ಪ್ರತಿಷ್ಠಿತ ಸರ್ವೋದಯ ಶಿಕ್ಷಣ ಸಂಸ್ಥೆಗೆ ಸುವರ್ಣ ಸಂಭ್ರಮ …

0
sarvodhaya-school

ವಿಶೇಷ ಲೇಖನ: ಶ್ರೀಮತಿ ಕೆ.ಎಂ. ಹೇಮಾ
ವಿಜ್ಞಾನ ಶಿಕ್ಷಕರು, ಎಸ್.ರಾಮಯ್ಯ ಸರ್ವೋದಯ ಬಾಲಿಕಾ ಪ್ರೌಢಶಾಲೆ,ಶಿವಮೊಗ್ಗ.
ಎಲ್ಲರ ಜೀವನದ ಪ್ರತಿ ಸಂದರ್ಭ, ಸನ್ನಿವೇಶಗಳು ತನ್ನದೇ ಆದ ಮಹತ್ವವನ್ನು ಹೊಂದಿವೆ, ಅವಶ್ಯಕತೆಗಳು ಅದನ್ನು ಮತ್ತಷ್ಟು ಉಜ್ವಲಗೊಳಿಸುತ್ತವೆ. ಈ ನಿಟ್ಟಿನಲ್ಲಿ ಸುವರ್ಣ ಮಹೋತ್ಸವವು ವಿಶಿಷ್ಟ ಮಹತ್ವ ಪಡೆಯುತ್ತದೆ. ಒಂದು ಸಂಸ್ಥೆಯ ೫೦ ವರ್ಷದ ಪಯಣ ಅದರ ಸಾಧನೆ ಅತ್ಯುತ್ತಮ ಕಾರ್ಯ ಮತ್ತು ಸೇವೆಯನ್ನು ಮರಳಿ ನೆನಪಿಸುವಲ್ಲಿ ಮತ್ತು ಮುಂದೆ ಎದುರಾಗುವ ಸವಾಲುಗಳನ್ನು ಎದುರಿಸಲು ಸಿದ್ಧತೆಗಳ ಬಗ್ಗೆ, ಆತ್ಮಾವಲೋಕನ ಮಾಡಿಕೊಳ್ಳಲು ಸಹಾಯ ಮತ್ತು ಒಂದು ಪುಮುಖ ಮೈಲುಗಲ್ಲು ಎಂದರೆ ತಪ್ಪಾಗಲಾರದು.
ಎತ್ತಾಗಿ ತೊತ್ತಾಗಿ ಹಿತ್ತಲ ಗಿಡವಾಗಿ,
ಮತ್ತೆ ಪಾದದ ಕೆರನಾಗಿ,
ಗುರುವಿನ ಹತ್ತಲಿರು ಸರ್ವಜ್ಞ ||
ಯಾವಾಗಲೂ ಗುರುವಿನ ಬಳಿ ಇರು, ಗುರುವನ್ನು ಬಿಟ್ಟು ಅಗಲ ಬೇಡ ಗುರುವಿನ ಆಳಾಗಿ ಇಲ್ಲವೇ ಅವನ ಪಾದರಕ್ಷೆಯಾಗಿಯಾದರೂ ಪರವಾಗಿಲ್ಲ ಹತ್ತಿರದಲ್ಲಿರು, ಎನ್ನುವ ಸರ್ವಜ್ಞನ ವಚನ ವಿದ್ಯೆಯ ಮಹತ್ವವನ್ನು ಗುರುವಿನ ಸ್ಥಾನವನ್ನು ಸಾರಿ ….. ಸಾರಿ ಹೇಳುತ್ತವೆ.
ಈ ನಿಟ್ಟಿನಲ್ಲಿ ಶಿವಮೊಗ್ಗ ಜಯನಗರ ಮತ್ತು ಅದರ ಸುತ್ತು ಮುತ್ತಲ್ಲಿನವರಿಗೆಲ್ಲ ಚಿರಪರಿಚಿತ. ಹೆಮ್ಮೆಯ ಕೇಂದ್ರಬಿಂದು ಮಹಾತ್ಮ ಗಾಂಧೀಜಿಯವರ ಪ್ರೇರಣೆ ಯಿಂದ ೧೯೪೮ರಂದು ಉತ್ತಮ ಉದ್ದೇಶಗಳನ್ನು ಹೊಂದಿ ಪುಟ್ಟ ಕೋಣೆಯಿಂದ ಪ್ರಾರಂಭವಾಗಿ ಇಂದು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಪದವಿಪೂರ್ವ ಮತ್ತು ಪದವಿ ತರಗತಿಗಳನ್ನು ಒಂದೇ ಸೂರಿನಡಿ ನಡೆಸಿದ… ನಡೆಸುತ್ತಿರುವ ಸಂಸ್ಥೆ ಜಯನಗರದ ಹೆಮ್ಮೆಯ ಸರ್ವೋದಯ ಶಿಕ್ಷಣ ಸಂಸ್ಥೆ.
ಮಹಾತ್ಮರ ಧ್ಯೇಯೋದ್ದೇಶಗಳನ್ನು ತನ್ನಲ್ಲಿ ಅಳವಡಿಸಿಕೊಂಡು ಬಾಳಿನುದ್ದಕ್ಕೂ ನ್ಯಾಯ, ನಿಷ್ಠೆ, ಜನಪರ ಕಾಳಜಿಗಳಂತ ಸದ್ವಿಚಾರಗಳನ್ನು ಒಳಗೊಂಡ, ಸರ್ವರಿಗೂ ಸಮಬಾಳು ಸಮಪಾಲು ಎನ್ನುವ ಆದರ್ಶದಡಿ ಸ್ಥಾಪಿತವಾದ ಶಿಕ್ಷಣ ಸಂಸ್ಥೆಯ ಪ್ರಮುಖ ರೂವಾರಿಗಳೆಂದರೆ, ಶ್ರೀಯುತ ನಾರಾಯಣ ಮೂರ್ತಿಯವರು ಮತ್ತು ಅವರ ಶ್ರೀಮತಿಯವರಾದ ಜಯಲಕ್ಷ್ಮಮ್ಮನವರು, ಇವರ ಜೊತೆ ಕೈಜೋಡಿಸಿ ಅದನ್ನು ಉನ್ನತ ಮಟ್ಟಕ್ಕೇರಿಸಲು ಸಹಾಯ ಹಸ್ತ ಚಾಚಿದವರಲ್ಲಿ ಪ್ರಮುಖರೆಂದರೆ ಶ್ರೀಮತಿ ಗಂಗಮ್ಮನವರು, ಡಾ|ಜಯಮ್ಮನವರು, ಶ್ರೀಮತಿ ವಿಶಾಲಾಕ್ಷಮ್ಮನವರು, ಎಸ್.ರಾಮಯ್ಯನವರು, ಶ್ರೀನಿವಾಸ ಅಯ್ಯಂಗಾರ್, ಲಕ್ಷ್ಮಯ್ಯನವರು, ತೀರ್ಥಪ್ಪನವರು, ಸತ್ತಾರ್ ಖಾನ್ ಆಫ್ರಿದಿಯವರು, ಗಿರಿಮಾಜಿಯವರು, ಶ್ರೀ ಲಿಂಗಮರಿಯಪ್ಪನವರು, ಡಾ| ಜಿ. ಶಿವಪ್ಪನವರು ಹಾಗೆಯೇ ಇತ್ತೀಚಿನವರಾದ ಶ್ರೀ ಎನ್. ವೀರಣ್ಣನವರು, ಶ್ರೀ ರಾಜರಾಮ್, ಶ್ರೀ ವಾಸುದೇವ್ ಮೂರ್ತಿ, ಶ್ರೀ ನಾಗೇಶ್ ರಾಯ್ಕರ್, ಶ್ರೀಮತಿ ವಿಜಯ ವೆರ್ಣೇಕರ್, ಶ್ರೀಮತಿ ವಿಜಯಲಕ್ಷ್ಮಿ, ಶ್ರೀಮತಿ ಮಾಧವಿ, ಶ್ರೀ ರಾಘವೇಂದ್ರ ಮತ್ತು ಶ್ರೀ ನಾಗಭೂಷಣ್. ಈ ಎ ಪ್ರಮುಖ ಮಹನೀಯರ ಉತ್ತಮ ಉದ್ದೇಶಗಳು ಶಿವಮೊಗ್ಗದ ಎ ವರ್ಗಗಳ ಪ್ರಮುಖವಾಗಿ, ಆರ್ಥಿಕವಾಗಿ ಹಿಂದಿರುವ ಎಲ್ಲರಿಗೂ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡುವ ಸಂಸ್ಥೆಯಾಗಿ ಹೊರಹೊಮ್ಮಿ ರುವುದು ಸಂತಸದ ವಿಷಯವಾಗಿದೆ.
ವಿದ್ಯೆ ಯಾರೊಬ್ಬರ ಸ್ವತ್ತಲ್ಲ. ಅದು ಸಮಾಜದ ಪ್ರತಿಯೊಬ್ಬರಿಗೂ ಸಮಾನವಾಗಿ ದೊರಕಬೇಕು ಎನ್ನುವ ನಿಟ್ಟಿನಲ್ಲಿ ಪ್ರೌಢರಲ್ಲಿ ಅದರಲ್ಲೂ ಹೆಣ್ಣು ಮಕ್ಕಳಿಗೆ ಏಕೆ ವಿದ್ಯೆ ಮನೆಯ ಮುಸುರೆ ತಿಕ್ಕಿದರೆ ಸಾಕು … ಅವರು ಹೊರಗೆ ಹೋಗಿ ಯಾರನ್ನು ಉದ್ಧಾರ ಮಾಡುವುದು ಬೇಡ ಎನ್ನುವ ಮನಸ್ಥಿತಿಯಲ್ಲೂ ನಮ್ಮ ಹೆಣ್ಣು ಮಕ್ಕಳು ವಿದ್ಯೆ ಪಡೆದು ಸ್ವಾವಲಂಬಿಗಳಾಗ ಲೇಬೇಕು ಎನ್ನುವ ಮನಸ್ಥಿತಿಯ ಡಾ|ಜಯಮ್ಮನವರ ಮತ್ತು ಅವರ ಸಹೋದರ ಎಸ್.ರಾಮಯ್ಯನವರ ದೂರ ದೃಷ್ಟಿಯ ಫಲವಾಗಿ ೧೯೭೩ರಲ್ಲಿ ಜನ್ಮ ತಾಳಿದ ಸರ್ವೋದಯ ಸಂಸ್ಥೆಯ ಮತ್ತೊಂದು ಅಡಿಗಲು ಅದುವೇ ಎಸ್.ರಾಮಯ್ಯ ಸರ್ವೋದಯ ಬಾಲಿಕಾ ಪ್ರೌಢಶಾಲೆ.
ಅಂದಿನ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಬಿ .ಡಿ . ಜತ್ತಿಯವರಿಂದ ಉದ್ಘಾಟಿಸಲ್ಪಟ್ಟ ಪ್ರಗತಿಶೀಲ, ಉತ್ತಮ ಶಿಸ್ತನ್ನು ಒಳಗೊಂಡ ಪೂರಕ ಶಿಕ್ಷಣವನ್ನು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಹೆಣ್ಣು ಮಕ್ಕಳಿಗೆ ಒದಗಿಸಿದ ಸಂಸ್ಥೆಯಿಂದ ಇಲ್ಲಿ ಶಿಕ್ಷಣ ಪಡೆದು ಆರ್ಥಿಕವಾಗಿ ಹಿಂದುಳಿದ ಮತ್ತು ಎಲ್ಲ ವರ್ಗದ ವಿದ್ಯಾರ್ಥಿನಿಯರು ಪ್ರಪಂಚದ ಮೂಲೆಮೂಲೆಗಳಲ್ಲಿದ್ದು, ತಾವು ಪಡೆದ ಸಂಸ್ಕಾರಯುತ ಬದುಕಿನ ಪಾಠವನ್ನು ಇತರರಿಗೂ ಹಂಚುತ್ತ ಸಮಾಜವನ್ನು ಉನ್ನತ ಮಟ್ಟಕ್ಕೆ ತರುವಲ್ಲಿ ತಮ್ಮ ಕೊಡುಗೆ ನೀಡುತ್ತಿzರೆ. ಶಾಲೆಯ ಯಶಸ್ಸು ಕೇವಲ ನಾಲ್ಕು ಕೋಣೆಯ ಒಳಗೆ ಪಠ್ಯಪುಸ್ತಕದಿಂದ ಪಡೆಯುವ ಶಿಕ್ಷಣದಿಂದ ಸಮಾಜದ ಬೆಳವಣಿಗೆ ಸಾಧ್ಯವಿಲ್ಲ ಎನ್ನುವುದನ್ನು ಅರಿತ ಸಂಸ್ಥೆಯು ತನ್ನ ಉತ್ತಮ ಶಿಕ್ಷಕ ಬಳಗದ ಸಹಾಯದಿಂದ ವಿದ್ಯಾರ್ಥಿಗಳಲ್ಲಿ ಜನ ನೀತಿಯ ಬಗ್ಗೆ ಅರಿವನ್ನು ಮೂಡಿಸಿ ಸಾಂಸ್ಕೃತಿಕ ಚಟುವಟಿಕೆ ಉತ್ತಮ ಚಿಂತನೆಗಳ ಹರಡುವಿಕ ಸೇರಿದಂತೆ ದೇಶಭಕ್ತಿ ರಾಷ್ಟ್ರಪ್ರೇಮ ಮೂಡಲು ಸಹಾಯ ಮಾಡುವುದರ ಜೊತೆಗೆ ವಿದ್ಯಾರ್ಥಿನಿಯರು ವಿeನ , ಸಾಹಿತ್ಯ, ಕ್ರೀಡೆ ಮತ್ತು ಇತರ ಸಾಂಸ್ಕೃತಿಕ ಚಟುವಟಿಕೆಯಲ್ಲೂ ಮುಂದುವರೆದು ಜೀವನದಲ್ಲಿ ಯಶಸ್ಸು ಪಡೆಯಲು ಸಹಕರಿಸಿ ಶಾಲೆಯ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸಿರುವ ಶಿಕ್ಷಕರು, ಕಠಿಣ ಶಿಸ್ತು ಮತ್ತು ಪ್ರೀತಿಯಿಂದ ಮಾಡಿದ ಮಾರ್ಗದರ್ಶನ ಸರ್ವೋದಯ ಪ್ರೌಢಶಾಲೆಯು ನಗರದಲ್ಲಿ ಇಂದು ಪ್ರಖ್ಯಾತಿ ಪಡೆದಿರುವುದು ಎ ಶಿಕ್ಷಕರ ಪರಿಶ್ರಮ ಹಾಗೂ ಸಂಯಮದ ಫಲವಾಗಿದೆ.
ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಉತ್ತಮ ತಳಹದಿ ಹಾಕುತ್ತಾ ಐವತ್ತು ವರ್ಷದ ಅವಧಿಯಲ್ಲಿ ಶಾಲೆಯ ಅನೇಕ ಏಳುಬೀಳುಗಳ ಮಧ್ಯೆಯೂ, ದೃಢ ಮನಸ್ಸಿನ ಸಂಸ್ಥೆಯ ಪದಾಧಿಕಾರಿ ಗಳಿಂದಾಗಿ ಮುಂಬರುವ ಪೀಳಿಗೆಗೆ ಇನ್ನೂ ಹೆಚ್ಚಿನ ಅವಕಾಶವನ್ನು ಉತ್ತಮ ಶೈಕ್ಷಣಿಕ ತಳಹದಿಯನ್ನು ಒದಗಿಸಲು ಶಾಲೆಯ ಆಡಳಿತ ಮಂಡಳಿ ಶಿಕ್ಷಕ ವೃಂದ ಮತ್ತು ಪೋಷಕರ ಸಹಾಯದಿಂದ ಮುಂದಿನ ದಿನಗಳಲ್ಲಿ ಎಸ್.ರಾಮಯ್ಯ ಸರ್ವೋದಯ ಶಿಕ್ಷಣ ಸಂಸ್ಥೆಯು ಸಮಾಜದಲ್ಲಿ ಎಲ್ಲರಿಗೂ ಮಾದರಿ ಯಾಗುವ ಆಶಯವನ್ನು ಹೊಂದಿದ ಇಂತಹ ಉತ್ತಮ ಧ್ಯೇಯೋದ್ದೇಶಗಳನ್ನು ಹೊಂದಿದ ಪ್ರೌಢಶಾಲೆ ತನ್ನ ೫೦ ವರ್ಷಗಳನ್ನು ಯಶಸ್ವಿಯಾಗಿ ಮುಗಿಸಿ ೫೧ರ ಹೊಸ್ತಿಲಲ್ಲಿರುವ ಈ ವರ್ಷ ಸುವರ್ಣ ಸಂಭ್ರಮದ ವರ್ಷವಾಗಿ ವರ್ಷವಾಗಿ ಆಚರಿಸಿಕೊಳ್ಳುತ್ತಿದೆ. ಅದು ನಾವು ಇಂದು ಎಲ್ಲಿದ್ದೇವೆ ಮತ್ತು ಭವಿಷ್ಯದಲ್ಲಿ ಎಲ್ಲರಿಗೂ ಉತ್ತಮ ವಿದ್ಯೆಯನ್ನು ನೀಡಲು ಇನ್ನೂ ಹೆಚ್ಚಿನ ಪರಿಶ್ರಮ ಪಡುವುದರ ಜೊತೆಗೆ ಹಿರಿಯರನ್ನು ಗೌರವಿಸಿ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಎಲ್ಲರ ಅಶೋತ್ತರಗಳನ್ನು ಪೂರೈಸಲು ದಢ ಮನಸ್ಸಿನಿಂದ ಹೆಜ್ಜೆ ಹಾಕಲು ಸಹಾಯಕವಾಗುತ್ತದೆ.
ಇದು ಕೇವಲ ಸಂಭ್ರಮದ ದಿನವಾಗದೆ ಭವಿಷ್ಯದ ಪೀಳಿಗೆಯ ಬಾಳಿನ ಅಧ್ಯಾಯವನ್ನು ಹೇಗೆ ರೂಪಿಸಬೇಕೆಂದು ತಿಳಿಸುವ ಪಾಠವಾಗಲಿದೆ ಈ ಸಂಭ್ರಮದ ಹಬ್ಬವನ್ನು ಆಚರಿಸುತ್ತಾ ಮುಂಬರುವ ಪೀಳಿಗೆಯ ವಿದ್ಯಾರ್ಥಿನಿಯರಿಗೆ ಇದೊಂದು ಅದ್ಭುತ ಸಾಧನೆ ಮತ್ತು ಪ್ರೇರಣೆಯಾಗಬೇಕಾಗಿದೆ . ದೃಢ ಸಂಕಲ್ಪದಿಂದ ಹೊಸ eನ ಮತ್ತು ಕ್ಷೇತ್ರಗಳನ್ನು ಅರಸಿ ಹೋಗುವ ಸಮಯಕ್ಕೆ ತಳಹದಿಯಾಗಬೇಕಾಗಿದೆ . ಈ ನಿಟ್ಟಿನಲ್ಲಿ ಸಂಸ್ಥೆಯ ಪದಾಧಿಕಾರಿಗಳ ಜೊತೆಗೆ ಹಳೆಯ ವಿದ್ಯಾರ್ಥಿಗಳು ಹಿರಿಯ ಶಿಕ್ಷಕರು ಮತ್ತು ಪೋಷಕರು ಹೆಜ್ಜೆಗೂಡುವುದರ ಜೊತೆಗೆ ಪ್ರೌಢಶಾಲೆಯು ತನ್ನ ವಜ್ರ ಮಹೋತ್ಸವ ಆಚರಿಸಿಕೊಳ್ಳಲು ಬೇಕಾದ ಉನ್ನತ ಮಟ್ಟದ ಶಿಕ್ಷಣದ ಜೊತೆ ಜೊತೆಗೆ ಕೈಗೆಟುಕುವ ವೆಚ್ಚದಲ್ಲಿ ಮಲ್ಯಾಧಾರಿತ ಚಾರಿತ್ರ ನಿರ್ಮಾಣ ಮತ್ತು ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಕೊಡಲು ಕಟಿಬದ್ಧರಾಗಿ ಸಮಾಜದಲ್ಲಿ ಸಂಸ್ಕಾರವಂತ ಪೀಳಿಗೆಯನ್ನು ತಯಾರು ಮಾಡಲು ಸಂಸ್ಥೆಯು ಸದಾ ಸಿದ್ಧವಾಗಿರುತ್ತದೆ ಎಂದು ಹೇಳಲು ಹೆಮ್ಮೆಯಾಗುತ್ತದೆ.
ಮನೆಯಲ್ಲಿ ಹುಟ್ಟಿದ ಹೆಣ್ಣು ಮಗುವೊಂದು ತನ್ನ ಅಕ್ಷರಾಭ್ಯಾಸ ಪೂರೈಸಿ, ಸರ್ವೋದಯ ಶಿಶುವಿಹಾರಕ್ಕೆ ಪಾದವಿಟ್ಟರೆ ಆ ಮಗು ಕಡಿಮೆ ವೆಚ್ಚದಲ್ಲಿ ತನ್ನ ಎ ಶೈಕ್ಷಣಿಕ ಹಂತಗಳನ್ನು ಸಾರ್ಥಕವಾಗಿ ತಂದೆ ತಾಯಿಗಳಿಗೆ ಆರ್ಥಿಕವಾಗಿ ಹೊರೆಯಾಗದೆ, ಸ್ವಾವಲಂಬಿಯಾಗಿ ಸಮಾಜಕ್ಕೆ ಉತ್ತಮ ಕೊಡುಗೆಯಾಗುವ ನಿಟ್ಟಿನಲ್ಲಿ ಸಂಸ್ಥೆಯ ಎ ಪದಾಧಿಕಾರಿಗಳ ಪುಯತ್ನಕ್ಕೆ ಹಿರಿಯರ, ಆ ಭಗವಂತನ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸುತ್ತಾ ಅವರು ಕಂಡ ಉನ್ನತ ಕನಸುಗಳು ನೆರವೇರುವ ದೃಢ ಸಂಕಲ್ಪದೊಂದಿಗೆ ಎಲ್ಲರೂ ಕೈಜೋಡಿಸಿ ಹೆಜ್ಜೆ ಇಡಲು ಕೋರುತ್ತೇನೆ.
ಇದೇ ಬರುವ ಡಿ.೧೩ ರ ಶುಕ್ರವಾರ ಸಂಜೆ ೫ಗಂಟೆಗೆ ಎಸ್.ರಾಮಯ್ಯ, ಸರ್ವೋದಯ ಬಾಲಿಕಾ ಪ್ರೌಢ ಶಾಲೆಯು ತನ್ನ ೫೧ನೇ ವರ್ಷದ ನೆನಪಿಗಾಗಿ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಸುಸಂದರ್ಭದಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ಇಂದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಸರ್ವೋದಯ ಬಳಗದ ಎಲ್ಲರೂ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕೆಂದು ಈ ಮೂಲಕ ಎಲ್ಲರಿಗೂ ಸ್ವಾಗತಿಸುತ್ತೇವೆ.
ಇಂದ : ಸರ್ವೋದಯ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು ಮತ್ತು ಎ ವಿದ್ಯಾರ್ಥಿನಿಯರು.

Leave a Reply

Your email address will not be published. Required fields are marked *