ಚುನಾವಣೆಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಶಾಂತಿ ಸುವ್ಯವಸ್ಥೆ ಕಾಪಾಡಿ ಮತದಾನ ಮಾಡಿ: ಕಾವ್ಯರಾಣಿ

ಯಲಬುರ್ಗಾ: ಮೇ ೧೦ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಹಬ್ಬದಂತೆ ಆಚರಿಸಿ, ಮತದಾನ ನಮ್ಮ ಹಕ್ಕು ಅದಕ್ಕಾಗಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ಚುನಾವಣಾಧಿಕಾರಿ ಕಾವ್ಯಾರಾಣಿ ಅವರು ಕರೆ ನೀಡಿದರು.
ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಲಬುರ್ಗಾ ಪಟ್ಟಣದಲ್ಲಿ ಇಂಡೋ ಟಿಬೆಟ್ ಬಾರ್ಡರ್ ಪಡೆ(ಐಟಿಬಿಪಿ) ಮತ್ತು ಸ್ಥಳೀಯ ಪೊಲೀಸ್ ಪಡೆಗಳಿಂದ ಮೇ ೧೦ ರಂದು ಜರುಗುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಇಂಡೋ ಟಿಬೆಟ್ ಮಿಲಿಟರಿ ಪಡೆ ಮತ್ತು ಕುಕನೂರು, ಯಲಬುರ್ಗಾ ಹಾಗೂ ಬೇವೂರ ಪೋಲೀಸ್ ಪಡೆಗಳಿಂದ ಪಟ್ಟಣದ ಪ್ರಮುಖ ರಾಜಬೀದಿಗಳು ಹಾಗೂ ವತ್ತಗಳಲ್ಲಿ ಆಕರ್ಷಕ ಪಥ ಸಂಚಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಯಲಬುರ್ಗಾ ಪಟ್ಟಣದ ನಿವಾಸಿಗಳ ಸುಭದ್ರತೆ, ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮಿಲಿಟರಿ ತುಕಡಿಯು ಪಥಸಂಚಲನ ಮಾಡುತ್ತಿzರೆ. ದೇಶ ಸೇವೆ ಮಾಡುವ ಯೋಧರು ಇಂದು ಚುನಾವಣೆ ರಕ್ಷಣೆ ವ್ಯವಸ್ಥೆಗೆ ಬಂದಿzರೆ. ಅವರಿಗೆ ಎಲ್ಲರೂ ಗೌರವ ಸಲ್ಲಿಸಿ ಶಾಂತಿ ಕಾಪಾಡಿಕೊಳ್ಳಲು ಎಲ್ಲರೂ ಸಹಕರಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಂಡೋ ಟಿಬೆಟ್ ಬಾರ್ಡರ್ ಪಡೆ(ಐಟಿಬಿಪಿ) ಸಹಾಯಕ ಕಮಾಂಡೆಂಟ್ ರಾದ ವಿನೋದ್ ಕುಮಾರ, ಸಹಾಯಕ ಚುನಾವಣಾಧಿಕಾರಿಗಳಾದ ವಿಠಲ್ ಚೌಗಲೆ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಪಾಟೀಲ್ ಬಿರಾದಾರ್, ಉಪತಹಶೀಲ್ದಾರ್ ರಾದ ನಾಗಪ್ಪ ಸಜ್ಜನ್, ಯಲಬುರ್ಗಾ ಪೊಲೀಸ್ ವತ್ತದ ಆರಕ್ಷಕ ವತ್ತ ನಿರಿಕ್ಷಕರಾದ ವೀರಾರೆಡ್ಡಿ ಎಚ್., ಪಿಎಸ್‌ಐಗಳಾದ ರಾಕೇಶ್ ಯು, ಹುಲಿಗೇಶ್ ಓಂಕಾರ, ಶೀಲಾ ಮೂಗನಗೌಡ್ರ, ಐಇಸಿ ಸಂಯೋಜಕರು, ಪೊಲೀಸ್ ಸಿಬ್ಬಂದಿ, ತಾಲೂಕು ಪಂಚಾಯತಿ ಸಿಬ್ಬಂದಿ ಹಾಜರಿದ್ದರು.