ಆರೋಗ್ಯವಂತ ಯುವಜನರೇ ರಕ್ತದಾನ ಮಾಡಲು ಮುಂದಾಗಿ: ದಿನಕರ್

ಶಿವಮೊಗ್ಗ: ತುರ್ತು ಸಂದರ್ಭ ಗಳಲ್ಲಿ ಜೀವ ಉಳಿಸುವ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ರಕ್ತದಾನಿಗಳು ಸಮಾಜದ ಆಸ್ತಿ. ಪ್ರತಿಯೊಬ್ಬ ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ರಕ್ತದಾನಿ ಧರಣೇಂದ್ರ ದಿನಕರ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಜನ್ಮದಿನದ ಹಿನ್ನೆಲೆಯಲ್ಲಿ ಸ್ವತಃ ರಕ್ತದಾನ ಮಾಡಿ ಮಾತನಾಡಿ, ರಕ್ತದ ಅವಶ್ಯಕತೆ ಇzಗ ಸಕಾಲದಲ್ಲಿ ರಕ್ತದಾನ ಮಾಡುವುದು ಶ್ರೇಷ್ಠ ಕೆಲಸ. ಪುಣ್ಯದ ಕೆಲಸ ಮಾಡುವ ರಕ್ತದಾನಿಗಳೇ ನಿಜವಾದ ಹಿರೋಗಳು ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ರೋಟರಿ ಸದಸ್ಯ ಧರಣೇಂದ್ರ ದಿನಕರ್ ಅವರ ಸಾಧನೆ ನಿಜಕ್ಕೂ ಸಮಾಜಕ್ಕೆ ಮಾದರಿ ಹಾಗೂ ಆದರ್ಶ. ಇಂತಹ ರಕ್ತದಾನಿಗಳು ಸಮಾಜದಲ್ಲಿ ಹೆಚ್ಚಾಗಬೇಕು. ರಕ್ತದ ಕೊರತೆ ನೀಗಿಸುವಲ್ಲಿ ಅನುಕೂಲ ಆಗುತ್ತದೆ. ಯುವಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ ಮಾಜಿ ಅಧ್ಯಕ್ಷ ಜಿ. ವಿಜಯ್‌ಕುಮಾರ್ ಮಾತನಾಡಿ, ರಕ್ತದಾನ ಮಾಡುವುದರಿಂದ ವ್ಯಕ್ತಿಯ ಆರೋಗ್ಯ ಮತ್ತಷ್ಟು ಸದೃಢ ಆಗುತ್ತದೆ. ರಕ್ತದಾನ ಮಾಡುವುದ ರಿಂದ ಹೃದಯಾಘಾತ ಸಂಭವ ಕಡಿಮೆಯಾಗಿದೆ ಎಂದರು.
ರೆಡ್‌ಕ್ರಾಸ್ ನಿರ್ದೇಶಕ ಧರಣೇಂದ್ರ ದಿನಕರ್ ಅವರು ೧೧೨ನೇ ಬಾರಿ ರಕ್ತದಾನ ಮಾಡಿ ದಾಖಲೆಯತ್ತ ಹೆಜ್ಜೆ ಹಾಕಿzರೆ. ೧೧೨ ಬಾರಿ ರಕ್ತದಾನ ಮಾಡಿರುವ ಧರಣೇಂದ್ರ ದಿನಕರ್ ಅವರಿಗೆ ಅಭಿನಂದಿಸಲಾಯಿತು.
ರೆಡ್‌ಕ್ರಾಸ್ ನಿರ್ದೇಶಕ ಮಂಜು ಅಪ್ಪಾಜಿ, ನವೀನ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್ ಕುಮಾರ್, ೧೦೨ ಬಾರಿ ರಕ್ತದಾನ ಮಾಡಿದ ಕೆ.ರಮೇಶ್, ಲಕ್ಷ್ಮೀ, ಪೂಜ ಮತ್ತಿತರರು ಉಪಸ್ಥಿತರಿದ್ದರು.