ಶಿಕಾರಿಪುರ ಸರ್ಕಾರಿ ಆಸ್ಪತ್ರಗೆ ಕೀಲು-ಮೂಳೆ ತಜ್ಞ ವೈದ್ಯರ ನೇಮಕಕ್ಕೆ ವೇದಿಕೆ ಆಗ್ರಹ

14SKP1.

ಶಿಕಾರಿಪುರ : ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕು ಹಾಗೂ ಸುತ್ತಮುತ್ತಲಿನ ತಾಲೂಕಿನ ಎಲ್ಲ ರೋಗಿಗಳ ಅನುಕೂಲಕ್ಕಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿ ಮಟ್ಟದ ಆಸ್ಪತ್ರೆಗೆ ಸರಿಸಮಾನವಾದ ಸಕಲ ಸೌಲಭ್ಯ ವನ್ನು ಕಲ್ಪಿಸಿಕೊಟ್ಟಿದ್ದು ಇದೀಗ ಅತ್ಯಂತ ಅಗತ್ಯವಾದ ಕೀಲು ಮತ್ತು ಮೂಳೆ ತಜ್ಞ ವೈದ್ಯರಿಲ್ಲದೆ ರೋಗಿಗಳ ಗೋಳು ಕೇಳುವವರಿಲ್ಲವಾಗಿದೆ ಎಂದು ಇಲ್ಲಿನ ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶಿವಯ್ಯ ಶಾಸ್ತ್ರಿ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದರು.
ಇತ್ತೀಚಿನ ಹಲವು ತಿಂಗಳಿನಿಂದ ಆಸ್ಪತ್ರೆಯಲ್ಲಿ ಅತ್ಯಂತ ಅಗತ್ಯವಾದ ಕೀಲು ಮತ್ತು ಮೂಳೆ ತಜ್ಞರಿಲ್ಲದೆ ರೋಗಿಗಳು ಪರದಾಡು ವಂತಾಗಿದೆ. ಬಡವರು ಖಾಸಗಿ ಆಸ್ಪತ್ರೆಯ ದುಬಾರಿ ಚಿಕಿತ್ಸಾ ವೆಚ್ಚ ಭರಿಸಲಾಗದೆ ಗೋಳಾಡುತ್ತಿzರೆ. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನ ಮಾತ್ರ ಶೂನ್ಯ. ಈ ಕೂಡಲೇ ಜಿ ಉಸ್ತುವಾರಿ ಸಚಿವರ ಸಹಿತ ಸಂಸದರು, ಶಾಸಕರು ಚುನಾವಣೆಯಲ್ಲಿನ ಗೆಲುವಿಗಾಗಿ ಮಾತ್ರ ಹೆಚ್ಚಿನ ಗಮನಹರಿಸದೆ ರೋಗಿಗಳ ಬಗ್ಗೆ ಕನಿಷ್ಠ ಮಾನವೀಯತೆಯನ್ನು ತೋರುವಂತೆ ಮನವಿ ಮಾಡಿದರು.
ಕೀಲು ಮೂಳೆ ತಜ್ಞ ವೈದ್ಯರನ್ನು ೧೫ ದಿನದಲ್ಲಿ ನೇಮಕಗೊಳಿಸಬೇಕು ತಪ್ಪಿದಲ್ಲಿ ವೇದಿಕೆ ವತಿಯಿಂದ ಆಸ್ಪತ್ರೆ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಶಕ್ತಿ ಸಂಗ್ರಾಮ ವೇದಿಕೆ ತಾಲೂಕು ಅಧ್ಯಕ್ಷ ಆನಂದ್ ಮಾತನಾಡಿ, ಕಳೆದೊಂದು ವರ್ಷದಿಂದ ಆಸ್ಪತ್ರೆಯಲ್ಲಿ ಕೀಲು ಮೂಳೆ ತಜ್ಞ ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುತ್ತಿದ್ದು ಬರಗಾಲದ ಈ ಸಂದರ್ಭದಲ್ಲಿ ಹೊಟ್ಟೆಗೆ ಹಿಟ್ಟಿಲ್ಲದ ಬಡವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ದುಸ್ಸಾಹಸವಾಗಿದೆ ಜನರ ಸಮಸ್ಯೆ ಆಲಿಸಬೇಕಾದ ಜನಪ್ರತಿನಿಧಿಗಳು ಮಾತ್ರ ಚುನಾವಣೆ ರಾಜಕೀಯಕ್ಕೆ ಸೀಮಿತವಾಗಿ ಬಡಜನತೆಯನ್ನು ಮರೆತಿzರೆ ಎಂದು ದೂರಿದ ಅವರು, ಬಡರೋಗಿಗಳ ಹಿಡಿಶಾಪಕ್ಕೆ ತುತ್ತಾಗುವ ಮುನ್ನಾ ವೈದ್ಯರನ್ನು ನೇಮಕಗೊಳಿಸುವಂತೆ ಆಗ್ರಹಿಸಿದರು.
ನಂತರದಲ್ಲಿ ಕೂಡಲೇ ತಜ್ಞ ವೈದ್ಯರ ನೇಮಕಕ್ಕೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಕ್ತಿ ಸಂಗ್ರಾಮ ವೇದಿಕೆ ರಾಜ್ಯ ಉಪಾಧ್ಯಕ್ಷ ರವಿ ನಾಯ್ಕ, ಗಜೇಂದ್ರ, ಸಂತೋಷ, ಷಣ್ಮುಖ, ಪರಶುರಾಮ, ಮಣಿಕಂಠ, ಸುನೀಲ್ ಕುಮಾರ್, ನಾಗರಾಜ್ ಜಯಕರ್ನಾಟಕ ಜನಪರ ವೇದಿಕೆ ಕಾರ್ಯಾಧ್ಯಕ್ಷ ಮಾಲತೇಶ ಮಟ್ಟಿಕೋಟೆ, ಗಣೇಶ ಮತ್ತಿತರರು ಹಾಜರಿದ್ದರು.