ಜಾಗತಿಕ ಆರೋಗ್ಯ- ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ..
ಸಾವಿರಾರು ವರ್ಷಗಳಿಂದ ಭಾರತದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಒಂದು ಮಾಧ್ಯಮವಾಗಿ, ಆಧ್ಯಾತ್ಮಿಕ ಸಾಧನೆಗೂ ಮೆಟ್ಟಿಲಾಗಿ ಬೆಳೆದುಬಂದಿರುವ ಯೋಗಕ್ಕೆ ವಿಶ್ವಮಾನ್ಯತೆ ತಂದುಕೊಟ್ಟವರು ಮೊದಲ ಹಂತದಲ್ಲಿ ಅನೇಕ ಯೋಗ ಗುರುಗಳು. ಎರಡನೇ ಹಂತದಲ್ಲಿ, ಯೋಗವನ್ನು ಆಡಳಿತಾತ್ಮಕವಾಗಿ ಅಧಿಕೃತ ಅಂತರ ರಾಷ್ಟ್ರೀಯ ಯೋಗ ದಿನವಾಗುವಂತೆ ಮಾಡಿ, ವಿಶ್ವಮಾನ್ಯತೆ ದೊರಕಿಸಿಕೊಟ್ಟವರು ಪ್ರಧಾನಿ ಮೋದಿ ಅವರು.
ಮೋದಿಯವರು, ೨೦೧೪ರಲ್ಲಿ ಅಮೆರಿಕಾದಲ್ಲಿ ನಡೆದ ಸಮಾರಂಭವೊಂದರಲ್ಲಿ ತಮ್ಮ ಭಾಷಣದಲ್ಲಿ ಯೋಗದ ಉಪಕ್ರಮ ಮತ್ತು ಮಹತ್ವವನ್ನು ತೆಗೆದು ಕೊಂಡರು. ಯೋಗದ ಸಂಬಂಧಿತ ನಿರ್ಣಯವು ವಿಶಾಲವಾದ ಜಗತಿಕ ಬೆಂಬಲವನ್ನು ಪಡೆಯಿತು. ೧೭೭ ರಾಷ್ಟಗಳು ಯೋಗವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸಹ ಬೆಂಬಲಿಸಿದವು. ನಂತರ ಸರ್ವನುಮತದಿಂದ ಅಂಗೀಕಾರವಾಯಿತು.
ತರುವಾಯ ನ್ಯೂಯಾರ್ಕ್, ಪ್ಯಾರಿಸ್, ಬೀಜಿಂಗ್, ಬ್ಯಾಂಕಾಕ್, ಕೌಲಾಲಂಪುರ, ಸಿಯೋಲ್ ಮತ್ತು ಭಾರತ ಸೇರಿದಂತೆ ವಿಶ್ವಾದಾದ್ಯಂತ ಜೂನ್ ೨೧ರಂದು ಮೊದಲ ಅಂತರ ರಾಷ್ಟ್ರೀಯ ಯೋಗ ದಿನವನ್ನು ಯಶಸ್ವಿಯಾಗಿ ಆಚರಿಸಲಾಯಿತು.
ಯೋಗದ ಮಹತ್ವ : ಜಗತಿಕ ಆರೋಗ್ಯ, ಸಾಮರಸ್ಯ ಮತ್ತು ಶಾಂತಿಗಾಗಿ ಯೋಗವು ಭಾರತದಲ್ಲಿ ಹುಟ್ಟಿಕೊಂಡ ಪ್ರಾಚೀನ ದೈಹಿಕ, ಮಾನಸಿಕ ಹಾಗೂ ಅಧ್ಯಾತ್ಮಿಕ ಅಭ್ಯಾಸ. ಹಲವಾರು ವ್ಯಾಯಾಮಗಳು, ಭಂಗಿಗಳು (ಆಸನಗಳು) ಮತ್ತು ಪ್ರಾಣಾಯಮ (ಉಸಿರಾಟ ತಂತ್ರಗಳು) ಸೇರಿದಂತೆ ಧ್ಯಾನ ವನ್ನು ಯೋಗ ಒಳಗೊಂಡಿದೆ. ಯೋಗವನ್ನು ವರ್ಷದಲ್ಲಿ ಒಂದು ಬಾರಿ ಮಾಡಿದರೆ ಸಾಲದು. ಪ್ರತಿನಿತ್ಯ ಯೋಗ ಮಾಡುವುದ ರಿಂದ ನಮ್ಮ ದೇಹದ ಸರ್ವತೋ ಮುಖ ಆರೋಗ್ಯವನ್ನು ಕಾಪಾಡು ವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ನಿತ್ಯ ಯೋಗಾಭ್ಯಾಸ ಮಾಡುವುದರಿಂದ ದೇಹದ ಅಂಗಗಳು ಶಕ್ತಿಯುತವಾಗುತ್ತವೆ. ವಿವಿಧ ರೀತಿ ಆಸನಗಳಿಂದ ಮನಸ್ಸಿಗೆ ಶಾಂತಿ, ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ.
