ರಂಗ ಕಲೆಗೆ ನಾಟಕ ಮಾಡುವವರು ಮತ್ತು ನೋಡುವವರು ಮುಖ್ಯ …
ಶಿವಮೊಗ್ಗ : ರಂಗ ಕಲೆ ಹೇಳಿಕೊಡುವುದು ಕಷ್ಟ. ನಾಟಕ ಮಾಡುವವರು ಮತ್ತು ನಾಟಕ ನೋಡುವವರು ಇಬ್ಬರೂ ರಂಗ ಕಲೆಗೆ ಬಹಳ ಮುಖ್ಯವಾಗಿzರೆ ಎಂದು ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಹೇಳಿzರೆ.
ಅವರು ಇಂದು ಸುವರ್ಣ ಸಂಸ್ಕೃತಿ ಭವನದ ಶಿವಮೊಗ್ಗ ರಂಗಾಯಣದಲ್ಲಿ ಗುಣಮುಖ ನಾಟಕದ ತುಣುಕೊಂದನ್ನು ಓದುವುದರ ಮೂಲಕ ನಾಟಕ ಅವಲೋಕನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಾಟಕಕ್ಕೆ ಒಂದು ಮಿತಿ ಇರುತ್ತದೆ. ನೋಡುವವರ ಭಾವನೆ ಗಳನ್ನು ಅರ್ಥ ಮಾಡಿಕೊಂಡು ಅಭಿನಯ ಮಾಡಬೇಕಾಗುತ್ತದೆ. ನೋಡುವವರು ಮತ್ತು ಅಭಿನಯಿ ಸುವವರಿಗೆ ಒಂದು ರೀತಿಯ ಅವಿನಾಭಾವ ಸಂಬಂಧವಿರುತ್ತದೆ. ಕಲೆಯನ್ನು ಹೇಗೆ ಪರಿಚಯ ಮಾಡಿಕೊಳ್ಳಬೇಕು. ಹೇಗೆ ಅರ್ಥೈಸಿ ಕೊಳ್ಳಬೇಕು. ಭಾಷೆ, ಪ್ರಭಾವ, ಎಲ್ಲವನ್ನೂ ತಿಳಿದು ಬದುಕಿನ ಜೊತೆ ಕೆಲಸ ಮಾಡುವುದೇ ರಂಗ ಕಲೆ ಎಂದರು.
ಕೆಲವೊಂದು ರುಚಿ ಅಥವಾ ರಸಗಳ ಜೊತೆಗೆ ಅಭಿನಯಿಸ ಬೇಕಾಗುತ್ತದೆ. ಮಾತು, ಮನಗಳ ಮೂಲಕ ಸಂವಹನ ಮಾಡಬೇ ಕಾಗುತ್ತದೆ. ಹಲವಾರು ವಿಭಾಗ ಗಳಿವೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಸ್ಯೆಗಳನ್ನು ಪ್ರಪಂಚದ ಬೇರೆ ಬೇರೆ ಸಮಸ್ಯೆಗಳನ್ನು ಎಲ್ಲವನ್ನೂ ಕೂಡ ಬಿಂಬಿಸುವ ಒಂದೇ ಒಂದು ಮಾಧ್ಯಮ ಎಂದರೆ ಅದು ರಂಗಭೂಮಿ ಎಂದರು.
ಕಲಾವಿದರ ಒಕ್ಕೂಟ ನಿಕಟಪೂರ್ವ ಅಧ್ಯಕ್ಷ ಕೊಟ್ರಪ್ಪ ಜಿ. ಹಿರೇಮಾಗಡಿ ಮಾತನಾಡಿ, ರಂಗಾಯಣದಿಂದ ಅತಿ ಅವಶ್ಯವಾದ ಕಾರ್ಯಕ್ರಮ ಇವತ್ತು ಆಗುತ್ತಿದೆ. ಸಿದ್ಧತೆ, ಪ್ರದರ್ಶನಕ್ಕಿಂತ ರಂಗ ಕಲಾವಿದರಿಗೆ ಈ ಅವಲೋಕನ ಕಾರ್ಯಾಗಾರ ಅತಿ ಅವಶ್ಯವಾಗಿತ್ತು. ಇದೊಂದು ಬಹಳ ದೊಡ್ಡ ಅವಕಾಶ ಎಂದರು.
ರಂಗಾಯಣ ಶಿವಮೊಗ್ಗದ ನಿರ್ದೇಶಕ ಪ್ರಸನ್ನ ಡಿ ಸಾಗರ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣ ಆಡಳಿತಾಧಿಕಾರಿ ಡಾ. ಶೈಲಜ ಎ.ಸಿ., ಪ್ರೊ. ಮೇಟಿ ಮಲ್ಲಿಕಾರ್ಜುನ, ಡಾ.ಲವ ಜಿ.ಆರ್. ಉಪಸ್ಥಿತರಿದ್ದರು.