ಗೃಹಿಣಿ ಕೊಲೆ : ಆರೋಪಿಗಳ ಹೆಡೆಮುರಿ ಕಟ್ಟಿದ ತುಂಗಾನಗರ ಪೊಲೀಸರು

ಶಿವಮೊಗ್ಗ: ಜೂ.೧೭ರಂದು ವಿಜಯನಗರ ಬಡವಣೆಯಲ್ಲಿ ನೀರಾವರಿ ಇಲಾಖೆ ಇಂಜಿನಿಯರ್ ಮಲ್ಲಿಕಾರ್ಜುನ್ ಅವರ ಪತ್ನಿ ಕಮಲಮ್ಮ ಎಂಬುವರನ್ನು ಅಮಾನುಷವಾಗಿ ಕೊಲೆಗೈದು ಮಾಡಿ ಪರಾರಿಯಾಗಿದ್ದ ೬ ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮನೆಯಲ್ಲಿ ಒಬ್ಬಂಟಿಯಾಗಿದ್ದ ಪತ್ನಿ ಕಮಲಮ್ಮ ಅವರನ್ನು ಹತ್ಯೆಮಾಡಿ ೩೫ ಲಕ್ಷ ರೂ ಹಣದೊಂದಿಗೆ ಆರೋಪಿತರು ಪರಾರಿಯಾಗಿದ್ದಾರೆಂದು ಮೃತರ ಪತಿ ಮಲ್ಲಿಕಾರ್ಜುನ ತುಂಗ ನಗರ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇರೆಗೆ ೬ ಜನರನ್ನ ಬಂಧಿಸಿzರೆ.
ಏಳೆಂಟು ತಿಂಗಳ ಕೆಳಗೆ ಆರೋಪಿ ಹನುಮಂತ ನಾಯ್ಕ್ ಕಾರು ಚಾಲಕನಾಗಿ ಸೇರಿಕೊಂಡಿ ದ್ದನು. ಇಂಜಿನಿಯರ್ ಮಲ್ಲಿಕಾರ್ಜುನ್ ಗೋವಾಕ್ಕೆ ಹೋಗಲು ನಿರ್ಧರಿಸಿ ಕಾರು ಚಾಲಕನಾಗಿ ಬರುವಂತೆ ಹೇಳಿದಾಗ ಇಲ್ಲ ನಾನು ಧರ್ಮಸ್ಥಳದಲ್ಲಿದ್ದೇನೆ. ಸ್ನೇಹಿತನನ್ನ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದನು.
ಸರಿ ಎಂದು ಮಲ್ಲಿಕಾರ್ಜುನ್ ಗೋವಾಕ್ಕೆ ತೆರಳಿದಾಗ ಇತ್ತಕಡೆ ಹನುಮಂತ ನಾಯ್ಕ್ ಇಂಜಿನಿಯರ್ ಮನೆಯಿರುವ ವಿಜಯನಗರ ಬಡಾವಣೆಗೆ ಬಂದು ಮನೆಯ ಒಡತಿ ಕಮಲಮ್ಮರನ್ನ ಕೊಲೆ ಮಾಡಿ ೩೫ ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದ್ದನು.
ಪೊಲೀಸರು ಈ ಸಂಬಂಧ ಹನುಮಂತ ನಾಯ್ಕ್, ಪ್ರದೀಪ್ ಹಾಗೂ ಅನುಪಿನ ಕಟ್ಟೆಯ ಪ್ರಭು ರಾಜುತೀರ್ಥ, ಅಪ್ಪುನಾಯ್ಕ್ ಸೇರಿ ೬ ಜನರನ್ನ ಬಂಧಿಸಿzರೆ.