ಸಣ್ಣಪುಟ್ಟ ಸಮಾಜಗಳು ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ ಅತ್ಯಗತ್ಯ

ಸಾಗರ : ಸಣ್ಣಪುಟ್ಟ ಸಮಾಜ ಗಳು ಮುಖ್ಯವಾಹಿನಿಗೆ ಬರಬೇಕಾ ದರೆ ಶಿಕ್ಷಣ ಅತ್ಯಾಗತ್ಯ. ಮಕ್ಕಳು ಸಿಗುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಅಂಕ ಗಳಿಸುವ ಮೂಲಕ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಮೊಗ ವೀರ ಸಮಾಜದ ಉಡುಪಿ ಜಿ ಧ್ಯಕ್ಷ ಜಯ ಸಿ. ಕೋಟ್ಯನ್ ತಿಳಿಸಿ ದರು.
ಇಲ್ಲಿನ ಮಾಧವ ಮಂಗಲ ಸಭಾಭವನದಲ್ಲಿ ಭಾನುವಾರ ತಾಲ್ಲೂಕು ಮೊಗವೀರ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ, ಹಿರಿಯರಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆಯನ್ನು ನೆರವೇರಿಸಿ ಅವರು ಮಾತನಾ ಡುತ್ತಿದ್ದರು.
ನಿಮ್ಮ ಶೈಕ್ಷಣಿಕ ಚಟುವಟಿಕೆ ಮುಂದುವರೆಸಲು ಪೂರಕವಾದ ಸಹಕಾರವನ್ನು ಸಮಾಜ ನೀಡುತ್ತದೆ. ನೀವು ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಕಳೆದ ಹದಿನೈದು ವರ್ಷಗಳಿಂದ ಡಾ. ಜಿ.ಶಂಕರ್ ಅವರ ಸಾರಥ್ಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ತಾಲ್ಲೂಕಿನಲ್ಲಿ ಸಮಾಜದ ವತಿಯಿಂದ ವಿವಿಧ ಸಾಮಾಜಿಕ ಕೆಲಸಗಳನ್ನು ನಿರಂತವಾಗಿ ನಡೆಸ ಲಾಗುತ್ತಿದೆ. ಸಮಾಜದಿಂದ ಉಪ ಕೃತರಾದವರು ಅದರ ಋಣವನ್ನು ತೀರಿಸುವ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಡಾ. ಜಿ. ಶಂಕರ್ ನೇತೃತ್ವದಲ್ಲಿ ಇನ್ನಷ್ಟು ಸಾಮಾಜಿಕ ಕೆಲಸ ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಸಮಾಜದ ಅಧ್ಯಕ್ಷ ಆರ್. ಎಸ್.ಚಂದ್ರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರಸಭೆ ಸದಸ್ಯ ಶಂಕರ ಅಳ್ವಿಕೋಡಿ, ಪ್ರಮುಖ ರಾದ ನಾಗರಾಜ್, ರಘುರಾಮ್, ಸುರೇಶ್, ಸೀನಣ್ಣ, ಶ್ರೀನಿವಾಸ್, ಸತೀಶ್ ಕೆ., ರಾಮಪ್ಪ, ವಾಸು ದೇವ, ರಾಮು, ರಾಜಣ್ಣ ಇನ್ನಿತರ ರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಎಸ್. ಎಸ್.ಎಲ್.ಸಿ., ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿ ಸಲಾಯಿತು. ಪ್ರತಿಭಾವಂತ ವಿದ್ಯಾ ರ್ಥಿಗಳಿಗೆ ನೋಟ್‌ಪುಸ್ತಕ, ವಿದ್ಯಾ ರ್ಥಿ ವೇತನ ವಿತರಿಸಿ, ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು.