ಮಾ.24ರಿಂದ 3 ದಿನ ನಮ್ಮ ದವನ ವಿಶೇಷ ಸಾಂಸ್ಕೃತಿಕ ವೈಭವ…

ದಾವಣಗೆರೆ: ಪ್ರತಿಷ್ಠಿತ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವದ ಹೆಸರೇ ನಮ್ಮ ದವನ. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ೧೯೮೫ರಲ್ಲಿ ಮೈದಾಳಿದ ಇಂತಹ ಉತ್ಸವವು ವಿeನ ಮತ್ತು ತಂತ್ರeನದ ದಿನನಿತ್ಯದ ಶೈಕ್ಷಣಿಕ ಪಠ್ಯಕ್ರಮದಿಂದ ಅಗತ್ಯವಿರುವ ವಿರಾಮಗಳನ್ನು ಒದಗಿಸುತ್ತ , ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದಢರಾಗಲು ಸಹಾಯ ಮಾಡುತ್ತದೆ. ಎ ವಿಭಾಗಗಳ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಮತ್ತು ಸಜನಶೀಲತೆಯನ್ನು ಪ್ರದರ್ಶಿಸಲು ಇದು ಅದ್ಭುತ ವೇದಿಕೆಯಾಗಿದೆ.
ಪ್ರತಿ ವರ್ಷ ಮೂರು ದಿನಗಳ ಕಾಲ ನಡೆಯುವ ಈ ಉತ್ಸವವು ಸಂಗೀತ, ನೃತ್ಯ, ನಾಟಕ, ಸಾಹಿತ್ಯ, ಕಲೆ ಹೀಗೆ ವಿಭಿನ್ನ ಪ್ರಕಾರಗಳನ್ನು ಒಳಗೊಂಡಿರುವ ವ್ಯಾಪಕ ಶ್ರೇಣಿಯ ಕಾರ್ಯಕ್ರಮ ಗಳೊಂದಿಗೆ ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯ ಉತ್ಸಾಹ ಭರಿತ ಮತ್ತು ವರ್ಣರಂಜಿತ ಆಚರಣೆಯಾಗಿದೆ.
ದವನವು ಶೈಕ್ಷಣಿಕ ಕ್ಯಾಲೆಂಡರ್ ನಲ್ಲಿ ಬಹು ನಿರೀಕ್ಷಿತ ಕಾರ್ಯಕ್ರಮ ವಾಗಿದೆ ಮತ್ತು ಕರ್ನಾಟಕದ ವಿವಿಧ ಇಂಜಿನಿಯಿಂಗ್ ಕಾಲೇಜ್ ವಿದ್ಯಾರ್ಥಿಗಳು ಈ ರಾಜ್ಯಮಟ್ಟದ ವೇದಿಕೆಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುವ ಅವಕಾಶ ಪಡೆದುಕೊಳ್ಳುತ್ತಿzರೆ. ಹಾಗೆ ಪ್ರತಿವರ್ಷ ಇದರಲ್ಲಿ ಭಾಗವಹಿಸಲು ಉತ್ಸುಕತೆಯಿಂದ ಎದುರು ನೋಡುತ್ತಾರೆ.
ವಿದ್ಯಾರ್ಥಿಗಳ ಕಾರ್ಯಕ್ಷಮತೆ ಯನ್ನು ಮಲ್ಯಮಾಪನ ಮಾಡಲು ಮತ್ತು ರಚನಾತ್ಮಕ ಪ್ರತಿಕ್ರಿಯೆ ನೀಡಲು ವಿವಿಧ ಕ್ಷೇತ್ರಗಳ ತೀರ್ಪುಗಾರರನ್ನು ಆಹ್ವಾನಿಸ ಲಾಗುತ್ತದೆ.
ಫೆಸ್ಟ್ ಗ್ರ್ಯಾಂಡ್ ಫಿನಾಲೆ ಯಲ್ಲಿ ಕೊನೆಗೊಳ್ಳುತ್ತದೆ, ಇದರಲ್ಲಿ ವಿಜೇತರು ಮತ್ತು ರನ್ನರ್ ಅಪ್‌ಗಳಿಗೆ ಮುಖ್ಯ ಅತಿಥಿಗಳಿಂದ ಬಹುಮಾನಗಳನ್ನು ನೀಡಲಾಗುತ್ತದೆ.
ಪ್ರಿಯ ಓದುಗರೇ , ದವನವು ಕೇವಲ ಸಾಂಸ್ಕೃತಿಕ ಉತ್ಸವವಲ್ಲ. ಆದರೆ ಕಲೆ, ಸಂಸ್ಕೃತಿ ಮತ್ತು ವೈವಿಧ್ಯತೆಯ ಆಚರಣೆಯಾಗಿದೆ. ಇದೇ ಮಾ. ೨೪ , ೨೫ ಮತ್ತು ೨೬ ರಂದು ಬನ್ನಿ , ನಮ್ಮ ದವನ ೨೩ ಸೇರಿಕೊಳ್ಳಿ ಮತ್ತು ಆ ಅವಿಸ್ಮರಣೀಯ ಅನುಭವದ ಭಾಗವಾಗಿರಿ. ಅದು ನಿಮಗೆ ಶಾಶ್ವತವಾದ ನೆನಪುಗಳನ್ನು ಕೊಡುವುದು ಖಚಿತ. ನೋ ಡೌಟ್ ಓದುಗರೇ.
ದ. ರಾ. ಬೇಂದ್ರೆ ಹೇಳಿದಂತೆ ಬದುಕು ಸವಿಸೋದಲ್ಲ, ಸವಿಯೋದು. ಅಂದ್ರೆ ಇದೇ ಅನ್ಸುತ್ತೆ ಅಲ್ಲವೇ…

ಡಾ. ಎಂ. ಈ. ಶಿವಕುಮಾರ ಹೊನ್ನಾಳಿ
ಪ್ರಧ್ಯಾಪಕರು , ರಾಣೇಬೆನ್ನೂರು.