ಫೆ.೨೫: ಲಾಟರಿ ಮೂಲಕ ಆಶ್ರಯ ಮನೆಗಳ ಹಂಚಿಕೆ…

0
congress-pm

ಶಿವಮೊಗ್ಗ : ಫೆ.೨೫ ರಂದು ವಸತಿ ಸಚಿವ ಜಮೀರ್ ಅಹ್ಮದ್ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಗೋವಿಂದಾಪುರ ಆಶ್ರಯ ಮನೆಗಳನ್ನು ಲಾಟರಿ ಮೂಲಕ ಫಲಾನುಭವಿಗಳಿಗೆ ಹಂಚಲಿzರೆ ಎಂದು ವಿಧಾನ ಪರಿಷತ್ ಶಾಸಕಿ ಬಲ್ಕಿಷ್ ಬಾನು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ ೧೧ ಗಂಟೆಗೆ ಗೋವಿಂದಾಪುರದಲ್ಲಿ ಎರಡನೇ ಹಂತದ ೬೨೫ ಆಶ್ರಯ ಮನೆಗಳನ್ನು ಫಲಾನುಭವಿಗಳ ಸಮ್ಮುಖದಲ್ಲಿ ಲಾಟರಿ ಮೂಲಕ ಮನೆಯ ಕೀ ನೀಡುವ ಮೂಲಕ ಹಸ್ತಾಂತರಿಸ ಲಿದ್ದು, ಆಶ್ರಯ ಸಮಿತಿ ತೀರ್ಮಾನ ದಂತೆ ತಾತ್ಕಾಲಿಕವಾಗಿ ನೀರಿನ ಸೌಲಭ್ಯ, ವಿದ್ಯುತ್ ಇನ್ನಿತರೆ ಸೌಲಭ್ಯ ಗಳನ್ನು ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಜಿ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ಆಗಮಿಸಲಿzರೆ. ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಅತಿಥಿಗಳಾಗಿ ಪಾಲ್ಗೊಳ್ಳಲಿzರೆ ಎಂದರು.