ಅಂತರಾಷ್ಟ್ರೀಯ ಯೋಗ ದಿನ ವನ್ನು ವಿಶ್ವಾದಾದ್ಯಂತ ಜೂನ್ ೨೧ ರಂದು ಆಚರಿಸಲು ಮಹತ್ವದ ನಿರ್ಣಯಗಳು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗ ಉತ್ತಮ. ಯೋಗವು ದೇಹ ಮತ್ತು ಮನಸ್ಸನ್ನು ಒಟ್ಟಿಗೆ ತರು ತ್ತದೆ. ಚಲನೆ, ಉಸಿರಾಟ ಮತ್ತು ಧ್ಯಾನ ಎಂಬ ಮೂರು ಮುಖ್ಯ ಅಂಶಗಳ ಮೇಲೆ ನಿರ್ಮಿಸಲಾ ಗಿದೆ. ಧ್ಯಾನ ಯೋಗವು ಸುಧಾರಿತ ಭಂಗಿ, ನಮ್ಯತೆ, ಶಕ್ತಿ, ಸಮತೋಲನ ಮತ್ತು ದೇಹದ ಅರಿವು ಸೇರಿದಂತೆ ಅನೇಕ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಪ್ರಯೋಜನಗಳನ್ನು ಹೊಂದಿದೆ. ಯೋಗದಲ್ಲಿ ಅಭ್ಯಾಸ ಮಾಡಲು ಹಲವಾರು ರಚನಾತ್ಮಕ ಭಂಗಿಗಳನ್ನು ಅವಲಂಬಿಸಿದೆ.
ವಿಭಿನ್ನ ಭಂಗಿಗಳು ಅಥವಾ ಆಸನಗಳು : ೧) ಮಲಗಿರುವ ಭಂಗಿಗಳು, ೨) ಕುಳಿತುಕೊಳ್ಳುವ ಭಂಗಿಗಳು, ೩) ನಿಂತಿರುವ ಭಂಗಿಗಳು, ೪) ತಲೆಕೆಳಗಾದ ಭಂಗಿಗಳು
ಯೋಗದ ಪ್ರಯೋಜನಗಳು : ಯೋಗವು ತಕ್ಷಣದ ಮಾನಸಿಕ ಪ್ರಯೋಜನಗಳನ್ನು ಹೊಂದಿದೆ. ಭಾವನತ್ಮಕ ಮತ್ತು ಸಾಮಾಜಿಕ ಯೋಗಕ್ಷೇಮದ ಭಾವನೆಗಳನ್ನು ಹೆಚ್ಚಿಸುತ್ತದೆ. ಅಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹದಯ, ರಕ್ತನಾಳದ ಕಾಯಿಲೆಗಳು, ಕ್ಯಾನ್ಸರ್, ದೀರ್ಘಕಾಲದ ಉಸಿರಾಟದ ಕಾಯಿಲೆಗಳು ಮತ್ತು ಮಧುಮೇಹವನ್ನು ಹತೋಟಿಯಲ್ಲಿ ಸಹಕಾರಿಯಾಗಿದೆ.
ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗದ ಸಮಗ್ರ ಪ್ರಯೋಜನಗಳನ್ನು ಗುರುತಿಸುವುದು ಮತ್ತು ಸಮತೋಲಿತ ಜೀವನ ಶೈಲಿಯನ್ನು ಉತ್ತೇಜಿಸುವಲ್ಲಿ ಯೋಗದ ಪ್ರಾಮುಖ್ಯತೆ ಹೆಚ್ಚಾಗಿರುತ್ತದೆ.
ಪ್ರತಿವರ್ಷ ಯೋಗದ ವಿವಿಧ ಅಂಶಗಳನ್ನು ಹೈಲೈಟ್ ಮಾಡಲು ನಿರ್ದಿಷ್ಟ ಥೀಮ್ ಅನ್ನು ಆಯ್ಕೆ ಮಾಡಲಾಗುತ್ತದೆ. ಸಂಘ- ಸಂಸ್ಥೆಗಳು ಯೋಗ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಲು ಒಂದು ಸಂದರ್ಭವಾಗಿ ಕಾರ್ಯನಿರ್ವಹಿಸುತ್ತದೆ.
ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಹಿನ್ನೆಲೆಯ ಜನರು ಒಗ್ಗೂಡಲು ಮತ್ತು ಯೋಗದ ಅಭ್ಯಾಸವನ್ನು ವಶೀಕರಿಸುವ ಶಕ್ತಿಯಾಗಿ, ಸ್ವೀಕರಿಸಲು ಇದು ಒಂದು ಅವಕಾಶವಾಗಿದೆ. ಪ್ರತಿವರ್ಷ ಜೂನ್ ೨೧ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ ಯಾದರೂ, ಯೋಗವನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ವರ್ಷವುಡೀ ಅನುಸರಿಸುತ್ತಾರೆ.
ಕೆ. ಜೈಮುನಿ, ಅಂತರಾಷ್ಟ್ರೀಯ ಯೋಗ ಪಟು