ಮಾನವೀಯತೆ ಮೆರೆದ ಪೊಲೀಸ್, ಪಿಡಿಒ ಮತ್ತು ಗ್ರಾಪಂ ಮಾಜಿ ಸದಸ್ಯ…

kunuruf16p1

ಹೊನ್ನಾಳಿ: ಪೊಲೀಸ್ ಸಿಬ್ಬಂದಿಯೊಬ್ಬರು ಕೆಲವರ ಸಹಾಯದೊಂದಿಗೆ ಹಸಿವು ಮತ್ತು ಬಿಸಿಲಿನ ಪ್ರಖರತೆಯಿಂದ eನ ತಪ್ಪಿ ಬಿದ್ದಿದ್ದ ವಯೋವದ್ಧ ಭಿಕ್ಷುಕನೊಬ್ಬನಿಗೆ ಮರು ಜೀವ ನೀಡಿದ ಘಟನೆ ಜರುಗಿದೆ.
ತಾಲ್ಲೂಕಿನ ಕುಂದೂರು ಗ್ರಾಮದ ಗ್ರಾ.ಪಂ. ಮಾಜಿ ಸದಸ್ಯ ಸಿ.ಎಸ್. ಷಣ್ಮುಖ ಅವರು ಕುಂದೂರಿನ ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯದ ಕಾಂಪೌಂಡ್ ಪಕ್ಕ ಭಿಕ್ಷುಕನೊಬ್ಬ ಎಚ್ಚರತಪ್ಪಿ ಬಿದ್ದಿರುವುದನ್ನು ಕಂಡು ತಕ್ಷಣ ಸಮೀಪದ ಕೂಲಂಬಿ ಉಪಠಾಣೆಯ ಪೊಲೀಸ್ ಮುಖ್ಯಪೇದೆ ಕೆ.ರಾಜು ಮತ್ತು ಕುಂದೂರು ಪಂಚಾಯ್ತಿಯ ಪಿ.ಡಿ.ಒ. ವಿಜಯಗೌಡ ಅವರಿಗೆ ಮಾಹಿತಿ ಮುಟ್ಟಿಸುತ್ತಾರೆ. ತಕ್ಷಣವೇ ಮುಖ್ಯಪೇದೆ ಕೆ. ರಾಜು ಅವರು ಸ್ಥಳಕ್ಕಾಗಮಿಸಿ ಭಿಕ್ಷುಕ ಆಹಾರ ಸೇವಿಸದೇ ಬಹಳ ದಿನಗಳಾಗಿದ್ದು ಜೊತೆಗೆ ಬಿಸಿಲಿನ ತೀವ್ರತೆಗೆ eನ ತಪ್ಪಿ ನಿತ್ರಾಣಗೊಂಡು ಬಿದ್ದಿದ್ದ ಭಿಕ್ಷುಕನನ್ನು ಸಿ.ಎಸ್. ಷಣ್ಮುಖ ಮತ್ತು ಪಿಡಿಒ ವಿಜಯಗೌಡ ಹಾಗೂ ಕೆಲವರ ಅವರ ಸಹಾಯ ಪಡೆದು ಮಲಗಿದ್ದ ಭಿಕ್ಷುಕನಿಗೆ ನೀರು ಕುಡಿಸಿ ಭಿಕ್ಷುಕ ಸ್ವಲ್ಪ ಚೇತರಿಸಿ ಕೊಂಡಾಗ ಊಟ ಮಾಡಿಸುತ್ತಾರೆ.
ನಂತರ ಅನಾಮಧೇಯ ಭಿಕ್ಷುಕನ ಹೆಸರು ಮತ್ತು ಊರನ್ನು ಮುಖ್ಯಪೇದೆ ಕೇಳಲು ಪ್ರಯತ್ನಿಸಿದಾಗ ಆತ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದವ ನಾಗಿದ್ದು ಹೆಸರು ರಾಮ ಎಂದು ಅಸ್ಪಷ್ಟತೆಯಿಂದ ಉತ್ತರ ನೀಡಿzಗಿ ಮುಖ್ಯಪೇದೆ ಕೆ.ರಾಜು ತಿಳಿಸಿದರು. ನಂತರ ಇವನನ್ನು ಹೆಚ್ಚಿನ ಚಿಕಿತ್ಸೆಗೆ ಹೊನ್ನಾಳಿಯ ಸರ್ಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಕಳುಹಿಸಿ ಮಾನವೀಯತೆ ಮೆರೆದಿzರೆ, ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಿಕ್ಷುಕ ಚೇತರಿಸಿ ಕೊಂಡಿzಗಿ ಮುಖ್ಯಪೇದೆ ಕೆ. ರಾಜು ಪತ್ರಿಕೆಗೆ ಮಾಹಿತಿ ನೀಡಿದರು.