ಹೈನುಗಾರಿಕೆಯಿಂದ ರೈತ ಸಮುದಾಯ ತುಸು ನೆಮ್ಮದಿ ಕಾಣುತ್ತಿದೆ: ಬಿವೈವಿ
ಶಿಕಾರಿಪುರ: ಬರಗಾಲದಿಂದ ರೈತ ವರ್ಗ ಕಂಗೆಟ್ಟಿದ್ದು, ಹೈನುಗಾರಿಕೆಯಿಂದ ರೈತ ಸಮುದಾಯ ತುಸು ನೆಮ್ಮದಿಯನ್ನು ಕಾಣುತ್ತಿದೆ. ಈ ದಿಸೆಯಲ್ಲಿ ಪಶುವೈದ್ಯಕೀಯ ಇಲಾಖೆಯ ವೈದ್ಯ, ಸಿಬ್ಬಂದಿ ಜನುವಾರುಗಳಿಗೆ ಆರೋಗ್ಯ ಸಮಸ್ಯೆ ಉದ್ಭವಿಸಿದಾಗ ಕೂಡಲೇ ಸ್ಪಂದಿಸಿ ಜವಾಬ್ದಾರಿ, ಕರ್ತವ್ಯವನ್ನು ನಿರ್ವಹಿಸಿದಾಗ ಮಾತ್ರ ಸರ್ಕಾರದ ಸೌಲಭ್ಯ ಸದುಪಯೋಗವಾಗಲಿದೆ ಎಂದು ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ತಿಳಿಸಿದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಮೂಲ ಭೂತ ಸೌಕರ್ಯ ಅಭಿವೃದ್ದಿ ಯೋಜನೆಯಡಿ ಅಂದಾಜು ರೂ.೪೯.೬೯ ಲಕ್ಷ ವೆಚ್ಚದ ನೂತನ ಪಶು ಆಸ್ಪತ್ರೆ ಕಟ್ಟಡಕ್ಕೆ ಶಿಲಾನ್ಯಾಸ ಹಾಗೂ ಸಂಚಾರಿ ಪಶು ಆಸ್ಪತ್ರೆ ನೂತನ ವಾಹನ ಮೊಬೈಲ್ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರ ಗ್ರಾಮೀಣ ಜನತೆಯ ನೆಮ್ಮದಿಯ ಬದುಕಿಗಾಗಿ ಹಲವು ಯೋಜನೆಯನ್ನು ಜರಿಗೊಳಿಸಿದ್ದು, ಕೇಂದ್ರ ಸರ್ಕಾರ ಪಶುಪಾಲನಾ ಇಲಾಖೆ ಸಹಾಯವಾಣಿ ಆರಂಭಿಸಿದೆ ಜನುವಾರುಗಳಿಗೆ ಆರೋಗ್ಯ ಸಮಸ್ಯೆ ಉದ್ಭವಿಸಿದಾಗ ೧೯೬೨ಗೆ ಕರೆ ಮಾಡಿದಲ್ಲಿ ಮನೆ ಬಾಗಿಲಿನಲ್ಲಿ ತುರ್ತು ಚಿಕಿತ್ಸೆ ದೊರೆಯುವ ವಿನೂತನ ಸೇವೆ ಯನ್ನು ಆರಂಭಿಸಿದೆ ಎಂದು ತಿಳಿಸಿದ ಅವರು ಪಶುಸಖಿಯರ ಹುz ಯನ್ನು ಆರಂಭಿಸಿ ಇಲಾಖೆಯಲ್ಲಿ ಹೆಚ್ಚಿನ ಸುಧಾರಣೆಯಾಗಿದೆ ಎಂದು ತಿಳಿಸಿದರು.
ಬರಗಾಲದಿಂದ ರೈತ ವರ್ಗ ಸಂಕಷ್ಟದಲ್ಲಿದ್ದು ಜನುವಾರುಗಳಿಗೆ ಆರೋಗ್ಯ ಸಮಸ್ಯೆ ಉಂಟಾದಾಗ ಕೂಡಲೇ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡುವ ಮೂಲಕ ಸ್ಪಂದಿಸಿದಲ್ಲಿ ಇಲಾಖೆಗೆ ಕಟ್ಟಡ ಸೌಲಭ್ಯ ಕಲ್ಪಿಸಿಕೊಟ್ಟ ಸರ್ಕಾರದ ಶ್ರಮ ಸಾರ್ಥಕವಾಗಲಿದೆ ರೈತರ ಆತ್ಮಸ್ಥೈರ್ಯ ಹೆಚ್ಚಳವಾಗಲಿದೆ ಎಂದು ತಿಳಿಸಿದ ಅವರು, ಪಶು ಸಖಿಯರ ಹುz ಮಹತ್ವವಾಗಿದ್ದು ಆಶಾ ಕಾರ್ಯಕರ್ತರ ಸಮಾನ ಗೌರವ ದೊರೆಯಲಿದೆ ಎಂದರು.
ಇಲಾಖೆಯ ಉಪನಿರ್ದೇಶಕ ಡಾ.ಶಿವಯೋಗಿ ಬಿ.ಯಲಿ, ವೇದಿಕೆಯಲ್ಲಿ ಜಿ ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ. ಬಸವೇಶ ಹೂಗಾರ್, ತೀರ್ಥಹಳ್ಳಿ -ಹೊಸನಗರ ಸಹಾಯಕ ನಿರ್ದೇಶಕ ಡಾ.ನಾಗರಾಜ್, ಸ್ಥಳೀಯ ಸಹಾಯಕ ನಿರ್ದೇಶಕ ಡಾ.ರವಿಕುಮಾರ್, ಪುರಸಭಾ ಸದಸ್ಯ ರೇಣುಕಸ್ವಾಮಿ,ಪಾಲಾಕ್ಷಪ್ಪ ಮುಖಂಡ ಗುರುಮೂರ್ತಿ, ಹಾಲಪ್ಪ, ಚನ್ನವೀರಪ್ಪ, ಡಿ.ಎಲ್ ಬಸವರಾಜ್ ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸವಿತಾ ಹಾದಿಮನಿ ಪ್ರಾರ್ಥಿಸಿ, ಪಶು ವೈದ್ಯಾಧಿಕಾರಿ ಡಾ.ಲಕ್ಷ್ಮಣ್ ಸ್ವಾಗತಿಸಿ ನಿರೂಪಿಸಿದರು. ಡಾ.ನಿಂಗಪ್ಪ ವಂದಿಸಿದರು.