ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ: ಸಿರಿಗಾರ್
ಹೊನ್ನಾಳಿ: ಜಗತ್ತು ಎ ಕ್ಷೇತ್ರ ಗಳಲ್ಲೂ ಬದಲಾವಣೆ ಹೊಂದಿದೆ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಬದಲಾವಣೆ ಹೊಂದಿಲ್ಲ. ಪೋದಾರ್ ಶಿಕ್ಷಣ ಸಂಸ್ಥೆಗಳು ಈಗಿನ ಪೀಳಿಗೆಗೆ ತಕ್ಕಂತೆ ಶಿಕ್ಷಣ ಕಲಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದು ಪೋಷಕರು ಸದುಪಯೋಗಪಡಿಸಿಕೊಳ್ಳುವಂತೆ ಶಿವಮೊಗ್ಗದ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್‌ನ ಪ್ರಾಂಶುಪಾಲ ಸುಕೇಶ್ ಸಿರಿಗಾರ್ ಕರೆ ನೀಡಿದರು.
ತಾಲ್ಲೂಕಿನ ಕಮ್ಮಾರಘಟ್ಟೆ ಗ್ರಾಮದ ಬಳಿ ನೂತನವಾಗಿ ಪ್ರಾರಂಭವಾದ ಪೋದಾರ್ ಸ್ಕೂಲ್‌ನ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ನಾವೆಲ್ಲರೂ ೨೦ನೇ ಶತಮಾನದಲ್ಲಿ ಶಾಲಾ- ಕಾಲೇಜು ಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದು ನಮ್ಮ ಮುಂದಿನ ಪೀಳಿಗೆಯು ೨೧ನೇ ಶತಮಾನದಲ್ಲಿ ಕಲಿಯುತ್ತಿದೆ ಬದಲಾದ ಕಾಲಘಟ್ಟದಲ್ಲಿ ಮಕ್ಕಳ ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯತ್ತಿನ ಸ್ಪರ್ಧಾತ್ಮಕ ಯುಗಕ್ಕೆ ನಿಮ್ಮ ಮಕ್ಕಳನ್ನು ಅಣಿಗೊಳಿಸುವ ಪ್ರಯತ್ನವನ್ನು ಪೋದಾರ್ ಲರ್ನ್ ಸ್ಕೂಲ್ ಮಾಡುತ್ತಿದೆ ಎಂದು ವಿವರಿಸಿದರು.
ನೂತನವಾಗಿ ಪ್ರಾರಂಭವಾದ ಪೋದಾರ್ ಲರ್ನ್ ಸ್ಕೂಲ್ ಕಮ್ಮಾರಘಟ್ಟೆಯ ಪ್ರಾಂಶುಪಾಲ ತಿಪ್ಪೇಸ್ವಾಮಿ ನಾಯಕ್ ಮಾತನಾಡಿ ದೆಹಲಿ, ಗುಜರಾತ್, ಮುಂಬೈ, ಬೆಂಗಳೂರು ಮಾದರಿಯ ಶಿಕ್ಷಣ ವನ್ನು ಈ ಭಾಗದ ವಿದ್ಯಾರ್ಥಿ ಗಳಿಗೂ ಕಲಿಸುವ ವ್ಯವಸ್ಥೆ ಮಾಡಲಾ ಗುವುದು ಎಂದು ತಿಳಿಸಿದರು.
ಪ್ರತೀ ವಾರಕ್ಕೊಮ್ಮ ಶಿಕ್ಷಕರ-ಪೋಷಕರ ಸಭೆಗಳನ್ನು ಆಯೋಜಿಸಲು ತೀರ್ಮಾನಿಸಿದ್ದು ತಮ್ಮ ಮಕ್ಕಳ ಕಲಿಕೆಗೆ ಸಂಬಂzs ಪಟ್ಟಂತೆ ಪೋಷಕರು ಈ ಸಭೆಗಳಿಗೆ ಕಡ್ಡಾಯವಾಗಿ ಭಾಗವಹಿಸ ಬೇಕೆಂದು ವಿನಂತಿಸಿದರು.
ರಾಣೆಬೆನ್ನೂರಿನ ಪೋದಾರ್ ಲರ್ನ್ ಸ್ಕೂಲ್‌ನ ಪ್ರಾಂಶುಪಾಲ ರೂಪೇಶ್ ಮಾತನಾಡಿ ಮಗುವು ಶಿಕ್ಷಣವನ್ನು ಸಂತೋಷದಿಂದ ಕಲಿತರೆ ದೀರ್ಘಾವಧಿ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಿದೆ ಎಂದ ಅವರು, ಎಂತಹದೇ ಕಠಿಣ ಸಂದರ್ಭಗಳಲ್ಲೂ ಆತ್ಮಹತ್ಯೆ ಯಂತಹ ದುಡುಕಿನ ಕೆಲಸಕ್ಕೆ ಮುಂದಾಗದೇ ಆತ್ಮಸ್ಥೈರ್ಯದಿಂದ ಪರಿಸ್ಥಿತಿಗಳನ್ನು ನಿಭಾಯಿಸಲು ಸಮರ್ಥರಾಗುತ್ತಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಯೋಜಕಿ ಉಮಾಮಹೇಶ್ವರಿ, ನಿರ್ದೇಶಕರಾದ ನವೀನ್, ಸುನಿಲ್, ವಸಂತ್, ಪೋದಾರ್ ಜಂಬೋ ಕಿಡ್ಸ್‌ನ ಮುಖ್ಯ ಶಿಕ್ಷಕಿ ಲೀನಾ, ಶಿಕ್ಷಕರಾದ ಧನಂಜಯ್, ರಾಜೇಶ್, ಮಾರುತಿ, ಶಿಕ್ಷಕಿಯರಾದ ರಶ್ಮಿ, ನೇತ್ರಾ, ಜ್ಯೋತಿ, ಮೆಂಟರ್ ಅಶೊಕ್, ಮಾರ್ಕೇಟಿಂಗ್ ಮ್ಯಾನೇಜರ್ ಕೀರ್ತಿ, ಅಕೌಟೆಂಟ್ ಮ್ಯಾನೇಜರ್ ಯಶವಂತ್ ಮತ್ತಿತರರಿದ್ದರು.