
ಅಸೂಯೆ ಸ್ವಾರ್ಥಿಗಳ ನಡುವೆ ಬದುಕುವ ಸಜ್ಜನರ ಬದುಕು ಸಾಗಿದೆ , ಮಾತಿನಲ್ಲಿ ವೇದ ಪುರಾಣ ಉಪನಿಷತ್ತು ಉದುದ್ದ ವಚನಗಳನ್ನು ಉದ್ಧರಿಸುವರು.
ಮನಸಿನೊಳಗೆ ಒಳಸಂಚು ತುಂಬಿಕೊಂಡು , ಪ್ರೀತಿ – ವಾತ್ಸಲ್ಯದ ಬದುಕಿನಲ್ಲಿ ಮುಖವಾಡ ಧರಿಸಿ , ವಿಷವ ಕಕ್ಕುತ್ತ , ಹುಸಿನಗುವಿನ ಎಡೆ ವಿಷಬೀಜವ ಬಿತ್ತುವರು. ಒಳಗೊಂದು ಹೊರಗೊಂದು ನುಡಿಯುತ ಜನರ ಸೆಳೆಯುತ , ಇಂತಹ ಚಂಚಲ ಮನಸಿನ ವ್ಯಕ್ತಿಗಳ ಮಾತಿಗೆ ಮರಳಾಗಿ ಕೇಲವು ಮಂದಿಗಳು ಅವರ ಮಾತಿಗೆ ಮರುಳಾಗಿ ಓಡುತ್ತಿರುವರು. ಅವರ ಭಾವನೆ ಮಾತಿನ ಮರ್ಮ ತಿಳಿಯದೆ . ಅವರ ಗುರಿ ಉದ್ದೇಶ ಏನಿದ್ದರೂ ಪ್ರತಿಷ್ಠೆ ಅಧಿಕಾರ ಪ್ರಶಸ್ತಿ ಹಿಂದೆ ಮುಂದೆ ನೀಡದೆ , ಚಂಚಲೆ ಲಕ್ಷ್ಮಿಯ ಹಿಂದೆ ಓಡುವುದಾಗಿದೆ . ಅವರ ಬದುಕಿನ ಆಸೆಯ ಈಡೇರಿಸಿ ಕೊಳ್ಳಲು , ಅನ್ಯರ ಪ್ರತಿಭಾವಂತರ ಬದುಕು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುವರು .
ಇವರಿಗೆ ಯಾರ ಏಳಿಗೆ ಯಶಸ್ಸು ಬೇಕಿಲ್ಲ , ಇವರಿಗೆ ಯಾವ ಮಾರ್ಗದಲ್ಲಿ ಯಾದರು ಸರಿ , ಹಣ ಕೀರ್ತಿ ಹೆಸರು ಮಾಡಿ , ಅತೀ ಶೀಘ್ರದಲ್ಲಿ ಪ್ರಖ್ಯಾತ ಸಿರಿವಂತರಾಗುವ ಉನ್ಮಾದದಲ್ಲಿ ಬಿಸಿಲು ಕುದುರೆಯನ್ನೇರಿ ಓಡುತ್ತಿರುವವರು , ಪ್ರಾಮಾಣಿಕರ , ಸತ್ಯವಂತರ ವಧೆ ಮಾಡಿ , ಅವರ ಹೆಸರಿಗೆ ಕಳಂಕ ತಂದು ಕ್ರೌರ್ಯ , ಆಕ್ರೋಶ, ದಬ್ಬಾಳಿಕೆ , ಗುಂಪುಗಾರಿಕೆ – ವಚನ ಭ್ರಷ್ಟರ ಜೊತೆ ಸೇರಿ ಅನ್ಯ ಮಾರ್ಗದಲ್ಲಿ ಹಣ ಸಂಪಾದನೆ ಮಾಡುವುದು , ಈಗಿನ ಯುವಕ ಯುವತಿಯರು ಸಾಮಾನ್ಯ ಜನರು ಯೋಚಿಸದೆ ಹುಚ್ಚು ಭ್ರಮೆಯ ಲೋಕದಲ್ಲಿ ಸಾಗಿzರೆ . ಇದು ಇಂದಿನ ಸಮಾಜಕ್ಕೆ ಕಳಂಕ ತಂದಿದೆ , ಭ್ರಷ್ಟರನ್ನು ರಕ್ಷಿಸಿದಷ್ಟು , ಸಮಾಜ ಕಲುಷಿತಗೊಳ್ಳುತ್ತಿದೆ .
