ಮಹಾರಾಜ ಗೃಹವೈಭವ್‌ನಲ್ಲಿ ಆ.೨೬ರವರೆಗೆ ಗೋದ್ರೇಜ್ ಲಾಕರ್ ಮೇಳ

ಶಿವಮೊಗ್ಗ: ನಗರದ ಕುವೆಂಪು ರಸ್ತೆಯಲ್ಲಿರುವ ಪ್ರತಿಷ್ಠಿತ ಮಹಾರಾಜ ಗೃಹ ವೈಭವ್‌ನಲ್ಲಿ ಆ.೨೧ರಿಂದ ೨೬ವರೆಗೆ ಗೋದ್ರೇಜ್ ಲಾಕರ್ ಮೇಳ ಆಯೋಜಿಸಲಾಗಿದೆ.
ಮೇಳಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು, ಹಬ್ಬದ ಸೀಜನ್ ಆಗಿರುವುದರಿಂದ ಕಂಪನಿ ಗ್ರಾಹಕರಿಗೆ ಉತ್ತಮ ಆಫರ್‌ಗಳನ್ನು ನೀಡಿದೆ. ಈ ಕಾರಣದಿಂದ ಲಾಕರ್ ಮೇಳ ಆಯೋಜಿಸಿದ್ದು, ಇದರ ಪ್ರಯೋಜನವನ್ನು ಜಿಯ ಗ್ರಾಹಕರು ಪಡೆದುಕೊಳ್ಳಬೇಕು. ಸಂಸ್ಥೆಯವರು ಗ್ರಾಹಕರಿಗೆ ತೃಪ್ತಿ ದಾಯಕ ಸೇವೆ ನೀಡಲಿ. ಮೇಳ ಯಶಸ್ವಿಯಾಗಲಿ ಎಂದು ಹಾರೈಸಿದರು.
ಪಾಲಿಕೆ ಸದಸ್ಯ ಆರ್.ಸಿ. ನಾಯ್ಕ್ ಮಾತನಾಡಿ, ಗ್ರಾಹಕರು ಮತ್ತು ಮಾರಾಟಗಾರರ ನಡುವೆ ನಂಬಿಕೆ ಮತ್ತು ಬಾಂಧ್ಯವ್ಯ ಇರ ಬೇಕು ಈ ನಿಟ್ಟಿನಲ್ಲಿ ಮೇಳ ಯಶಸ್ವಿ ಯಾಗಲೆಂದು ಶುಭ ಕೋರಿದರು.
ಮಹಾರಾಜ ಗೃಹ ವೈಭವ್ ಮಾಲೀಕರಾದ ಗಣೇಶ್ ಪ್ರಸಾದ್ ಮಾತನಾಡಿ, ವಿವಿಧ ಶ್ರೇಣಿಯ ಲಾಕರ್‌ಗಳು ರಿಯಾಯಿತಿ ದರದಲ್ಲಿ ಲಭ್ಯವಿವೆ. ಗ್ರಾಹಕರ ಸಂತೃಪ್ತಿಯೇ ನಮ್ಮ ಧ್ಯೇಯ. ಗೋದ್ರೇಜ್ ಸಂಸ್ಥೆ ಒಳ್ಳೆ ಅವಕಾಶ ನೀಡಿದ್ದು, ಮಲೆನಾಡಿನ ಗ್ರಾಹಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಮುಖರಾದ ಧಾರಿಣಿ ಪ್ರಸಾದ್, ವ್ಯವಸ್ಥಾಪಕ ಷಣ್ಮುಖಪ್ಪ, ರವೀಂದ್ರ ಮತ್ತು ಸಿಬ್ಬಂದಿ ಹಾಜರಿದ್ದರು.