ಮನುಷ್ಯನ ಆತ್ಮೋನ್ನತಿಗೆ ಪರಿಸರ ಪೂರಕ: ಸ್ವಾಮೀಜಿ

ಶಿವಮೊಗ್ಗ: ಪರಿಸರ ಸೃಷ್ಟಿಕರ್ತನ ಅದ್ಭುತ ಕೊಡುಗೆ ಯಾಗಿದೆ. ಮನುಷ್ಯನ ಆತ್ಮೋನ್ನತಿ ಹಾಗೂ ಆಂತರಿಕ ಪ್ರಗತಿಗೆ ಪರಿಸರ ಪೂರಕ ಹಾಗೂ ಪ್ರೇರಕವಾಗಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಪರೋಪಕಾರಂ ಕುಟುಂಬದ ವತಿಯಿಂದ ೬೯೨ನೇ ಕಾರ್ಯ ಕ್ರಮದ ಭಾಗವಾಗಿ ಜು.೩೦ರ ಭಾನುವಾರ ನಗರದ ಹೊರ ವಲಯದಲ್ಲಿರುವ ಕಲ್ಲಗಂಗೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ ಹಾಗೂ ಆಶ್ರಮದ ಆವರಣ ಸ್ವಚ್ಛತೆಯ ಸಂದರ್ಭದಲ್ಲಿ ಅವರು ಸಸಿ ನೆಟ್ಟು ಸ್ವಚ್ಛತಾ ಕಾರ್ಯಕ್ಕೆ ಮಾರ್ಗದರ್ಶನ ನೀಡಿ ಅವರು ಮಾತನಾಡಿದರು.
ಮನುಷ್ಯನಿಗೆ ಪ್ರಾಕೃತಿಕವಾಗಿ ಸಾಕಷ್ಟು ಉಪಕಾರಗಳಿವೆ. ಆಧ್ಯಾತ್ಮ ದೊಂದಿಗೆ ಪರಿಸರ ಸಂರಕ್ಷಣೆ ಸಹ ಅಗತ್ಯ. ಪ್ರಕೃತಿಯಲ್ಲಿನ ಪಂಚಭೂತಗಳಂತೆ ಮನುಷ್ಯನಿಗೆ ಭೌತಿಕ, ಮಾನಸಿಕ, ಬೌದ್ಧಿಕ, ನೈತಿಕ ಹಾಗೂ ಆಧ್ಯಾತಿಕ ಎಂಬ ಪಂಚ ಶಕ್ತಿಗಳು ಅಗತ್ಯ ಎಂದರು.
ಸಸ್ಯಗಳು ಮನುಷ್ಯನ ಭಾವನೆಗೆ ಸ್ಪಂದಿಸುತ್ತವೆ. ಸಸ್ಯದ ಭಾಗಗಳಾದ ಮೊಗ್ಗು, ಹೂವು, ಚಿಗುರು ಮನೋಸ ಉಂಟು ಮಾಡು ತ್ತವೆ. ಪ್ರಕೃತಿ ಸಂರಕ್ಷಣೆ ಭಗವಂತನ ಆರಾಧನೆಗೆ ಸಮವಾಗಿದೆ. ಪ್ರಕೃತಿಯನ್ನು ಪೂಜಿಸುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದು ತಿಳಿಸಿದರು.
ಪರೋಪಕಾರಂನ ಶ್ರೀಧರ್ ಎನ್.ಎಂ., ಲೀಲಾಬಾಯಿ ಎನ್. ಎಂ., ಅನಿಲ್ ಹೆಗಡೆ, ನಿವೃತ್ತ ಪ್ರಾಧ್ಯಾಪಕ ಡಾ. ವರದರಾಜ್, ಮೆಸ್ಕಾಂನ ನಿವೃತ್ತ ಎಇಇ ನಾಗೇಂದ್ರ ಶಿರೂರ್‌ಕರ್, ಪಾಶ್ವನಾಥ್ ಬಿ., ದುಮ್ಮಳ್ಳಿ ಡಿ.ಸಿ. ರಾಜಣ್ಣ, ನಿವೃತ್ತ ಉಪನ್ಯಾಸಕ ಪಾಂಡು ರಂಗಪ್ಪ, ದೀಪಾ ಶ್ರೀಧರ್, ಕೆ.ಎಸ್. ವೆಂಕಟೇಶ್, ಶ್ರೀಕಾಂತ್ ಆರ್., ಮಾಲಿನಿ ಕಾನಡೆ, ರೂಪಶ್ರೀ ಎಸ್., ಸತೀಶ್ ಮತ್ತಿತರರಿದ್ದರು.