ಎ ಇದ್ದ ಹಾಗೆ ಇದ್ದೇ
ಕನಸ ಮಲ್ಲಿಗೆ ಮುಡಿದು
ಒಂದೊಮ್ಮೆ ಸಂದೇಶಿಸಿ
ಭಾವ ಬಂಧನ ಬೆಸೆದೆ…

ಕಷ್ಟ ಸುಖದ ಪುಟಗಳ
ತಿರುವಿ, ತಿರುಗಿ ನಕ್ಕು ಉಲಿದೆ
ಮುಸುಕಿದ್ದ ಅಕ್ಷರಕೆ
ತಂಗಾಳಿ ಬೀಸಿ,ಅವು
ಕುಣಿಯುವ ಮುನ್ನ ,ಕುಣಿಕೆ ಹಾಕಿದೆ
ಯಾವ ಪುರಸ್ಕಾರ ಬಯಸಿ
ನಿನ್ನ ನಗು ಮಾತೇ ಕಿರೀಟವೆನಗೆ…

ಎ ಮರೆಯಲ್ಲಿ ಮಲಗಿz
ಜಗ ನೋಡಲು ಬಿಟ್ಟು,
ಮೌನದ ಕಾಲ್ಬಳೇ ತೊಟ್ಟು
ಅಪರಿಚಿತನಾಗಿ ನಡೆದೇ…

ಮುಗಿಲನೇರಿದ ಸಾಮಾನ್ಯರಲ್ಲಿ
ಒಂದಾಗಿ ,ಗೌರವದ ಗೋಪುರ
ಸಿಡಿಲಿಸಿ, ಹುಡಿಯಾಗಿಸಿದೆ
ಇರಲಿ ಮೌನವೇ,ಬದುಕು ನೀ…

ಎ ಎಗಳ ಮೀರಿ
ಬಾನೆತ್ತರಕ್ಕೆ ಹಾರಿ
ಮಿರುಗುವ ಚುಕ್ಕಿಯಾಗಿ
ಸಂಭ್ರಮಿಸುವ ಬೆಳಗುವ
ದೀವಿಗೆಯಾಗಿ …

ನೆನಹುವಿನ ಕೋಣೆಯೊಳು
ಸದಾ ಉಸಿರಾಡಲು
ಕೊಂಚ ತಾಣವಿಡು ನನಗಾಗಿ…
ಅಶ್ವಿನಿ ಅಂಗಡಿ.
ಬದಾಮಿ.