ನನ್ನ ಆಡಳಿತ ಅವಧಿಯಲ್ಲಿ ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡಿದ್ದೇನೆಂಬ ತೃಪ್ತಿ ನನಗಿದೆ : ಎಂಪಿಆರ್

ನ್ಯಾಮತಿ : ನನ್ನ ಆಡಳಿತ ಅವಧಿಯಲ್ಲಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡಿದ್ದೇನೆಂಬ ತೃಪ್ತಿ ನನಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ದೊಡ್ಡೇರಿ ತಾಂಡ ದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ಗಳನ್ನು ವೀಕ್ಷಿಸಿ ಮಾತನಾಡಿದ ಅವರು ನನ್ನ ಅಧಿಕಾರ ಅವಧಿಯಲ್ಲಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿಗೆ ೪೫೦೦ ಕೋ. ರೂ. ಗೂ ಹೆಚ್ಚು ಅನುದಾನ ತಂದು ಅಭಿವೃದ್ದಿ ಮಾಡಿದ್ದೇನೆಂಬ ನೆಮ್ಮದಿ ಇದೇ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕುಗಳನ್ನು ಮತ್ತಷ್ಟು ಅಭಿವೃದ್ದಿ ಮಾಡ ಬೇಕೆಂಬ ಆಸೆ ಇತ್ತು, ಆದರೇ ಜನಾದೇಶ ನನ್ನ ವಿರುದ್ದ ಬಂದಿದ್ದು, ನಾನು ಜನಾ ದೇಶಕ್ಕೆ ತಲೆ ಬಾಗುತ್ತೇನೆಂದರು.
ವಿವಿಧ ಕಾಮಗಾರಿಗಳ ವೀಕ್ಷಣೆ :
ತಾಲೂಕಿನ ದೊಡ್ಡೇರಿ ತಾಂಡದ ಹೊಸೂರಿನಲ್ಲಿ ೯೦ ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ, ಹೂಸೂರು ಹಾಗೂ ತಾಂಡದಲ್ಲಿ ಸಿಸಿ ರಸ್ತೆ ೬೨ ಲಕ್ಷ, ತಾಂಡ ವೃತ್ತದಿಂದ ಹೊಸೂರು ರಸ್ತೆ ೧೫ ಲಕ್ಷ, ತಾಂಡದಿಂದ ಕೆಂಗಟ್ಟೆಕೆರೆ ಹಾಗೂ ಬಿಸಟ್ಟಿ ಕೆರೆ ಹೋಗುವ ರಸ್ತೆ ಅಭಿವೃದ್ದಿ ಸಿಸಿ ಹಾಗೂ ಡಾಂಬರ್ ರಸ್ತೆ ೮೦ ಲಕ್ಷ, ಎಕೆ ಕಾಲೋನಿ ಸಿಸಿ ರಸ್ತೆ ೧೫ ಲಕ್ಷ, ಚೆಕ್ ಡ್ಯಾಂ ೨ ಕೋಟಿ, ಬಿಸಟ್ಟಿ ಹಳ್ಳಕ್ಕೆ ಬ್ರಿಡ್ಜ್ ಕಂಡ ಬ್ಯಾರೇಜ್ ೧ ಕೋಟಿ, ಷಣ್ಮುಕಪ್ಪನವರ ಹೊಲದ ಬಳಿ ಚೆಕ್ ಡ್ಯಾಂ ನಿರ್ಮಾಣ ೧ ಕೋಟಿ ರೂಪಾಯಿ ಸೇರಿದಂತೆ ೧೦.೨೧ ಕೋಟಿ ವೆಚ್ಚದ ಕಾಮಗಾರಿಗಳನ್ನು ವೀಕ್ಷಿಸಿದ ರೇಣುಕಾಚಾರ್ಯ, ೧೦ ಕೋಟಿಗೂ ಹೆಚ್ಚು ಅನುದಾನ ವನ್ನು ಹಾಕಿ ಗ್ರಾಮವನ್ನು ಸಮಗ್ರ ವಾಗಿ ಅಭಿವೃದ್ದಿ ಮಾಡಲಾಗಿದೆ ಎಂದರು.
ಈ ಸಂದರ್ಭ ಮುಖಂಡರಾದ ಅಜಯ್, ಚನ್ನೇಶ್, ಸೋಮ ಶೇಖರ್, ಕರಿಬಸಪ್ಪ, ಗಿರೀಶ್, ರಾಜಣ್ಣ ಗ್ರಾಮಸ್ಥರಿದ್ದರು.