ಮಾ.೩ ರಂದು ಅದ್ದೂರಿ ಯಾಗಿ ಹಂಚುವ ಯೋಜನೆ ಇತ್ತು. ಆದರೆ ಫಲಾನುಭವಿಗಳ ಒತ್ತಡದ ಮೇರೆಗೆ ಫೆ.೨೫ ರಂದು ಲಾಟರಿ ಮೂಲಕ ೬೨೫ ಮನೆಗಳನ್ನು ಹಂಚಲು ಬಹಳ ಸಂತೋಷವಾಗು ತ್ತಿದೆ. ೨೦೧೭ ರಂದು ನಮ್ಮ ಸರ್ಕಾರ ದಿಂದ ಈ ಯೋಜನೆ ಯನ್ನು ಜರಿಗೆ ತರಲಾಯಿತು. ಇದು ನಮ್ಮ ಸರ್ಕಾರದ ಹೋರಾಟದ ಫಲ ಎಂದು ಹೇಳಬಹುದು ಎಂದರು.
ಆ ವೇಳೆ ಇನ್ನಷ್ಟು ಮನೆಗಳನ್ನು ಹಂಚಬೇಕೆಂಬ ಬೇಡಿಕೆ ಇದೆ. ಸಚಿವರು ಇನ್ನಷ್ಟು ಮನೆಗಳನ್ನು ಹಂಚುತ್ತಾರೆಂಬ ವಿಶ್ವಾಸವೂ ತಮಗಿದೆ ಎಂದರು.
ಕಾಂಗ್ರೆಸ್ ಜಿಧ್ಯಕ್ಷ ಆರ್. ಪ್ರಸನ್ನ ಕುಮಾರ್ ಮಾತನಾಡಿ, ಫೆ.೨೫ ರ ಮಂಗಳವಾರ ವಸತಿ ಸಚಿವ ಜಮೀರ್ ಅಹಮ್ಮದ್ ಅವರು ಶಿವಮೊಗ್ಗ ಆಗಮಿಸಲಿದ್ದು, ಆಶ್ರಯ ಮನೆಗಳ ಇನ್ನುಳಿದ ವ್ಯವಸ್ಥೆಯನ್ನು ವೇಗವಾಗಿ ಮಾಡ ಲಾಗುವುದು. ಇದಕ್ಕೆ ಬೇಕಾದ ಹಣ ವನ್ನು ಸರ್ಕಾರದಿಂದ ಬಿಡುಗಡೆ ಮಾಡುವ ಕೆಲಸ ಆಗಲಿ, ಗೋಪಿ ಶೆಟ್ಟಿಕೊಪ್ಪದಲ್ಲಿ ಮನೆ ನಿರ್ಮಾಣ ವಾಗಬೇಕು. ಮನೆ ಮಾತ್ರವಲ್ಲದೆ ಅಗತ್ಯ ಸೌಲಭ್ಯಗಳನ್ನು ಒದಗಿಸು ವಂತೆ ಆಗ್ರಹಿಸಿದರು.
೩೦೦೦ ಮನೆಗಳನ್ನು ಕಟ್ಟಬೇಕು ಎಂದು ಇತ್ತು. ಸುಮಾರು ೬೦೦ ಮನೆ ಹಿಂದೆ ನೀಡಲಾಗಿತ್ತು, ಈಗ ೬೨೫ ಮನೆ ನೀಡಲಾಗುತ್ತಿದೆ. ಜನರಿಗೆ ಬೇಕಾದ ಅಗತ್ಯ ಸೌಲಭ್ಯ ಗಳಾದ ಬಸ್ಸಿನ ಸೌಲಭ್ಯ, ಆಸ್ಪತ್ರೆ ಸೌಲಭ್ಯ, ಶಾಲೆಯ ಸೌಲಭ್ಯ ಮಾಡ ಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ ಎಂದರು.
ಕುಟುಂಬದೊಂದಿಗೆ ಫಲಾನು ಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಫಲಾನುಭವಿ ಗಳಿಗೆ ಅಂದು ಕಾರ್ಯಕ್ರಮಕ್ಕೆ ಆಗಮಿಸಲು ಕಾರ್ಪೋರೇಶನ್ ವತಿಯಿಂದ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಬೀಗದ ಕೀಯೊಂದಿಗೆ ಸಂಬಂ ಧಪಟ್ಟ ದಾಖಲೆಗಳನ್ನು ಅಂದು ನೀಡಲಾಗುವುದು ಎಂದರು.
ಮಾಜಿ ಕಾರ್ಪೊರೇಟರ್ ಹೆಚ್.ಸಿ. ಯೋಗೀಶ್ ಮಾತನಾಡಿ, ಮನೆಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವಂತೆ ಜಿ+೨೦ ಮಾದರಿ ಯಲ್ಲಿ ಮಾಡಲಾಗಿದೆ. ಬೊಮ್ಮನ ಕಟ್ಟೆಯ ಲ್ಲಿ ಸಹ ನಮ್ಮ ಸರ್ಕಾರದಿಂದ ಮನೆಗಳನ್ನು ನೀಡಿzವೆ ಎಂದರು.
ಫಲಾನುಭವಿಗಳ ನಡುವೆ ಫಸ್ಟ್ ಫ್ಲೋರ್, ಸೆಕೆಂಡ್ ಫ್ಲೋರ್ ಮನೆ ಬೇಕೆಂಬ ಗೊಂದಲ ಸೃಷ್ಟಿಯಾ ಗ ಬಾರದೆಂದು ಲಾಟರಿ ಮೂಲಕ ಎತ್ತುವ ಉzಶ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಲೀಮ್ ಪಾಷಾ, ಶಿವಕುಮಾರ್, ಲಕ್ಷ್ಮಣ್, ಮುಹಿ ಪಾಷಾ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *