ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡಿ: ಆಪ್ ಆಗ್ರಹ
ಶಿವಮೊಗ್ಗ: ಅಡಿಕೆಯ ಎಲೆ ಚುಕ್ಕೆ ರೋಗ ಮತ್ತು ಹಳದಿ ರೋಗದಿಂದ ರೈತರಿಗೆ ನಷ್ಟವಾಗಿದ್ದು ಪರಿಹಾರ ನೀಡಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಜಿಧ್ಯಕ್ಷ ಶಿವಕುಮಾರ್ ಗೌಡ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿzರೆ.
ಕೃಷಿ ವಿeನ ಸಾಕಷ್ಟು ಬೆಳೆದಿ ದ್ದರೂ ಕೂಡ ಈ ರೋಗಗಳನ್ನು ತಡೆಯಲು ಆಗುತ್ತಿಲ್ಲ. ತೋಟಗಾರಿಕೆ ಅಧಿಕಾರಿಗಳು ಕೂಡ ವಿಫಲರಾಗಿzರೆ. ರೈತರು ಸಂಕಷ್ಟಕ್ಕೆ ಒಳಗಾಗಿzರೆ. ಮಳೆ ಬೇರೆ ಕೈಕೊಟ್ಟಿದೆ. ಅಡಿಕೆಯ ಜೊತೆಗೆ ಜೋಳ, ಭತ್ತ, ರಾಗಿ, ಶುಂಠಿ, ಕಬ್ಬು ಬೆಳೆ ಕೂಡ ಹಾಳಾಗಿದೆ. ಸರ್ಕಾರ ಇಂತಹ ಸಂದರ್ಭದಲ್ಲಿ ರೈತರಿಗೆ ಎಕರೆಗೆ ಒಂದು ಲಕ್ಷ ರೂ. ಪರಿಹಾರ ನೀಡಬೇಕು ಎಂದರು.
ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್ ಮಾತನಾಡಿ, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಬಂಧನ ವನ್ನು ನಾವು ಖಂಡಿಸುತ್ತೇವೆ. ಕೇಂದ್ರದ ಸಾಕುಪ್ರಾಣಿಯಂತಾಗಿ ರುವ ಇಡಿ ಮತ್ತು ಸಿಬಿಐ ತನಿಖಾ ಸಂಸ್ಥೆಗಳ ಹೆದರಿಕೆಗಳಿಗೆ ನಾವು ಬಗ್ಗುವುದಿಲ್ಲ. ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಅವರ ವಿರುದ್ಧ ಧ್ವನಿ ಎತ್ತಿದವರನ್ನೆ ದಮನ ಮಾಡಲು ಈ ರೀತಿಯ ತಂತ್ರಗಾರಿಕೆ ಮಾಡಿzರೆ ಎಂದು ಆರೋಪಿಸಿದರು.
ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಕಾರಣದಿಂದ ಯಾವ ಸಾಕ್ಷಿಯೂ ಇಲ್ಲದೇ, ಸಂಜಯ್ ಸಿಂಗ್ ಅವರನ್ನು ಬಂಧಿಸಿರುವುದು ಖಂಡನೀಯ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಸುರೇಶ್ ಕೋಟೆಕರ್, ಮಂಜುನಾಥ್, ಲಿಂಗರಾಜ್, ಜಗದೀಶ್, ಹರೀಶ್, ಶೋಭಾ, ಹಸನಬ್ಬ, ಗಣೇಶ್, ದಿಲ್ ಶಾದ್ ಬೇಗಂ, ಇಮ್ತಿಯಾಜ್, ರಾಮಕೃಷ್ಣ, ಯೂಸುಫ್ ಇದ್ದರು.