ಆಹಾರ ದಸರಾ: ಇಡ್ಲಿ-ಬಾಳೆಹಣ್ಣು ತಿನ್ನುವ ಸ್ಪರ್ಧೆ…

9

ಶಿವಮೊಗ್ಗ: ನಗರದ ಶಿವಪ್ಪನಾಯಕ ವೃತ್ತದಲ್ಲಿ ಆಹಾರ ದಸರಾ ನಿಮಿತ್ತ ಪಾಲಿಕೆಯಿಂದ ಸಾರ್ವಜನಿಕರಿಗೆ ಇಡ್ಲಿ ತಿನ್ನುವ ಸ್ಪರ್ಧೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಬಾಳೆಹಣ್ಣು ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಎರಡು ನಿಮಿಷದಲ್ಲಿ ಅರಣ್ಯ ಇಲಾಖೆಯ ಪುರುಷ ಸಿಬ್ಬಂದಿಗಳು ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಪ್ರಸನ್ನಕುಮಾರ್ ೯ ಬಾಳೆಹಣ್ಣು ತಿಂದು ಪ್ರಥಮ ಸ್ಥಾನ, ಗಣೇಶ್ ಎನ್.ಎಂ. ೮ವರೆ ಬಾಳೆಹಣ್ಣು ತಿಂದು ದ್ವಿತೀಯ ಸ್ಥಾನ, ೩ನೇ ಸ್ಥಾನಕ್ಕೆ ಟೈ ಆದ ಹಿನ್ನಲೆಯಲ್ಲಿ ಮತ್ತು ೧/೨ ನಿಮಿಷ ಹೆಚ್ಚುವರಿಯಾಗಿ ನೀಡಿದಾದ ಸೆಲ್ವಮಣಿಗೆ ೩ನೇ ಸ್ಥಾನ ದೊರಕಿತು.
ಮಹಿಳಾ ಅರಣ್ಯ ಸಿಬ್ಬಂದಿ ಯಲ್ಲಿ ಮಂಜುಳ ಎನ್., ೫ವರೆ ಬಾಳೆಹಣ್ಣು ಪ್ರಥಮ ಸ್ಥಾನ, ರೇಖಾ ಎಂ., ೫ಮುಕ್ಕಾಲು ಬಾಳೆಹಣ್ಣು ದ್ವಿತೀಯ ಸ್ಥಾನ, ೪ಕಾಲು ಬಾಳೆ ಹಣ್ಣು ತಿಂದು ೩ನೇ ಸ್ಥಾನ ಗಳಿಸಿದರು.
ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಮಹಿಳಾ ವಿಭಾಗದಲ್ಲಿ ಅಣ್ಣಾನಗರದ ಶಿವಮ್ಮ ೧೦ ಇಡ್ಲಿ ತಿಂದು ಮೊದಲ ಸ್ಥಾನ ಗಳಿಸಿದರು. ಇವರ ಸತತ ೪ ವರ್ಷದಿಂದ ಆಹಾರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುತ್ತಿzರೆ. ದ್ವಿತೀಯ ಸ್ಥಾನ ಧನಲಕ್ಷ್ಮೀ ೮ ಇಡ್ಲಿ ತಿಂದರು. ತೃತೀಯ ಸ್ಥಾನದಲ್ಲಿ ರಾಜಲಕ್ಷ್ಮೀ ೬೧/೨ ಇಡ್ಲಿ ತಿಂದರು.
ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಪುರಷ ವಿಭಾಗದಲ್ಲಿ ಪ್ರವೀಣ್ ಕುಮಾರ್ ೧೧ವರೆ ಇಡ್ಲಿ ತಿಂದು ಮೊದಲ ಸ್ಥಾನ, ರವಿಕಿರಣ್ ೧೧ ಇಡ್ಲಿ ತಿಂದು ದ್ವಿತೀಯ ಸ್ಥಾನ, ನಿರಂಜನ್ ೧೦ವರೆ ಇಡ್ಲಿ ತಿಂದು ತೃತೀಯ ಸ್ಥಾನ ಪಡೆದರು.
ಪತ್ರಕರ್ತರಿಗೂ ಕೂಡ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಈ ಬಾರಿಯ ದಸರಾದಲ್ಲಿ ಪಾಲಿಕೆ ವತಿಯಿಂದ ೬೮ಕ್ಕೂ ಹೆಚ್ಚು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದ್ದು, ಎಲ್ಲವೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಅದರಲ್ಲೂ ಆಹಾರ ದಸರಾಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಸಾರ್ವಜನಿಕರು ಖುಷಿ ಯಿಂದ ಭಾಗವಹಿಸಿzರೆ ಎಂದರು.
ಮುಖ್ಯ ಅತಿಥಿಗಳಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಸನ್ನಕೃಷ್ಣ ಪಠಾಗರ್ ಭಾಗವಹಿಸಿದ್ದರು. ತೀರ್ಪುಗಾರರಾಗಿ ವೈದ್ಯಾಧಿಕಾರಿ ಡಾ. ಉಮಾ, ಆಹಾರ ಸುರಕ್ಷತಾ ಅಧಿಕಾರಿಗಳಾದ ಸದಾಶಿವಪ್ಪ ಜಿ. ಭಾಗವಹಿಸಿದ್ದರು. ಪಾಲಿಕೆಯ ಆಯುಕ್ತರು ಮತ್ತು ಆಹಾರ ದಸರಾದ ಕಾರ್ಯದರ್ಶಿ ಕೃಷ್ಣಮೂರ್ತಿ ಸೇರಿದಂತೆ ಪಾಲಿಕೆ ಸಿಬ್ಬಂದಿಗಳು ಉಪಸ್ಥಿತರಿದ್ದರು.