ಜಿಲ್ಲೆಯಲ್ಲಿ ಇನ್ನೂ ಏರಿಕೆ ಕಾಣದ ಚುನಾವಣಾ ಕಾವು….

ಶಿವಮೊಗ್ಗ: ವಿಧಾನಸಭೆ ಚುನಾವಣೆ ಇನ್ನೇನು ಸನಿಹದಲ್ಲೇ ಇದೆ. ಆದರೆ, ಎಲ್ಲಾ ಪಕ್ಷಗಳು ಕೂಡ ಅಭ್ಯರ್ಥಿಗಳ ಅಧಿಕೃತ ಘೋಷಣೆ ಇಲ್ಲದೇ ಶಿವಮೊಗ್ಗ ದಲ್ಲಿ ಚುನಾವಣೆಯ ಕಾವು ಕಾಣಿಸಿಕೊಳ್ಳುತ್ತಿಲ್ಲ. ಜಿಲ್ಲೆಯನ್ನೇ ತೆಗೆದುಕೊಂಡರೆ ಕಾಂಗ್ರೆಸ್ ಮಾತ್ರ ೪ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿ ಇನ್ನೂ ಅಧಿಕೃತ ವಾಗಿ ಪಟ್ಟಿ ಬಿಡುಗಡೆ ಮಾಡಿಲ್ಲ. ಇನ್ನುಳಿದಂತೆ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಮಾತ್ರ ಅಧಿಕೃತವಾಗಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿದೆ. ಆಪ್ ನಿಂದ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿ ಗಳನ್ನು ಘೋಷಿಸಲಾಗಿದೆ. ಮುಖ್ಯ ವಾಗಿ ಶಿವಮೊಗ್ಗದಲ್ಲಿ ಯಾವ ಪಕ್ಷಗಳು ಕೂಡ ಅಭ್ಯರ್ಥಿಗಳನ್ನು ಘೋಷಿಸಿಲ್ಲ.
ಹಾಗಾಗಿ ಜಿಲ್ಲೆಯಲ್ಲಿ ಚುನಾ ವಣೆಯ ಕಾವು ಇನ್ನೂ ಆರಂಭ ವಾಗಿಲ್ಲ. ಆದರೆ, ಅಭ್ಯರ್ಥಿಗಳ ಆಯ್ಕೆಯ ಕಾವು ಮಾತ್ರ ಏರುತ್ತಿದೆ. ಅಂತೆ ಕಂತೆಗಳು ಸಂತೆಗಳಲ್ಲಿ ಓಡಾಡುತ್ತಿವೆ. ಜೊತೆಗೆ ಬಂಡಾ ಯದ ಬಿಸಿ ಎಲ್ಲಾ ಪಕ್ಷಗಳನ್ನು ಕಾಡುತ್ತಿದೆ. ಮುಖ್ಯವಾಗಿ ಶಿವಮೊಗ್ಗದಲ್ಲಿ ಒಂದಿಷ್ಟು ಗೊಂದ ಲಗಳಿವೆ. ಹಾಗೆಯೇ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಕಾಂಗ್ರೆಸ್ ಆಗಲಿ, ಬಿಜೆಪಿ ಆಗಲಿ ಅಭ್ಯರ್ಥಿ ಯಾರೆಂದು ತಿಳಿಸುತ್ತಿಲ್ಲ.
