ವಿದ್ಯುತ್ ಅವಘಡ :ಮನೆ ಸಂಪೂರ್ಣ ಅಗ್ನಿಗಾಹುತಿ

ಹೊನ್ನಾಳಿ: ವಿದ್ಯುತ್ ಅವಘಡ ದಿಂದ ಸೊರಟೂರು ಗ್ರಾಮದ ಕಡೆಮನೆ ದುರ್ಗಪ್ಪ ಅವರ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು ಮಾಹಿತಿ ತಿಳಿದ ತಕ್ಷಣ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಡಿ.ಎಸ್. ಸುರೇಂದ್ರಗೌಡ ಸ್ಥಳಕ್ಕೆ ದೌಡಾಯಿಸಿ ದುರ್ಗಪ್ಪ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿ ಧನಸಹಾಯ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿ ಈ ಬಗ್ಗೆ ತುರ್ತು ಕ್ರಮ ಜರುಗಿಸಬೇಕೆಂದು ಸೂಚಿಸಿದರು.
ಬೆಳಿಗ್ಗಿನ ಜವ ಸಂಭವಿಸಿದ ಅಗ್ನಿ ಅವಘಡದಲ್ಲಿ ಮನೆಯಲ್ಲಿಟ್ಟಿದ್ದ ೪ ತೊಲ ಬಂಗಾರ, ನಗದು ಸೇರಿ ದಂತೆ ಮನೆಯಲ್ಲಿದ್ದ ಎ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿದೆ ನಮಗೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವಂತೆ ದುರ್ಗಪ್ಪನವರ ಕುಟುಂಬಸ್ಥರು ಡಿ.ಎಸ್.ಸುರೇಂದ್ರಗೌಡ ಅವರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸೊರಟೂರು ಗ್ರಾಮದ ಕಾಂಗ್ರೆಸ್ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.