ಜಿಲ್ಲೆಯಲ್ಲಿ ರಕ್ತದಾನಿಗಳ ಭಾರಿ ಕೊರತೆ: ಜಿಲ್ಲಾ ಸರ್ಜನ್ ಆತಂಕ

2

ಶಿವಮೊಗ್ಗ,: ಶಿವಮೊಗ್ಗ ಜಿಲ್ಲೆಯಲ್ಲಿ ರಕ್ತದಾನಿಗಳ ಬಾರೀ ಕೊರತೆ ಇದೆ ಎಂದು ಮೆಗ್ಗಾನ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಅವರು ಇಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಶುಶ್ರೂಷಾಧಿಕಾರಿಗಳ ದಿನಾಚರಣೆ ನಿಮಿತ್ತ ಜಿಲ್ಲಾ ಬೋಧನಾ ಆಸ್ಪತ್ರೆಯಲ್ಲಿ ಅಧಿಕಾರಿ ಗಳು, ವೈದ್ಯರು ಎಲ್ಲಾ ಸಿಬ್ಬಂದಿಗಳಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರತಿ ನಿತ್ಯ ಮೆಗ್ಗಾನ್ ಆಸ್ಪತ್ರೆ ಒಂದರಲ್ಲೇ ೧೦೦ ಯೂನಿಟ್‌ಗೂ ಹೆಚ್ಚಿನ ರಕ್ತದ ಅವಶ್ಯಕತೆ ಇದೆ. ಆದರೆ, ರಕ್ತದಾನಿಗಳ ಕೊರತೆಯಿಂದ ರಕ್ತದ ಅಭಾವ ಉಂಟಾಗಿದೆ. ತುರ್ತು ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಪ್ರಾಣಹಾನಿ ಸಂಭವವಿರುತ್ತದೆ. ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಕೂಡ ರಕ್ತದಾನಿಗಳ ಕೊರತೆ ಉಂಟಾಗಿದೆ. ಆದ್ದರಿಂದ ಸಂಘ ಸಂಸ್ಥೆಗಳು ಮತ್ತು ಯುವಕರು, ಯುವತಿಯರು ರಕ್ತದಾನಕ್ಕೆ ಮುಂದಾಗಬೇಕು. ಪ್ರಸ್ತುತ ಡೆಂಗ್ಯೂಮತ್ತು ಕೆಲವು ಸಾಂಕ್ರಾಮಿಕ ರೋಗಗಳು ಬೇಸಿಗೆಯಲ್ಲಿ ಹೆಚ್ಚಳ ಉಂಟಾಗುವುದರಿಂದ ರಕ್ತದ ಅವಶ್ಯಕತೆ ಜಸ್ತಿ ಇದೆ. ಆದ್ದರಿಂದ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದು ಕರೆ ನೀಡಿದರು.
ಜಿಲ್ಲಾ ವೈದ್ಯಕೀಯ ಅಧೀಕ್ಷಕರಾದ ಡಾ. ತಿಮ್ಮಪ್ಪ, ಶುಶ್ರೂಷಕ ಅಧೀಕ್ಷಕಿ ಅನ್ನಪೂರ್ಣ, ಆಸ್ಪತ್ರೆ ಕಛೇರಿಯ ಅಧೀಕ್ಷಕ ರಿಯಾಜ್ ಅಹಮ್ಮದ್, ಎ.ಓ. ಮಲ್ಲಿಕಾರ್ಜುನ್, ಬ್ಲಡ್ ಬ್ಯಾಂಕ್ ಆಫೀಸ್ ಡಾ. ಗೀತಾಲಕ್ಷ್ಮೀ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.