ನಾವೇ ರಕ್ಷಿಸಿದ ಭ್ರಷ್ಟತನ , ಪಾಪ ಕೊನೆಗೆ ನಮ್ಮನ್ನೇ ಸುತ್ತಿಕೊಳ್ಳುತ್ತದೆ ಎಂಬ ಒಂದು ಸಣ್ಣ ವಿಷಯವನ್ನು ನಾವು ಅರಿಯಬೇಕಾಗಿದೆ .
ಹಿಂದೆ ನುಡಿಯಲ್ಲಿ ಆಡಿದ ಒಂದು ಮಾತು ವೇದವಾಕ್ಯವಾಗಿರುತಿತ್ತು , ಇತ್ತೀಚಿಗೆ ಪ್ರಸ್ತುತ ಕಾಲಮಾನದಲ್ಲಿ ಕಾಗದ ಪತ್ರ ಬರೆಸಿ ಸಹಿ ನಮೂದಿಸಿ ಕೊಟ್ಟರು , ಅದರ ಪವಿತ್ರತೆ ಉಳಿದಿಲ್ಲ ಉಳಿಸಿಕೊಂಡಿಲ್ಲ , ಹಾಗಿದ್ದರೆ ಸತ್ಯ ಧರ್ಮ ಎಲ್ಲಿ ಹೋಗಿತ್ತು ?.


ಪ್ರಾಮಾಣಿಕತೆ ನಂಬಿಕೆ ನಂಬಿದ ಜನರಿಂದಲೇ ಹೆಚ್ಚಾಗಿ ನಂಬಿಕೆ ದ್ರೋಹ ಹೆಚ್ಚಾಗಿದೆ . ಇಂದು ಯಾರನ್ನು ನಂಬದ ಪರಿಸ್ಥಿತಿಯನ್ನು ನಾವೇ ನಿರ್ಮಾಣ ಮಾಡಿಕೊಂಡಿದ್ದೇವೆ , ನಂಬಿದ ಸ್ನೇಹಿತರು , ಒಡಹುಟ್ಟಿದವರ , ಒಂದಾಗಿದ್ದ ಪತಿ – ಪತ್ನಿ ಸಂಬಂಧದ ನಡುವೆಯೂ ನಂಬಿಕೆಯ ಕೊಂಡಿ ಕಳುಚುತ್ತಿದೆ , ತುಂಬಾ ನಂಬಿಕಸ್ಥರ ಮೋಸಗಳು ಹೆಚ್ಚುತ್ತಿದೆ , ಇದಕ್ಕೆಲ್ಲ ಕಾರಣ ಹಣ ಹೆಸರು ಅಧಿಕಾರ ಎಂಬ ಪಾಸದಲ್ಲಿ ಸಿಲುಕಿ ಮಾಡಬಾರದ ಕೆಲಸಗಳ ಮಾಡುತ್ತ , ದ್ರೋಹ ವೆಸಗುವುದರಿಂದ , ಕಲಿಯಬಾರದ ವ್ಯಸನಗಳಿಗೆ ಬಲಿಯಾಗಿ , ಬೇಡವಾದ ಆಕರ್ಷಣೆಗೆ ಒಳಗಾಗಿ ಆತ್ಮವಂಚನೆ ಮಾಡಿಕೊಂಡು , ಸಮಾಜಕ್ಕೆ ಕಂಟಕರಾಗಿ ಬಾಳುವುದರಿಂದ ಮೆರೆಯುವುದರಿಂದ ತಾತ್ಕಾಲಿಕ ಸಂತೋಷಕ್ಕಾಗಿ ಅನ್ಯರನ್ನು ಹಿಂಸಿಸುವುದು , ದ್ರೋಹವೆಸಗುವುದು , ಸಜ್ಜನರ ಬಾಳಿನಲ್ಲಿ ಆಟವಾಡುವುದು ಎಷ್ಟು ಸರಿ?, ಚಿಂತಿಸಿ… .
