ಇಂಧನ ಸಂರಕ್ಷಣೆ ಮಾನವ ಅಸ್ತಿತ್ವದ ಅತ್ಯಗತ್ಯ ಅಂಶವಾಗಿದೆ : ಅನಿಲ್

ರಾಣೇಬೆನ್ನೂರು : ಶ್ರೀ ತರಳ ಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ಶನಿವಾರ ಬೆಳಗ್ಗೆ ಎಲೆಕ್ಟ್ರಿಕಲ್ , ಎಲೆಕ್ಟ್ರಾನಿಕ್ಸ್ , ಕಂಪ್ಯೂಟರ್. ಸೈನ್ಸ್ ವಿಭಾಗಗಳ ಆಶ್ರಯದಲ್ಲಿ ಏರ್ಪ ಡಿಸಿದ್ದ ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆಯ ಜಗೃತಿ ಕಾರ್‍ಯ ಕ್ರಮದ ಅಂಗವಾಗಿ ಜಗೃತಿ ಕಾರ್‍ಯ ಕ್ರಮ , ಕ್ವಿಜ್, ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಈ ಕಾರ್‍ಯಕ್ರಮವನ್ನು ರಚನಾ ಎನರ್ಕೇರ್ ಚೇರ್ಮನ್ ಅನಿಲ್ ಕುಮಾರ್ ನಾಡಿಗೇರ ಉದ್ಘಾಟಿಸಿ ಇಂಧನದ ಬಳಕೆಯನ್ನು ಮಿತಿಗೊ ಳಿಸಲು ನಾವು ತೆಗೆದುಕೊಳ್ಳುವ ಪ್ರಯತ್ನಗಳು ಮತ್ತು ಕ್ರಮಗಳನ್ನು ಇಂಧನ ಸಂರಕ್ಷಣೆ ಎಂದು ಕರೆಯ ಲಾಗುತ್ತದೆ. ನವೀಕರಿಸಬಹುದಾದ ಶಕ್ತಿಯ ಮೂಲಗಳನ್ನು ಪ್ರಕೃತಿ ಯಲ್ಲಿ ಪುನಃ ತುಂಬಿಸಬಹುದು, ಇಂಧನ ಸಂರಕ್ಷಣೆ ಮಾನವ ಅಸ್ತಿತ್ವದ ಅತ್ಯಗತ್ಯ ಅಂಶವಾಗಿದೆ. ಇಂಧನವನ್ನು ಉಳಿಸದೆ, ಭವಿಷ್ಯ ದಲ್ಲಿ ಬದುಕಲು ಯಾವುದೇ ಮಾರ್ಗವಿಲ್ಲ. ಉಳಿವಿಗಾಗಿ ಇಂಧ ನದ ಸಂರಕ್ಷಣೆ ಅತ್ಯಗತ್ಯ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ರಾಜೀವ್ ಪಿ ನಾಡಿಗ್ , ದಯಾ ನಂದ ವೇದಿಕೆಯಲ್ಲಿ ಉಪಸ್ಥಿತರಿ ದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಬಿ. ಶಿವಕುಮಾರರವರು ಸಂಕ್ಷಿಪ್ತವಾಗಿ ಇಂಧನದ ಸಂರಕ್ಷಣೆ ಮತ್ತು ಇಂಧ ನದ ದಕ್ಷತೆಯ ಬಗ್ಗೆ ತಿಳಿಸಿದರು.
ಡೀನ್ ಅಕ್ಯಾಡೆಮಿಕ್ ಡಾ.ಎಸ್.ಎಫ್. ಕೊಡದ್, ಪ್ರೊ. ಸಿ. ಎಂ. ಪರಮೇಶ್ವರಪ್ಪ , ಡಾ. ಬಿ. ಮಹೇಶ್ವರಪ್ಪ ಉಪಸ್ಥಿತರಿದ್ದರು.
ಪ್ರೊ. ಸಿ. ಎಂ. ಶ್ವೇತಾ ಸ್ವಾಗತಿಸಿದರು. ಪ್ರೊ. ಸಂತೋಷ್ ರಾಯ್ಕರ್ ವಂದಿಸಿದರು. ಪ್ರೊ. ಭಾವನಾ ಎಸ್ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.