ನಾಳೆ ಸಂಜೆ ಖ್ಯಾತ ಗಾಯಕ ಮಲ್ಲಿಕಾರ್ಜುನ ಸಂಶಿ ಅವರ ಗಾಯನ
ಶಿವಮೆಗ್ಗ :- ಸಾಗರ ರಸ್ತೆಯ ಡಾ. ಪಂಡಿತ ಪುಟ್ಟರಾಜಕವಿ ಗವಾಯಿಗ ಳವರ ಕುರುಡು ಮಕ್ಕಳ ಸಂಗೀತ ವಿದ್ಯಾಲಯ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಆ. ೧೬ರ ನಾಳೆ ಸಂಜೆ ೬.೩೦ಕ್ಕೆ ಗಾನಲಹರಿ ೯೯ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್‍ಯಕ್ರಮ ಆಯೋಜಿಸಲಾಗಿದೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ಪಂ. ಆರ್.ಬಿ. ಸಂಗಮೇಶ್ವರ ಗವಾಯಿ ಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಉಪ ಮುಖ್ಯ ವೈದ್ಯಾಧಿಕಾರಿಗಳಾದ ಡಾ| ನಾಗೇಂದ್ರಚಾರ್, ಡಾ| ಕುಮಾರ್ ಸಾಗರ್ ಹಾಗೂ ಡಾ| ರವಿರಾಜ್ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಆಶ್ರಮದ ಅಂಧ ಮಕ್ಕಳಿಂದ ಸಂಗೀತ ಸಂಯೋಜಿತ ಪ್ರಾರ್ಥನೆ ನಡೆಯಲಿದೆ. ಶರಾವತಿ ನಗರದ ಶ್ರೀ ಲಕ್ಷ್ಮೀ ಭಜನಾ ಮಂಡಳಿ ಯಿಂದ ಭಜನಾ ಸೇವೆ ಹಾಗೂ ಗಾಜನೂರಿನ ಖ್ಯಾತ ಹಿಂದೂಸ್ತಾನಿ ಗಾಯಕರಾದ ಮಲ್ಲಿಕಾರ್ಜುನ ಸಂಶಿ ಆವರಿಂದ ಅತಿಥಿ ಗಾಯನ ನಡೆಯಲಿದೆ.
ರಾಮಣ್ಣ ಭಜಂತ್ರಿ, ವೀರಭದ್ರಯ್ಯ ಶಾಸ್ತ್ರಿ, ಆರ್. ತುಕಾರಾಮ್ ರಂಗಧೋಳ್, ವಿನಾಯಕ ಭಟ್ ಶಿವರಾಜಪ್ಪ, ಸಿದ್ದಣ್ಣ ಬಡಿಗೇರ್, ವೀರಣ್ಣ ಮಾಳೇನಹಳ್ಳಿ ಅವರು ವಿವಿಧ ವಾದ್ಯಗಳೊಂದಿಗೆ ಸಾಥ್ ನೀಡ ಲಿದ್ದಾರೆ. ಉಸ್ತಾದ್ ಹುಮಾಯೂನ್ ಹರ್ಲಾಪುರ್ ನಿರೂಪಿಸಲಿದ್ದಾರೆ.