ಈ ಭೂಮಿಯ ಮೇಲೆ ನಾವೇ ಶಾಶ್ವತವಿಲ್ಲ ಎಂದ ಮೇಲೆ , ಇವೆಲ್ಲ ಶಾಶ್ವತವೇ?, ನಾವು ಮಾಡುವ ಕೆಲಸ ಸಮಾಜಕ್ಕೆ ಚಿರಾಯುವಾಗಿರುವಂತ ಕೆಲಸ ಸೇವೆಗಳನ್ನು ಮಾಡುವುದರ ಮೂಲಕ ಚಿರಾಯುಯಾಗಿರುವ .
ಸಮಾಜದಲ್ಲಿ ಯಾರಿಗೂ ತೊಂದರೆಯಾಗದ ರೀತಿ ನಡೆದು , ಸರ್ವರು ಮೆಚ್ಚಿ , ಅವರ ಪ್ರೀತಿಗೆ ಪಾತ್ರರಾಗುವಂತ ಪರಿಸರ ಕಾಪಾಡಿ ಹಿತವಾದ ಕಾರ್ಯಗಳನ್ನು ಮಾಡೋಣ. ಆಗ ಸಮಾಜದಲ್ಲಿ ನಿಮಗೊಂದು ನಮಗೊಂದು ಗೌರವ ಹೆಸರು ತಂದು ಕೊಡುವುದು.
ನಾವು ಮೋಸ ಸುಳ್ಳು ವಂಚನೆಯಿಂದ ಸಂಪಾದಿಸಿದ ಸಂಪಾದನೆ , ಅಸ್ತಿ , ಕೀರ್ತಿ ಎಂದು ಅದು ನಮ್ಮದಲ್ಲ , ನೀ ಮಾಡಿದ ಪುಣ್ಯದ ಕೆಲಸದಿಂದ ಮಾತ್ರ ಉಸಿರು , ಹಸಿರು, ಹೆಸರು, ಕೀರ್ತಿ ಎಲ್ಲವನ್ನು ಜಗಕ್ಕೆ ಪಸರಿಸಿ , ಪ್ರಸಿದ್ಧಿಯನ್ನು ತೆಗೆದುಕೊಂಡು ಸಾರ್ಥಕ ಜೀವನದಿ ಕೀರ್ತಿಶೇಷ ರಾಗುವರು , ಇದಕ್ಕಿಂತಲೂ ಮಿಗಿಲಾದದ್ದು ಬೇರೆಯಿಲ್ಲ . ಉದಾಹರಣೆಗೆ : ಬುದ್ಧ , ಬಸವ , ಡಾ . ಅಬ್ದುಲ್ ಕಲಾಂ , ಡಾ. ವಿಶ್ವೇಶ್ವರಯ್ಯ , ಸಿ ವಿ ರಾಮನ್ , ಮಹಾತ್ಮಾ ಗಾಂಧಿ , ಒಡೆಯರು , ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದವರು , ಹೀಗೆ ಪುಣ್ಯ ಪುರುಷರು ಬಾಳಿ ತೋರಿ ಹೋದವರು ಅನೇಕರು .
ಇವರು ಯಾರು ಹಣ ಅಧಿಕಾರದ ಹಿಂದೆ ಹೋದವರಲ್ಲ , ದೇಶ ನಾಡಿಗೆ ಉಸಿರು, ಹೆಸರು ಬಿಟ್ಟು ಉಳಿಸಿ ಹೋದವರು .
