ಬಾಲಕಿ ಹತ್ಯೆ: ಸಮಗ್ರ ತನಿಖೆಗೆ ಆಗ್ರಹ…

balaji

ಶಿವಮೊಗ್ಗ: ನಿಧಿ ಆಸೆಗಾಗಿ ೭ ವರ್ಷದ ಪುಟ್ಟ ಬಾಲಕಿಯನ್ನು ಅಪಹರಿಸಿ ಹತ್ಯೆಗೈದ ದಾರುಣ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮಡಿವಾಳ ಸಂಘದ ರಾಜ್ಯ ಉಪಾಧ್ಯಕ್ಷ ಬಾಲಾಜಿ ರಾವ್ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.
೭ ವರ್ಷದ ಬಾಲಕಿ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದವರಾ ಗಿದ್ದು, ಮಡಿವಾಳ ಜತಿಯ ರಾಘು ಮಡಿವಾಳರ ಪುತ್ರಿಯಾಗಿzಳೆ. ನಿಧಿಯ ಆಸೆಗಾಗಿ ಈ ಕೊಲೆ ನಡೆದಿ ದೆ ಎಂದು ಆರೋಪಿಸಗುತ್ತಿದೆ. ಘಟನೆಯಿಂದ ಬಾಲಕಿಯ ಪೋಷ ಕರಲ್ಲದೇ, ಇಡೀ ಕಿನ್ನಾಳ ಗ್ರಾಮಸ್ಥರು ಭಯಭೀತರಾಗಿzರೆ. ಆತಂಕಗೊಂ ಡಿzರೆ. ಇದು ಇಡೀ ನಾಗರಿಕ ಸ ಮಾಜವೇ ತಲೆತಗ್ಗಿಸು ವಂತಹ ಘೊ ರ ಮತ್ತು ಭಯಾನಕ ಕೃತ್ಯವಾ ಗಿದೆ ಎಂದರು.ಹತ್ಯೆಯಾದ ಬಾಲಕಿ ಏ. ೧೯ ರಂದು ಮನೆಯಿಂದ ಆಟ ವಾ ಡಲು ಹೋಗಿದ್ದಳು.ಪುನಃ ವಾಪಸ್ ಬರಲಿಲ್ಲ. ಇಡೀ ಗ್ರಾಮದವರು ಹುಡುಕಿದಾಗ ಕೊನೆಗೆ ಹೆಣವಾಗಿ ಸಿಕ್ಕಿzರೆ. ಇವಳನ್ನು ಹತ್ಯೆಗೈದ ಪಾಪಿಷ್ಟರು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಟ್ಟಿzರೆ. ನಂತರ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ ಎಂದರು.
ಈಗಾಗಲೇ ಹಂತಕರನ್ನು ಬಂಧಿಸುವಂತೆ ಗೃಹ ಸಚಿವರು ಹಾಗೂ ಸಿಎಂ ಮತ್ತು ಡಿಸಿಎಂಗೆ ಮನವಿ ಮಾಡಲಾಗಿದೆ. ಇ-ಮೇಲ್ ಸಂದೇಶ ಕೂಡ ಕಳಿಸಲಾಗಿದೆ. ಘಟನೆಯ ವಿವರ ತಿಳಿಸಲಾಗಿದೆ. ಆದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬಾಲಕಿ ಹತ್ಯೆ ವಿರುದ್ಧ ಇಡೀ ರಾಜ್ಯದಾದ್ಯಂತ ಮಡಿವಾಳ ಸಮಾಜ ಪ್ರತಿಭಟನೆ ಕೂಡ ಮಾಡುತ್ತಿದೆ ಎಂದರು.
ಸಮಾಜದ ಮುಖಂಡ ಜೆ. ಹಿರಣ್ಣಯ್ಯ ಮಾತನಾಡಿ, ನಮ್ಮ ಮಡಿವಾಳ ಸಮಾಜ ತುಂಬಾ ಸಣ್ಣದು. ನಮ್ಮ ಸಮಾಜದ ಧ್ವನಿಯ ನ್ನು ಸರ್ಕಾರ ಆಲಿಸ ಬೇಕಾಗಿದೆ. ಮಡಿವಾಳ ಸಮಾಜದ ಮಗು ಎಂದೇನಲ್ಲ. ಇದು ನಾಗರಿಕ ಸಮಾ ಜದ ನಿzಯನ್ನೇ ಕೆಡಿಸಿದೆ. ಸಂಪೂ ರ್ಣ ತನಿಖೆಯಾದಾಗ ಮಾತ್ರ ಸತ್ಯ ಹೊರ ಬರುತ್ತದೆ. ಆದ್ದರಿಂದ ಈ ಘಟನೆಯನ್ನು ಸಿಐಡಿ ತನಿಖೆಗೆ ಒ ಪ್ಪಿಸಬೇಕು ಎಂದು ಆಗ್ರಹಿಸಿದರು.
ಸಮಾಜದ ಮುಖಂಡರಾದ ಪ್ರಮೋದ್ ಎನ್.ಕೆ., ಮಂಜಪ್ಪ ಎಂ., ಮೈಲಾರಿ, ಮಂಜುನಾಥ್ ಎನ್., ಗುರುಮೂರ್ತಿ ಟಿ.ಎಸ್. ಇದ್ದರು.