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಆಯನೂರು ಮಂಜುನಾಥ್ ಒಂದು ರೀತಿಯಲ್ಲಿ ಹವಾ ಸೃಷ್ಠಿಸಿ ದ್ದಾರೆ. ಆದರೆ, ಈ ಹವಾಕ್ಕೆ ಬಿಜೆಪಿ ಬಗ್ಗಿದಂತೆ ಕಾಣುತ್ತಿಲ್ಲ. ಆಯನೂರು ಮಂಜನಾಥ್ ಅವರ ಯಾವ ಆರೋಪಗಳನ್ನು ಕೂಡ ಬಿಜೆಪಿ ಗಂಭೀರವಾಗಿ ತೆಗೆದುಕೊ ಳ್ಳುತ್ತಿಲ್ಲ. ಜೊತೆಗೆ ಶಿಕಾರಿಪುರದಲ್ಲಿ ಮತ್ತು ಶಿವಮೊಗ್ಗ ಗ್ರಾಮಾಂತರ ದಲ್ಲಿ ಚುನಾವಣೆಯ ಒಳ ಒಪ್ಪಂದವಿದೆ ಎಂಬ ಮಾತುಗಳು ಕೇಳಿಬರತೊ ಡಗಿವೆ. ಮುಖ್ಯವಾಗಿ ಜೆಡಿಎಸ್ ಶಿಕಾರಿಪುರ ಕ್ಷೇತ್ರವನ್ನು ಗುರಿಯಾಗಿಟ್ಟು ಕೊಂಡು ಇಲ್ಲಿ ಒಳ ಒಪ್ಪಂದ ಇದೆ ಎಂದು ಆರೋಪಿ ಸುತ್ತಿದೆ.
ಎಲ್ಲಾ ಪಕ್ಷಗಳಲ್ಲೂ ಹೊರಗಿನ ವರಿಗೆ ಮಣೆ ಹಾಕುತ್ತಾರೆ ಎಂಬ ಭೀತಿ ಇದೆ. ಶಿಕಾರಿಪುರ, ಶಿವ ಮೊಗ್ಗ ಗ್ರಾಮಾಂತರ, ಶಿವಮೊಗ್ಗ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದಲ್ಲಿ ದುಡಿದವರಿಗೆ ಟಿಕೆಟ್ ಸಿಗಲಿಕ್ಕಿಲ್ಲ. ಹೊರಗಿನವರನ್ನು ತಂದು ಇಲ್ಲಿ ಸೀಟು ಕೊಟ್ಟರೆ ಅವರು ಕ್ಷೇತ್ರವನ್ನು ಪರಿಚಯ ಮಾಡಿಕೊಳ್ಳುವುದ ರೊಳಗೆ ಚುನಾವಣೆಯೇ ಮುಗಿ ದು ಹೋಗಿರುತ್ತದೆ. ಹೀಗಾಗಿ ಆಕಾಂಕ್ಷಿಗಳೆಲ್ಲರೂ, ಎಲ್ಲಾ ಪಕ್ಷದವರೂ ಒಂದು ರೀತಿಯಲ್ಲಿ ಹೈಕಮಾಂಡ್ ಅಥವಾ ವರಿಷ್ಠರ ಕಡೆ ನೋಡು ವಂತಾಗಿದೆ. ಬಿಜೆಪಿಯ ಕೋರ್ ಕಮಿಟಿ ಸಭೆ ಈಗಾಗಲೇ ನಡೆದಿದ್ದು, ಸಂಭ ವನೀಯ ಅಭ್ಯರ್ಥಿಗಳ ಹೆಸರು ಹರಿದಾಡುತ್ತಿವೆ. ಜೊತೆಗೆ ನಕಲಿ ಪಟ್ಟಿಯೂ ಹರಿದಾಡುತ್ತಿದೆ. ಇಷ್ಟರೊಳಗೆ ಎಲ್ಲಾ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪ್ರಚಾರ ಆರಂಭಿಸಬೇಕಿತ್ತು.
ಘೋಷಣೆಯಾದ ಅಭ್ಯರ್ಥಿ ಗಳು ಕೂಡ ಪ್ರಚಾರವನ್ನು ತೀವ್ರ ಗತಿಯಲ್ಲಿ ಮಾಡುತ್ತಿಲ್ಲ. ಎದು ರಾಳಿ ಅಭ್ಯರ್ಥಿ ಯಾರು ಎಂಬ ಕುತೂಹಲದಲ್ಲಿ ಅವರಿದ್ದಂತೆ ಕಾಣುತ್ತದೆ. ಕೆಲವರಂತೂ ಇನ್ನೂ ದೆಹಲಿ, (೩ನೇ ಪುಟಕ್ಕೆ)