ವಿಐಎಸ್‌ಎಲ್‌ಯಿಂದ ಆರೋಗ್ಯ ತಪಾಸಣಾ ಶಿಬಿರ

ಭದ್ರಾವತಿ: ನಗರದ ವಿಐಎಸ್ ಎಲ್ ಕಾರ್ಖಾನೆ ವತಿಯಿಂದ ವಿಐಎಸ್‌ಎಲ್ ಆಸ್ಪತ್ರೆ, ಶಿವಮೊಗ್ಗ ಸಹ್ಯಾದ್ರಿ ನಾರಾಯಣಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಇವರುಗಳ ಸಹ ಯೋಗದಲ್ಲಿ ತಾಲ್ಲೂಕಿನ ಮೈದೊ ಳಲು ಗ್ರಾಮದಲ್ಲಿ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ ಕಾರ್ಯ ಕ್ರಮದ ಅಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿ ಸಲಾಗಿತ್ತು. ಸಾಮಾನ್ಯ ಆರೋಗ್ಯ, ಹೃದಯ, ಕಣ್ಣಿನ, ಮೂಳೆ, ದಂತ ಚಿಕಿತ್ಸೆಯ ತಪಾಸಣೆಯನ್ನು ಮತ್ತು ಉಚಿತ ಔಷಧಿಯ ವಿತರಣೆಯನ್ನು ಏರ್ಪಡಿಸಲಾಗಿತ್ತು.


ಕಾರ್ಯಕ್ರಮವನ್ನು ವಿಐಎಸ್ ಎಲ್ ಕಾರ್ಖಾನೆಯ ಕಾರ್ಯ ಪಾಲಕ ನಿರ್ದೇಶಕರಾದ ಬಿ.ಎಲ್. ಚಂದ್ವಾನಿ, ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಹಾಗೂ ಗೀತಮ್ಮ, ಅಧ್ಯಕ್ಷರು, ಮೈದೊಳಲು ಗ್ರಾಮ ಪಂಚಾಯಿತಿ ಉದ್ಘಾಟಿಸಿದರು,
ಈ ಸಂದರ್ಭದಲ್ಲಿ ಕಾರ್ಖಾನೆ ಯ ಮಹಾಪ್ರಬಂಧಕರು (ಸಿಬ್ಬಂ ದಿ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ಡಾ|| ಎಮ್.ವೈ.ಸುರೇಶ್, ಮುಖ್ಯ ವೈಧ್ಯಾಧಿಕಾರಿ, ಎಸ್.ಎನ್. ಸುರೇಶ್, ವೈಧ್ಯಾಧಿಕಾರಿಗಳು, ಕೆ.ಎಸ್. ಶೋಭ, ಸಹಾಯಕ ಪ್ರಬಂಧಕರು (ಸಿಬ್ಬಂದಿ), ಸಹ್ಯಾದ್ರಿ ನಾರಾಯಣ ಹೃದಯಾ ಲಯದ ಹಾಗೂ ಶಂಕರ ಕಣ್ಣಿನ ಆಸ್ಪತ್ರೆಯ ವೈಧ್ಯಕೀಯ ತಂಡ, ಮೈದೊಳಲು ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.
ವಿಐಎಸ್‌ಎಲ್ ಆಸ್ಪತ್ರೆಯ ತಜ್ಞರಾದ ಡಾ|| ಎಮ್.ವೈ. ಸುರೇಶ್ ಮತ್ತು ಡಾ|| ಎಸ್.ಎನ್. ಸುರೇಶ್, ಸಾಮಾನ್ಯ ಆರೋಗ್ಯ, ಮೂಳೆ ಮತ್ತು ದಂತ ಸಮಸ್ಯೆಗಳ ಬಗ್ಗೆ ತಜ್ಞರ ಸಲಹೆಯನ್ನು ನೀಡಿದರು. ಅಪರ್ಣ, ಟಿ.ಎನ್. ಕೃಷ್ಣ, ಅಲೆನ್ ಜುಡೊ ಪಿಂಟೊ, ಮಧುಕರ್, ತುಳಸಿ, ಮತ್ತು ಆರ್. ಮಂಜುನಾಥ್ ಸಹಕರಿಸಿದರು.
ಶಂಕರ ಕಣ್ಣಿನ ಆಸ್ಪತ್ರೆಯ ತಜ್ಞರಾದ ಡಾ|| ಅಮೃತ ಮಧು, ಜುಮನ,. ಕಾವ್ಯ ಮತ್ತು.ಚಂದನ ಮತ್ತು ಮಹೇಶ್ ರಾಯ್ಕರ್ ನೇತ್ರ ಪರೀಕ್ಷೆಗಳನ್ನು ನಡೆಸಿ ನೇತ್ರ ಆರೈಕೆಯ ಬಗ್ಗೆ ತಜ್ಞರ ಸಲಹೆಯನ್ನು ನೀಡಿದರು.
ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞರಾದ ಡಾ|| ಜೀನಾ, ಡಾ|| ಹಂಸಲೇಖ. ತಾಸಿನಾ, ಪೂಜ, ಅತುಲ್ಯ ಮತ್ತು ಗಣೇಶ್ ಅವರು ಹೃದಯ ಸಂಬಂಧಿ, ೨ಈ ಉಇಏu ಹಾಗೂ ಉಇಎ ಪರೀಕ್ಷೆಗಳನ್ನು ನಡೆಸಿ, ಹೃದ್ರೋಗ ಆರೈಕೆಯ ಬಗ್ಗೆ ತಜ್ಞರ ಸಲಹೆಯನ್ನು ನೀಡಿದರು.
೨೫೪ ಗ್ರಾಮಸ್ಥರು ಈ ಶಿಬಿರ ದ ಸದುಪಯೋಗ ಪಡೆದುಕೊಂ ಡರು. ಕಾರ್ಯಕ್ರಮವನ್ನು ವಿಐ ಎಸ್‌ಎಲ್ ಆಸ್ಪತ್ರೆ, ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೈದೊಳಲು ಗ್ರಾ.ಪಂ.ಯವರ ಸಹಯೋಗದೊಂದಿಗೆ ಸಂಯೋ ಜಿಸಲಾಯಿಗಿತ್ತು.