೮೩ರ ಬ್ಯಾಚ್ ವಿದ್ಯಾರ್ಥಿಗಳಿಂದ ಹೃದಯಸ್ಪರ್ಶಿ ‘ಗುರುವಂದನಾ’
ಧಾರವಾಡ: ಸಾಮಾನ್ಯವಾಗಿ ಭಣಗುಡುವ ರವಿವಾರಗಳಿಗೆ ಅಪವಾದವೆಂಬಂತೆ ಮೊನ್ನೆಯ ಭಾನುವಾರ ಕರ್ನಾಟಕ ವಿವಿ ಆವರಣಕ್ಕೆ ವಿಶೇಷ ಕಳೆ ತುಂಬಿತ್ತು. ತಮ್ಮ ನಾಲ್ಕು ದಶಕಗಳ ಹಿಂದಿನ ಸವಿ ನೆನಪುಗಳೊಡನೆ ಆವರಣದ ತುಂಬೆಲ್ಲ ಓಡಾಡಿದ ೧೯೮೩ರ ಎಂ.ಕಾಂ. ಬ್ಯಾಚಿನ ವಿದ್ಯಾರ್ಥಿಗಳು ಕವಿವಿ ಆವರಣಕ್ಕೆ ಸ್ಮರಣಿಯ ಮೆರುಗು ತಂದಿತ್ತರು.
ಅಂದು ಮುಂಜನೆ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ, ತಾವು ಪ್ರಥಮ ವರ್ಷ ಓದಿದ್ದ ತರಗತಿಯ ನಡೆದ ಅತ್ಯಂತ ಭಾವನಾತ್ಮಕ, ಅಷ್ಟೇ ಹೃದಯಸ್ಪರ್ಶಿ ‘ಗುರು ವಂದನಾ’ ಕಾರ್ಯಕ್ರಮದಲ್ಲಿ ೪೦ ವರ್ಷಗಳ ಹಿಂದಿನ ವಿದ್ಯಾರ್ಥಿ ಗಳು ಅಂದು ತಮಗೆ ವಿದ್ಯಾರ್ಜನೆ ಮಾಡಿ, ಜೀವನಕ್ಕೊಂದು ದಾರಿ ತೋರಿಸಿಕೊಟ್ಟ ಗುರುಗಳನ್ನಷ್ಟೇ ಅಲ್ಲದೇ, ಇಂದೂ ಆ ಕೆಲಸ ಮುಂ ದುವರಿಸಿಕೊಂಡು ಹೋಗಿರುವ ಅಧ್ಯಾಪಕ ವೃಂದದವರನ್ನೂ ಆತ್ಮೀ ಯವಾಗಿ ಸತ್ಕರಿಸಿ ಗೌರವಿಸಿದರು.
ತಮ್ಮ ಇಳಿ ವಯಸ್ಸಿನಲ್ಲೂ ಸುಮಾರು ನಾಲ್ಕು ತಾಸು ನಡೆದ ಕಾರ್ಯಕ್ರಮದಲ್ಲಿ ಖುzಗಿ ಉಪಸ್ಥಿತರಿದ್ದ ಪ್ರೊ. ಸಿ.ಎಂ. ಕೊಟ್ಟೂರಶೆಟ್ಟರ ವಿದ್ಯಾರ್ಥಿಗಳ ನಮನ ಸ್ವೀಕರಿಸಿ ಅವರ ಭವಿಷ್ಯದ ಬಾಳಿಗೆ ಶುಭ ಹಾರೈಸಿದರು. ೧೯೮೩ರ ಬ್ಯಾಚಿನೊಂದಿಗೇ ತಮ್ಮ ಪ್ರಾಧ್ಯಾಪಕ ವೃತ್ತಿ ಆರಂಭಿಸಿ, ನಂತರ ವಿವಿ ಕುಲಪತಿಯ ಜವಾ ಬ್ದಾರಿಯನ್ನೂ ನಿಭಾಯಿಸಿದ ಡಾ. ಎಸ್.ಎಸ್. ಹೂಗಾರ ಅತ್ಯಂತ ಭಾವನಾತ್ಮಕವಾಗಿ ಮಾತನಾಡಿ, ನಾಲ್ಕು ದಶಕಗಳ ನಂತರವೂ ತಮ್ಮ ಅಳಿಲು ಸೇವೆಯನ್ನು ಸೆನಪಿನಲ್ಲಿ ರಿಸಿಕೊಂಡು ತಮ್ಮನ್ನು ಸನ್ಮಾನಿಸಿದ ವಿದ್ಯಾರ್ಥಿ ವೃಂದವನ್ನು ಶ್ಲಾಘಿಸಿ ದರು. ಕವಿವಿ ವಾಣಿಜ್ಯ ಶಾಸ್ತ್ರ ವಿಭಾ ಗದ ಮುಖ್ಯಸ್ಥ ಡಾ. ಆರ್.ಎಲ್. ಹೈದರಾಬಾದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕವಿವಿ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾ ಪಕರುಗಳಾದ ಡಾ. ಎ.ಎಸ್. ಶಿರಾಳಶೆಟ್ಟಿ, ಡಾ. ಶ್ರೀಮತಿ ಎ.ಎನ್. ತಾಮ್ರಗುಂಡಿ, ಡಾ. ಶ್ರೀಮತಿ ಎಂ. ಚಂದ್ರಮ್ಮಾ ಹಾಗೂ ಡಾ. ಕಿರಣಕುಮಾರ ಬನ್ನಿಗೋಳ ಉಪಸ್ಥಿತರಿದ್ದರು.
ಸಮಾರಂಭದ ಪ್ರಾರಂಭದಲ್ಲಿ ವಿಲಾಸಿನಿ ಭಟ್ ಹಾಗೂ ಶ್ರೀಲಕ್ಷ್ಮಿ ಭಟ್ ಅವರಿಂದ ಪ್ರಾರ್ಥನೆ. ವಸಂತ ಮುರ್ಡೇಶ್ವರ ಅವರಿಂದ ಸ್ವಾಗತ ಹಾಗೂ ಅತಿಥಿಗಳ ಪರಿಚಯ. ಜೆ.ಎಸ್. ಪೂಜೇರಿ ಅವರು ಸನ್ಮಾನ ಪತ್ರ ಅರ್ಪಿಸಿದರೆ ವಿದ್ಯಾರ್ಥಿಗಳ ಪರವಾಗಿ ಡಾ. ಎಂ.ಆರ್. ಸೊಪುರ, ಪ್ರೇಮ ಲತಾ ಹೊಸೂರ, ಮಂಜುನಾಥ ಅಣ್ಣಿಗೇರಿ, ಮೋಹನ ಭಟ್ ಹಾಗೂ ರಾಜಸಾಹೇಬ್ ಸಯ್ಯದ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು. ಕೊನೆಯಲ್ಲಿ ಡಾ. ಆರ್.ಎಂ. ಪಾಟೀಲ ವಂದಿಸಿ ದರು. ಡಾ. ಸದಾಶಿವ ಹಲಸಗಿ ಕಾರ್ಯಕ್ರಮ ನಿರೂಪಿಸಿದರು.