ಈಶ್ವರ ವನದಲ್ಲಿ ಪರಿಸರ ದಿನಾಚರಣೆ
ಶಿವಮೊಗ್ಗ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಅಬ್ಬಲ ಗೆರೆಯ ಈಶ್ವರವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಗರದ ಸಾಂದಿಪಿನಿ ಶಾಲೆ, ವಾಸವಿ ಪಬ್ಲಿಕ್ ಸ್ಕೂಲ್ ಹಾಗೂ ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಸುಮಾರು ನಾಲ್ಕು ನೂರು ಮಕ್ಕಳು ಪಾಲ್ಗೊಂಡು ಪರಿಸರದ ಮಹತ್ವವನ್ನು ಅರಿತರು. ನವ್ಶಶ್ರೀ ನಾಗೇಶ್ ಉತ್ತಮ ಪರಿಸ ರದ ಅಗತ್ಯತೆ ಹಾಗೂ ಉತ್ತಮ ಮಳೆ ಬೆಳೆಗಳಿಗಾಗಿ ಸಂಪ್ರದಾ ಯದ ಆಚರಣೆಗಳ ಮೂಲಕ ಪೂರ್ವಜರು ಅರಣ್ಯ ರಕ್ಷಣೆಗೆ ಅಡಿಪಾಯ ಹಾಕಿ ಮಹತ್ತರ ಕೊಡುಗೆ ನೀಡಿದ್ದನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ಈಶ್ವರವನದಲ್ಲಿ ಬೆಳೆಸಲಾದ ವಿವಿಧ ಜತಿಯ ಸಸ್ಯ ಪ್ರಬೇಧಗಳು ಹಾಗೂ ಮಾನವ ನಿಗೆ ಅವುಗಳ ಉಪಯುಕ್ತತೆ ಯನ್ನು ಮನಮುಟ್ಟುವಂತೆ ಮನನ ಮಾಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿ ಸಿದ್ದ ವಾಸವಿ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಎಸ್.ಕೆ.ಶೇಷಾಚಲ ಮಾತನಾಡಿ ಈ ದಿನ ಕೇವಲ ಸಾಂಕೇತಿಕವಾಗಿ ‘ಪರಿಸರ ದಿನ’ ಆಚರಿಸುವ ಬದಲಾಗಿ ಭವಿಷ್ಯದ ಪ್ರಜೆಗಳಾದ ಮಕ್ಕಳು ಪರಿಸರದ ರಕ್ಷಣೆಯಲ್ಲಿ ತಮ್ಮ ತಮ್ಮ ಜವಾ ಬ್ದಾರಿಗಳನ್ನು ಈಗಿನಿಂದಲೇ ನಿರ್ವ ಹಿಸಲು ಪ್ರಾರಂಭಿಸಬೇಕಾದ ಅನಿ ವಾರ್ಯತೆ ಬಂದೊದಗಿದೆ. ಸಾರ್ವ ಜನಿಕ ಸ್ಥಳವಾಗಿರಲಿ ಸ್ವಂತzಗಿರಲಿ ಸ್ವಚ್ಛತೆಗೆ ಆದ್ಯತೆ ನೀಡಿ, ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಸುಂದರ ಪರಿಸರವನ್ನು ಕಾಪಾಡಿಕೊಳ್ಳಲು ತಮ್ಮದೇ ಆದ ಕೊಡುಗೆಯನ್ನು ನೀಡಲೇಬೇಕು, ಇದು ಎಲ್ಲರ ಸಾ ಮಾಜಿಕ ಜವಾಬ್ದಾರಿ ಎಂದು ತಿಳಿಸಿ ದರು.
ಇನ್ನೋರ್ವ ಅತಿಥಿ ಸಾಂದಿ ಪಿನಿ ಶಾಲೆಯ ಮುಖ್ಯಸ್ಥರಾದ ಅನಿತಾ, ಮನುಷ್ಯನ ದುರಾಸೆಗೆ ಮಿತಿಯಿಲ್ಲದಂತಾಗಿ ಪರಿಸರವನ್ನು ಇಂದು ವಿನಾಶದ ಅಂಚಿಗೆ ಕೊಂಡೊಯ್ಯುತ್ತಿzನೆ ಎಂದು ವಿಷಾಧಿಸಿದರು. ಈ ನಿಟ್ಟಿನಲ್ಲಿ ಪರಿಸರದ ಉಳಿವಿಗೆ ಮಕ್ಕಳು ತಮ್ಮ ಜವಾಬ್ದಾರಿಗಳನ್ನು ಮೆರೆಯಲು ಈ ಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಪರಿಸರದ ಉಳಿವಿಗೆ ಶ್ರಮಿ ಸುತ್ತಾ ಅಮೂಲ್ಯ ಬೆಲೆ ಬಾಳುವ ಜಗದಲ್ಲಿ ಕಾಡು ಬೆಳೆಸಿ ಈಶ್ವರ ವನದ ಹುಟ್ಟಿಗೆ ಕಾರಣರಾಗಿ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ನವ್ಯಶ್ರೀ ನಾಗೇಶ್ ರವರನ್ನು ನೆರೆದಿದ್ದ ಎಲ್ಲ ಮಕ್ಕಳ ಪರವಾಗಿ ಎಸ್.ಕೆ.ಶೇಷಾಚಲ ಸನ್ಮಾನಿಸಿದರು.
ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಉಪಪ್ರಾಂಶುಪಾಲ ರಂಗನಾಥ್ ಹಾಗೂ ಮೂರೂ ಶಾಲೆಗಳ ಶಿಕ್ಷಕ ವೃಂದದವರು ಈ ಸಂದರ್ಭದಲ್ಲಿ ಹಾಜರಿದ್ದರು. ಕೊನೆಯಲ್ಲಿ ಮಕ್ಕಳಿಗೆ ಹಾಗೂ ಹಾಜರಿದ್ದ ಶಿಕ್ಷಕ ವೃಂದಕ್ಕೆ ಪರಿಸರ ರಕ್ಷಣೆಯ ಪ್ರತಿe ವಿಧಿಯನ್ನು ನಾಗರಾಜ ಶೆಟ್ಟರ್ ಬೋಧಿಸಿದರು.