ಹೊನ್ನಾಳಿ: ಚಂದ್ರಯಾನ ಯಶಸ್ವಿಗೆ ಹಾರೈಸಿ ವಿಶೇಷ ಪೂಜೆ

ಘಿಹೊನ್ನಾಳಿ : ಹೊನ್ನಾಳಿ ಪಟ್ಟಣದ ತೆಗ್ಗಿನ ಮಠದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇಂದು ಇಸ್ರೋ ತಂಡದ ಚಂದ್ರಯಾನ-೩ ಯಶಸ್ವಿಗಾಗಿ ಇಳಿಯಲಿ ಎಂದು ರಾಷ್ಟ್ರೀಯ ಸ್ವಯಂಸೇವಕರು ವಿಶೇಷ ಪೂಜೆ ನೆರವೇರಿಸಿದರು.
ಚಂದ್ರಯಾನ-೩ರ ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದು, ಭಾರತ ದೇಶದ ಕೀರ್ತಿ ಪತಾಕೆಯನ್ನು ಚಂದ್ರನಲ್ಲಿ ಅಚ್ಚಳಿಯದೇ ಸ್ಥಾಪಿಸಲಿ ಎಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲಾಯಿತು.
ಇಸ್ರೋ ವಿeನಿಗಳ ಶ್ರಮದ ಫಲ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನೆರವೇರಲಿ, ಚಂದ್ರಸ್ಪರ್ಶ ಕಾರ್ಯಾಚರಣೆ ಯಿಂದ ಭಾರತ ದೇಶಕ್ಕೆ ಮತ್ತೊಂದು ಕಿರೀಟ ಮುಡಿಗೇರಲಿ ಎಂದು ಹಾರೈಸಿ ವಿಶೇಷ ಪೂಜೆಯನ್ನು ಮಾಡಿದರು.
ಪ್ರತಿಯೊಬ್ಬ ಭಾರತೀಯನ್ನು ಹೆಮ್ಮೆಪಡುವ ಕ್ಷಣಕ್ಕೆ ಕ್ಷಣ ಗಣನೆ ಶುರುವಾಗಿದೆ, ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಸಲು ಇಸ್ರೋ ವಿeನಿಗಳು ಎಲ್ಲ ರೀತಿಯಲ್ಲಿ ಸಿದ್ಧತೆ ನಡೆಸಿದ್ದು, ಭಾರತದ ಇತಿಹಾಸದಲ್ಲಿ ಹೊಸ ಮೈಲಿಗಳನ್ನು ಸಾಧಿಸಲಿರುವ ಈ ಕಾರ್ಯದಲ್ಲಿ ಇಸ್ರೋ ತಂಡವು ಯಶಸ್ವಿಯಾಗಲಿ ಎಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಪೂಜೆ ಮಾಡುವ ಮೂಲಕ ಶುಭ ಹಾರೈಸಿದರು.
ಪ್ರಮುಖರಾದ ಉಮಾ ಕಾಂತ್ ಜೋಯಿಸ್, ಶ್ರೀನಿವಾಸ್, ಭರತ್ ಸತ್ತಿಗಿ, ಕುಶಾಲ್, ತೇಜಸ್, ಹರ್ಷಿತ್ ಸೇರಿದಂತೆ ಇನ್ನಿತರರು ಪೂಜ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.