ಹಿರಿಯರನ್ನು ಗೌರವಿಸುವದನ್ನು ಮರೆಯಬಾರದು , ಅವರ ಆದರ್ಶವೇ , ನಮಗೇ ದಾರಿ ದೀಪವಾಗಿದೆ , ಹಿರಿಯರೇ , ಆಸ್ತಿ ಮಾಡಬೇಡಿ , ಮಕ್ಕಳನ್ನೇ ಆಸ್ತಿ ಮಾಡಿ , ಹಿರಿಯರು ಏನು ಕೊಟ್ಟರೆಂದರೆ – ನಮಗೇ ಆದರ್ಶ, ವಿದ್ಯೆ , ಸಂಸ್ಕಾರ , ಜೀವ , ಜೀವನ ರೂಪಿಸಿ ಕೊಟ್ಟಿzರೆ , ಅದನ್ನು ಮರೆಯಬಾರದು , ಮುಂದಿನ ಪೀಳಿಗೆಗೆ ಬೆಳೆಸಿಕೊಂಡು ಹೋಗಲು ಮಾರ್ಗದರ್ಶನ ಮಾಡಿ , ಜೀವನದಲ್ಲಿ ಸಾಕ್ಷಾತ್ಕಾರ ಕಂಡುಕೊಂಡು ಆದರ್ಶ ವ್ಯಕ್ತಿಗಳಾಗಿ ಇತಿಹಾಸ ನಿರ್ಮಿಸಿ , ಅವರೆಲ್ಲ ಇತಿಹಾಸ ಸೇರಿಕೊಂಡರು .
ಇಂತಹ ಆದರ್ಶಗಳನ್ನು ರೂಢಿಸಿ ಕೊಂಡು , ಬೆಳೆಸಿಕೊಂಡು , ಯುವಕರು ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು .
ಡಿ ವಿ ಜಿ ಯವರ ಕಗ್ಗ ಜೀವನಕ್ಕೆ ಭಗವದ್ಗೀತೆ ಎಂದು ಕರೆಸಿಕೊಳ್ಳುತ್ತದೆ , ಅದರಲ್ಲಿ ಒಂದು ಈ ರೀತಿ ಹೇಳುತ್ತದೆ ,
ಲೋಕದಲಿ ಭಯವಿರಲಿ , ನಯವಿರಲಿ , ದಯೆಯಿರಲಿ
ನುಕ್ಕುನುಗ್ಗುಗಳತ್ತ , ಸೋಂಕು ರೋಗಗಳು ಸಾಕಿ ಸಲಹುವರುಮ್
ಅತ್ತಲೆ ನಿನಗೆ : ನಿನ್ನೆಲ್ಲ ಲೋಕ ಮೂಲವು ನೋಡೋ – ಮಂಕುತಿಮ್ಮ ಎಂಬುದು , ಇಲ್ಲಿ ಕೆಲವು ನಿಯಮಗಳನ್ನು ತಿಳಿಸುತ್ತದೆ , ನಾವಿರುವ ಈ ಲೋಕ ಬ್ರಹ್ಮ ವಸ್ತುವಿನ ತೋರಿಕೆಯೇ ಆದ್ದರಿಂದ ಅದರ ವಿಚಾರದಲ್ಲಿ ನಮ್ಮಿಂದ ಏನಾದರು ಅಪಚಾರವಾದೀತೇನೋ ಎನ್ನುವ ಭಯ ನಮ್ಮಲ್ಲಿ ಮೂಡಬೇಕು , ಲೋಕದ ಆಕರ್ಷಣೆಗಳು , ಸೋಂಕು ರೋಗಗಳು , ಅವು ನಮ್ಮ ಆಪ್ತ ಜನರ ಬಂಧನವು ಆಗಿರಬಹುದು , ಬ್ರಹ್ಮ ವಸ್ತುವಿನ ಮನಸ್ಸನ್ನು ಇಟ್ಟಾಗ ಮಾತ್ರ ಬ್ರಹ್ಮಾನುಭವವನ್ನು ಸಂಪಾದಿಸಲು ಸಾಧ್ಯವಾಗುವುದೆಂಬ ಅರ್ಥ.
ಈ ಸತ್ಯವನ್ನು ಅರಿಯೋ ಮನವೇ , ನೆನೆ ಮನವೇ..!

ಕಟ್ಟೆ ಎಂ. ಎಸ್. ಕೃಷ್ಣಸ್ವಾಮಿ
ಸಾಹಿತಿ -ಬರಹಗಾರ, ಮಂಡ್ಯ